ಕೂಡಿಗೆ, ಆ. ೨೨ : ಕುಶಾಲನಗರದ ಶೈಲಜಾ ಬಡಾವಣೆಯ ಕೆ.ವರದ ಎಂಬವರ ಮನೆ ಮುಂಭಾಗದಲ್ಲಿ ಪತ್ತೆಯಾದ ನಾಗರ ಹಾವನ್ನು ಕೂಡುಮಂಗಳೂರು ಗ್ರಾಮದ ಉರಗ ರಕ್ಷಕ ಗಫೂರ್ ರಕ್ಷಿಸಿ ಅರಣ್ಯಕ್ಕೆ ಬಿಟ್ಟರು. ನಾಗರ ಪಂಚಮಿ ದಿನ ಹಾವು ಪತ್ತೆಯಾದ ಹಿನ್ನೆಲೆಯಲ್ಲಿ ಗಫೂರ್ ಹಾವಿಗೆ ಮನೆಯಲ್ಲಿ ನೀರನ್ನು ಕುಡಿಸಿ ನಂತರ ಆನೆ ಕಾಡು ಅರಣ್ಯಕ್ಕೆ ಬಿಟ್ಟರು.