ಮಡಿಕೇರಿ, ಆ. ೨೨: ಮೂರ್ನಾಡು ಲಯನ್ಸ್ ಕ್ಲಬ್ ಸ್ವಾತಂತ್ರö್ಯ ದಿನಾಚರಣೆಯ ಸಂದರ್ಭದಲ್ಲಿ ಲಕ್ಷö್ಯ- ಅಂತರ ಶಾಲೆ ಮತ್ತು ಅಂತರ ಕಾಲೇಜು ಸ್ಪರ್ಧೆ ಮೂರ್ನಾಡು ಎಜುಕೇಶನ್ ಸೊಸೈಟಿ ಸಭಾಂಗಣ ದಲ್ಲಿ ನಡೆಯಿತು. ಮೂರ್ನಾಡಿನ ವಿವಿಧ ಸಂಸ್ಥೆಗಳಿAದ ೭ನೇ ತರಗತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳವರೆಗೆ ಹಾಗೂ ಸಾರ್ವಜನಿಕರು ಭಾಷಣ, ದೇಶಭಕ್ತಿ ಗಾಯನ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಬಿಂದು ಗಣಪತಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಒಗ್ಗೂಡಲು ಮತ್ತು ಸದೃಢ ಸಮಾಜವನ್ನು ನಿರ್ಮಿಸಲು ಈ ರೀತಿ ಕಾರ್ಯಕ್ರಮ ಪೂರಕ ಎಂದರು.
ಭವಿಷ್ಯದ ದೃಷ್ಟಿಯನ್ನು ಇಟ್ಟು ಕೊಂಡು ಸ್ಪರ್ಧೆ ಆಯೋಜಿಸಲಾಗಿದೆ ಮತ್ತು ಯುವ ಪೀಳಿಗೆಯಿಂದ ಮಾತ್ರ ಈ ಗುರಿಯನ್ನು ಪೂರೈಸಲು ಸಾಧ್ಯ ಎಂದು ಅಭಿಪ್ರಾಯಿಸಿದರು. 'ಮೂರ್ನಾಡನ್ನು ಕಸಮುಕ್ತಗೊಳಿಸಲು ನನ್ನ ಯೋಜನೆಗಳು’, ‘೨೦೪೭ ಭಾರತಕ್ಕಾಗಿ ನನ್ನ ದೃಷ್ಟಿ’, ‘ಭಾರತದಲ್ಲಿ ಇಂದು ಲಿಂಗ ಸಮಾನತೆ ಇದೆಯೇ?’, ‘ಕೊಡಗು ಜಿಲ್ಲಾಧಿಕಾರಿಯಾದರೆ ನಾನು ಕೈಗೊಳ್ಳುವ ಕ್ರಮಗಳು’ ಹೀಗೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ವಿಚಾರ ಮಂಡಿಸಿದರು. ೧೨೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಬಾರಿಯಂಡ ಕಾವ್ಯ ಪೆಮ್ಮಯ್ಯ, ಮುಂಡAಡ ಶಿಲ್ಪಾ ಭಾಗ್ಯೇಶ್, ಸೌಮ್ಯ ಬಿ.ಜಿ., ರಜನಿ ಎ.ಜಿ., ರೇಖಾ ಉಲ್ಲಾಸ್, ಪಳೆಯಂಡ ಕಾವ್ಯ ದೇವಯ್ಯ ಮತ್ತು ಮೇವಡ ಕಾವೇರಿ ಸೋಮಯ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ.ಎಸ್.ಚೆಂಗಪ್ಪ, ಖಜಾಂಚಿ ಪ್ರಕಾಶ್ ಕಾವೇರಪ್ಪ ಸೇರಿದಂತೆ ಇನ್ನಿತರರು ಇದ್ದರು.