ಚೆಯ್ಯAಡಾಣೆ: ನಾಪೋಕ್ಲುವಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಬೋಯಿದರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಬ್ಯಾಂಕಿನ ಸಿಬ್ಬಂದಿಗಳಾದ ಆಂಜನೇಯ, ಅಜಿತ್, ಸುದೀಪ್, ಕನ್ನಬಾಬು, ದೇವಪ್ಪ, ಸುಧಾ, ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜೀವನ್, ಆಟೋ ಚಾಲಕರು ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.
ಮಡಿಕೇರಿ : ಇಲ್ಲಿನ ಇಂದಿರಾ ನಗರದ ಜ್ಯೋತಿ ಯುವಕ ಸಂಘದ ವತಿಯಿಂದ ೭೭ ನೇ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಊರಿನ ಹಿರಿಯರಾದ ಸಾಜೀದ ಅವರು ನೇರವೇರಿಸಿದರು.
ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಎಲ್ಲರಿಗೂ ಸ್ವಾತಂತ್ರ‍್ಯ ದಿನದ ಶುಭಾಶಯ ತಿಳಿಸಿದ್ದರು. ಸ್ವಾತಂತ್ರ‍್ಯ ದಿನದ ಪ್ರಯುಕ್ತ ಗಿಡವನ್ನು ನೇಡಲಾಯಿತು.. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್, ಮಾಜಿ ಅಧ್ಯಕ್ಷರಾದ ಜಯಕುಮಾರ್, ಸೋಮಶೇಖರ್, ಮನೋಜ್, ಅನೀಸ್, ಉಪಾಧ್ಯಕ್ಷ ದೀಪಕ್ ಹಾಗೂ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಮಕ್ಕಳು ನೆರೆದಿದ್ದರು.
ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ರಾಷ್ಟçಧ್ವಜವನ್ನು ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ನೆರವೇರಿಸಿದರು. ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುAಡ ಮತ್ತು ನಿರ್ದೇಶಕರುಗಳು ಇದ್ದರು.
ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ರಾಷ್ಟçಧ್ವಜವನ್ನು ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ನೆರವೇರಿಸಿದರು. ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುAಡ ಮತ್ತು ನಿರ್ದೇಶಕರುಗಳು ಇದ್ದರು.
ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಧ್ವ್ವಜಾರೋಹಣ ಸಂದರ್ಭ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಖಜಾಂಚಿ ಕೋಟೇರ ಯು.ತಮ್ಮಯ್ಯ , ನಿರ್ದೇಶಕರಾದ ಬಿ.ಎಂ.ಸುರೇಶ್, ಸಿ.ಎಂ.ಸುರೇಶ್ ನಾಣಯ್ಯ, ಎಂ.ಜಿ.ಪೂಣಚ್ಚ, ಕೆ.ಮೊಣ್ಣಪ್ಪ, ಎಂ.ದೇವಯ್ಯ, ಬಿ.ಆರ್.ಗಣೇಶ್, ಎ.ಎಂ.ಜೋಯಪ್ಪ, ಬಿ.ಗಣೇಶ್ ಬಿದ್ದಪ್ಪ, ಕಚೇರಿ ಕಾರ್ಯದರ್ಶಿ ಎಂ.ರಾಧ ಮತ್ತಿತರರು ಹಾಜರಿದ್ದರು.
ಚೆಪ್ಪಂಡಡಿ: ಸಮೀಪದ ಕೊಳಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೊö್ಯÃತ್ಸವದ ಪ್ರಯುಕ್ತ ಮುಹಿಯಿದ್ದೀನ್ ರಿಲೀಫ್ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಸಿಹಿಯನ್ನು ಹಂಚಲಾಯಿತು.
ಈ ಸಂದರ್ಭದಲಿ ರಿಲೀಫ್ ಸಂಘದ ಅಧ್ಯಕ್ಷ ಸುಲೈಮಾನ್, ಉಪಾಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ಫಾರೂಕ್, ಕೋಶಾಧಿಕಾರಿ ಸಂಶುದ್ದೀನ್, ರಾತಿಬ್ ಸಂಘದ ಅಧ್ಯಕ್ಷ ಝುಬೈರ್, ಎಲ್ಲಾ ಕಾರ್ಯಕರ್ತರು, ಶಾಲೆಯ ಶಿಕ್ಷಕ ವೃಂದ ಇದ್ದರು.ವೀರಾಜಪೇಟೆ : ಭಾರತವು ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ, ಪರಂಪರೆಯನ್ನು ಹೊಂದಿರುವ ದೇಶವಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಕರ್ ಅವರು ಅಭಿಪ್ರಾಯಪಟ್ಟರು.
ಅವರು ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಸ್ವಾತಂತ್ರವು ಹಲವಾರು ಜನರ ತ್ಯಾಗ ಬಲಿದಾನಗಳ ಸಂಕೇತವಾಗಿದ್ದು ನಮ್ಮ ಹಿರಿಯರ ಪರಿಶ್ರಮ ಅದರಲ್ಲಿ ಅಡಗಿದೆ. ಹಿರಿಯರು ಕಷ್ಟಪಟ್ಟು ದೊರಕಿಸಿದ ಸ್ವಾತಂತ್ರವನ್ನು ರಾಷ್ಟçದ ಸರ್ವ ಪ್ರಗತಿಗೆ ಬಳಸಿಕೊಳ್ಳು ವಂತಾಗಬೇಕೆAದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಸೈನಿಕರು ಹಾಗೂ ಮಡಿಕೇರಿ ನಗರ ಸಭೆಯ ಅಭಿಯಂತರರಾದ ಹೇಮಕುಮಾರ್ ಅವರು ಮಾತನಾಡುತ್ತ ನಮಗೆ ಸಿಕ್ಕ ಸ್ವಾತಂತ್ರವನ್ನು ಬಳಸಿಕೊಂಡು ರಾಷ್ಟçದ ಅಭಿವೃದ್ಧಿಗೆ ಶ್ರಮಿಸಬೇಕು, ಯುವ ಜನರು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಪಣ ತೊಡಬೇಕು ಎಂದರು. ಅದೆಷ್ಟೋ ಮಹಾನ್ ಪುರುಷರ ತ್ಯಾಗ ಸ್ವಾತಂತ್ರö್ಯ ಹೋರಾಟದಲ್ಲಿ ಅಡಗಿದೆ. ವಿದ್ಯಾರ್ಥಿಗಳು ಸ್ವಾತಂತ್ರö್ಯ ಹಾಗೂ ರಾಷ್ಟçದ ಹಿರಿಮೆಯನ್ನು ಎತ್ತಿ ಹಿಡಿಯಬೇಕೆಂದು ಕಿವಿಮಾತು ಹೇಳಿದರು. ರಾಷ್ಟಿçÃಯ ಭಾವೈಕ್ಯತೆಗೆ ಎಲ್ಲರೂ ಶ್ರಮಿಸಬೇಕೆಂದರು.
ಈ ಸಂದರ್ಭ ವಿದ್ಯಾಸಂಸ್ಥೆಯ ಎನ್. ಸಿ. ಸಿ., ಎನ್. ಎಸ್. ಎಸ್, ಗೈಡ್ಸ್, ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮವು ನಡೆಯಿತು. ಪಥ ಸಂಚಲನದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮಡಿಕೇರಿ ನಗರಸಭಾ ಅಭಿಯಂತರರಾದ ಹೇಮಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಹಾಯಕ ಗುರುಗಳಾದ ಫಾ. ಯೇಸು ಪ್ರಸಾದ್, ಪುರಸಭೆ ಸದಸ್ಯರಾದ ಜಲೀಲ್, ಪದವಿ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲ ಜೋಮನ್, ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್, ಸಿಸ್ಟರ್ ರೋಸಿ ಡೈಸ, ಸಿಸ್ಟರ್ ಐಡಾ, ಎನ್. ಸಿ. ಸಿ. ಅಧಿಕಾರಿ ಅಬ್ದುಲ್ ಮುನೀರ್ ರವರು ಉಪಸ್ಥಿತರಿದ್ದರು. ಶಿಕ್ಷಕಿ ಟೀನಾ ರವರು ನಿರೂಪಿಸಿ, ಉಪನ್ಯಾಸಕರಾದ ಬಿ. ಎನ್. ಶಾಂತಿಭೂಷಣ್ ರವರು ವಂದಿಸಿದರು. ವಿದ್ಯಾಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೀರಾಜಪೇಟೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವೀರಾಜಪೇಟೆ ಉಪವಿಭಾಗದಲ್ಲಿ ೭೭ ನೇ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.
ವೀರಾಜಪೇಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಅವರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ಶಾಖೆಯ ಅಭಿಯಂತರ ಶಿವಾನಂದ ಪಾಟೀಲ್ ಸೇರಿದಂತೆ ಸಿಬ್ಬಂದಿವರ್ಗ ಹಾಜರಿದ್ದರು.
ಕೆ.ಪಿ. ಬಾಣೆ : ಸಮೀಪದ ಕೆ.ಪಿ ಬಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಫಿಯಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪಿ.ಕೆ.ಗಂಗಮ್ಮ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿಗಳಿಂದ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಶಾಲೆಯ ವತಿಯಿಂದ ಹಳೇ ವಿದ್ಯಾರ್ಥಿ, ನಿವೃತ್ತ ಯೋಧ ಸುಬೇದಾರ್ ಮೊಯ್ದುಕುಂಞÂ ಅವರನ್ನು ಸನ್ಮಾನಿಸಲಾಯಿತು.ಯವಕಪಾಡಿ: ಯವಕಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಭರತ್, ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ನಂತರ ಪೋಷಕರೆಲ್ಲಾ ಸೇರಿ ಶಾಲೆಯ ಸುತ್ತಮುತ್ತ ಸ್ವಚ್ಛಗೊಳಿಸಿದರು.ಚೆಯ್ಯಂಡಾಣೆ: ನಾಪೋಕ್ಲುವಿನ ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಟ್ಟಣದ ಆಟೋ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್‌ದೇಶದ ಸ್ವಾತಂತ್ರ‍್ಯಕ್ಕಾಗಿ ಹಲವಾರು ಮಹಾನ್ ವ್ಯಕ್ತಿಗಳು ಯಾವುದೇ ಜಾತಿ, ಮತ, ಧರ್ಮಕ್ಕೆ ಅತೀತವಾಗಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ದೇಶಕ್ಕಾಗಿ ಪ್ರಾಣವನ್ನು ಬಲಿದಾನಮಾಡಿ ನಮಗೆ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದ್ದಾರೆ. ಇದನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಂದು ದೇಶದಲ್ಲಿ ರಕ್ಷಣಾ ವ್ಯವಸ್ಥೆಗೆ ಬಲವಾದ ಒಡೆತ ಕೋಮು ವಿಚಿತ್ರಕಾರಿ ಶಕ್ತಿಗಳಾಗಿವೆ. ಇದನ್ನು ಮಟ್ಟಹಾಕಲು ತಳಮಟ್ಟ ದಿಂದಲೇ ನಾವೆಲ್ಲರು ಧರ್ಮಾತೀತವಾಗಿ ಜೊತೆಗೂಡಿದರೆ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದ ಅಂಗವಾಗಿ ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಆಟೋರಿಕ್ಷಾ ಮೆರವಣಿಗೆ ಸಾಗಿದ ಚಾಲಕರು ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಜೆಡಿಎಸ್ ಮುಖಂಡ ಮನ್ಸೂರ್ ಅಲಿ, ಸಂಘದ ಅಧ್ಯಕ್ಷ ರಾಜೀವನ್,ಉಪಾಧ್ಯಕ್ಷ ರಾಶಿದ್, ಕಾರ್ಯದರ್ಶಿ ಸುಕುಮಾರ್, ಸಹ ಕಾರ್ಯದರ್ಶಿ ಶಂಸುದ್ದೀನ್, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್, ಮಾಜಿ ಕಾರ್ಯದರ್ಶಿ ಝಕರಿಯ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘದ ಎಲ್ಲಾ ಸದಸ್ಯರು, ಮತ್ತಿತರರು ಪ್ರಮುಖರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅವರು ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ದಿನದ ಮಹತ್ವದ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಅವರು ಪ್ರಾಸ್ತಾವಿಕವಾಗಿ ನುಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಂ.ಎ.ಕುಟ್ಟಪ್ಪ, ಸಹ ಶಿಕ್ಷಕರುಗಳಾದ ಎಂ.ಎಸ್.ದಿನೇಶ್, ಶಿವಪ್ಪ ಗುರ್ಕಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇದ್ರ, ಶೋಭಾ, ರಮ್ಯ ಡಿಸೋಜ, ರಾಜಶಂಕರ್, ರಾಜಶ್ರೀ ಮತ್ತಿತರರು ಇದ್ದರು. ಯವಕಪಾಡಿ: ಯವಕಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಭರತ್, ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ನಂತರ ಪೋಷಕರೆಲ್ಲಾ ಸೇರಿ ಶಾಲೆಯ ಸುತ್ತಮುತ್ತ ಸ್ವಚ್ಛಗೊಳಿಸಿದರು.ಯವಕಪಾಡಿ: ಯವಕಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಭರತ್, ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ನಂತರ ಪೋಷಕರೆಲ್ಲಾ ಸೇರಿ ಶಾಲೆಯ ಸುತ್ತಮುತ್ತ ಸ್ವಚ್ಛಗೊಳಿಸಿದರು.ಕೂಡಿಗೆ : ಕೂಡಿಗೆ ಸೈನಿಕ ಶಾಲೆಯ ೨೬ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಹಾಗೂ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಭಾರತೀಯ ವಾಯುಸೇನೆಯ ಏರ್ ವೈಸ್ ಮಾರ್ಷಲ್ ಆರ್.ವಿ. ರಾಮ್‌ಕಿಶೋರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಆಡಳಿತ ಮಂಡಳಿಯ ಸಭೆಯಲ್ಲಿ ಗ್ರೂಪ್ ಕ್ಯಾಪ್ಟನ್ ಶಕ್ತಿ ಶರ್ಮಾ, ಕೊಡಗು ಜಿಲ್ಲಾಧಿಕಾರಿ ಪ್ರತಿನಿಧಿ ಸೌಮ್ಯ ಪೊನ್ನಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವ ಕೆ. ನರೇಂದ್ರ, ಶಾಲೆಯ ಆಡಳಿತಾದಿ üಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಕೂಡಿಗೆ ಡಯಟ್ ಪ್ರಾಂಶುಪಾಲ ಚಂದ್ರಕಾAತ್ ಹಾಜರಿದ್ದರು. ರಾಜ್ಯ ಹಣಕಾಸು ಅಧೀನ ಕಾರ್ಯದರ್ಶಿ ಪ್ರದೀಪ್ ನಂಬಿಯಾರ್, ಸಿಪಿಡಬ್ಲ್ಯೂ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ್, ಪೋಷಕ ಪ್ರತಿನಿಧಿ ಸಂಪತ್ ಕುಮಾರ್ ಶರ್ಮಾ ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್‌ರವರು ಶಾಲೆಯ ತರಬೇತಿ ಹಾಗೂ ಆಡಳಿತವನ್ನು ಕುರಿತು ವಿವರಿಸುವುದರೊಂದಿಗೆ, ಕಳೆದು ಆರು ತಿಂಗಳಿನಲ್ಲಿ ಶಾಲೆಯು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವುದರೊಂದಿಗೆ, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಇದರೊಂದಿಗೆ ಶಾಲೆಯಲ್ಲಿ ೭೭ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸ ಲಾಯಿತು. ನಂತರ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳು ಗೌರವ ವಂದನೆ ಸ್ವೀಕರಿಸಲಾಯಿತು.
ಇದೇ ಸಂದರ್ಭ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಶಿಕ್ಷಕಿ ಪ್ರತಿಭಾ ಕಲ್ಯಾಣಿ, ದ್ವಿತೀಯ ದರ್ಜೆ ಸಹಾಯಕ ಹೆಚ್.ಎನ್. ಸುಬ್ರಮಣಿ ಹಾಗೂ ಸಾಮಾನ್ಯ ಸಿಬ್ಬಂದಿ ವರ್ಗದ ನೌಕರ ಮುರುಳಿಯವರಿಗೆ ಪ್ರಾಂಶುಪಾಲರ ಪ್ರಶಂಸನಾ ಪತ್ರವನ್ನು ಪ್ರದಾನ ಮಾಡಿದರು. ಹಾಗೆಯೇ ೧೦ನೇ ತರಗತಿಯ ಸಿ ಬಿ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ವಿಷಯ ವಾರು ಪ್ರತಿಶತ ನೂರು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಆಯಾ ವಿಷಯ ಶಿಕ್ಷಕರೊಂದಿಗೆ ಸನ್ಮಾನಿಸಿದರು.