ಪೊನ್ನಂಪೇಟೆ, ಆ. ೨೨: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪಟ್ಟಗೇರಿ ಅಂಬಲ ಒಕ್ಕೂಟದ ವತಿಯಿಂದ ಬೇಗೂರಿನ ಬೆಂಜAಡ ಪ್ರೇಮ ಶಂಕರು ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ, ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಪೊನ್ನಂಪೇಟೆ ಎಪಿಸಿಎಂಎಸ್‌ನ ಅಧ್ಯಕ್ಷ ಮುದ್ದಿಯಡ ಗಣಪತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಣ್ಣು ಹಾಗೂ ಪ್ರಕೃತಿಯನ್ನು ರಕ್ಷಣೆ ಮಾಡುತ್ತಾ, ಹಳೆಯ ಪದ್ಧತಿಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತ ಮತ್ರಂಡ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರ ಮಲ್ಲಂಡ ರಾಜ ಸುಬ್ಬಯ್ಯ ಇದ್ದರು.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಸಿದ್ದಪಡಿಸಲಾಗಿದ್ದ ಗದ್ದೆಯಲ್ಲಿ ನೀರು ಬತ್ತಿ ಹೋಗಿತ್ತು. ಆದುದರಿಂದ ಸಮೀಪದ ಕೊಳವೆ ಬಾವಿಯಿಂದ ನೀರು ಹಾಯಿಸಿ ಕೆಸರು ಗದ್ದೆ ಕ್ರೀಡೆ ನಡೆಸಲಾಯಿತು.

ಕೆಸರು ಗದ್ದೆ ಫುಟ್ಬಾಲ್‌ನಲ್ಲಿ ಪ್ರವೀಣ್ ನೇತೃತ್ವದ ತಂಡ ಪ್ರಥಮ, ಪೊನ್ನಪ್ಪ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮಹಾವಿಷ್ಣು ತಂಡ ಪ್ರಥಮ, ತನು ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ವಿಭಾಗದಲ್ಲಿ ಭವ್ಯ ನೇತೃತ್ವದ ತಂಡ ಪ್ರಥಮ ಸ್ಥಾನ, ಲಿಖಿತ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕೆಸರುಗದ್ದೆ ಓಟದ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಲ್ಲಂಡ ಪೊನ್ನಪ್ಪ ಪ್ರಥಮ, ಮಂಡೆಚAಡ ದೀಪಕ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನವ್ಯ ಪ್ರಥಮ, ವಿಷ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.

ತೀರ್ಥಕ್ಷೇತ್ರ ದರ್ಶನ ಸ್ಪರ್ಧೆಯಲ್ಲಿ ಲಿಖಿತ ಪ್ರಥಮ, ಮತ್ರಂಡ ರಾಣಿ ದ್ವಿತೀಯ, ವಿಷದ ಚೆಂಡು ಸ್ಪರ್ಧೆ ಪುರುಷರ ವಿಭಾಗದಲ್ಲಿ ದೀಪಕ್ ಪ್ರಥಮ, ಧನೀಶ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ದೀನ ಪ್ರಥಮ, ಚೈತ್ರ ದ್ವಿತೀಯ ಸ್ಥಾನ ಪಡೆದುಕೊಂಡರು.

ಬೇಗೂರು ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಬಾಲಕರ ವಿಭಾಗದಲ್ಲಿ ಅರ್ಜುನ ಪ್ರಥಮ, ವಿಷ್ಣು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಅನಿತ ಪ್ರಥಮ, ಕಾವೇರಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಬೇಗೂರು ಪಟ್ಟಗೇರಿ ಅಂಬಲ ಒಕ್ಕೂಟದ ಸದಸ್ಯರಿಗಾಗಿ ನಡೆದ ವಿಷದಚೆಂಡು ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವೀಟು ಪ್ರಥಮ, ವಾಸು ಕುಶಾಲಪ್ಪ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಬೆಂಜAಡ ರಶ್ಮಿ ಪ್ರಥಮ, ಬೈರಂಡ ಭವ್ಯ ದ್ವಿತೀಯ, ತೀರ್ಥಕ್ಷೇತ್ರ ಸ್ಪರ್ಧೆ ಮಹಿಳೆಯರ ವಿಭಾಗದಲ್ಲಿ ಬೆಂಜAಡ ಬಿಂಬಿಕ ಪ್ರಥಮ, ಮತ್ರಂಡ ಮುತ್ತಮ್ಮ ದ್ವಿತೀಯ, ಪುರುಷರ ವಿಭಾಗದಲ್ಲಿ ವಿಜಯ ಪ್ರಥಮ, ನಾಚಪ್ಪ ದ್ವಿತೀಯ, ಯುವಕರ ಓಟದ ಸ್ಪರ್ಧೆಯಲ್ಲಿ ಲೂಥನ್ ಸೋಮಯ್ಯ ಪ್ರಥಮ, ಭುವನ್ ಪೊನ್ನಣ್ಣ ದ್ವಿತೀಯ, ಯುವತಿಯರ ವಿಭಾಗದಲ್ಲಿ ಗಾನವಿ ಪ್ರಥಮ, ಯಶಿಕ ದ್ವಿತೀಯ ಸ್ಥಾನ ಪಡೆದುಕೊಂಡರು.

ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಬೇಗೂರು ಪಟ್ಟಗೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಚೋಡುಮಾಡ ಅಪ್ಪು ಸುಬ್ಬಯ್ಯ, ಉಪಾಧ್ಯಕ್ಷ ಕೇಚಂಡ ತರುಣ್ ತಮ್ಮಯ್ಯ, ಸಹ ಕಾರ್ಯದರ್ಶಿ ಮತ್ರಂಡ ಉತ್ತಪ್ಪ, ಸಲಹೆಗಾರರಾದ ಮತ್ರಂಡ ತಿಮ್ಮಯ್ಯ ಗಣೇಶ್, ಪಟ್ಟಗೇರಿ ಅಂಬಲ ಒಕ್ಕೂಟದ ಸದಸ್ಯರು, ಬೇಗೂರು ಸರ್ಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಬೇಗೂರು ಗ್ರಾಮಸ್ಥರು ಇದ್ದರು. ತೀರ್ಪುಗಾರರಾಗಿ ಮತ್ರಂಡ ಬೋಪಣ್ಣ ಕಾರ್ಯನಿರ್ವಹಿಸಿದರು. ಶಿಕ್ಷಕಿ ಅನಿತ ಕುಮಾರಿ ವೀಕ್ಷಕ ವಿವರಣೆ ನೀಡಿದರು.