ಸೋಮವಾರಪೇಟೆ, ಆ. ೨೨: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಗರ್ವಾಲೆ, ಕುಂಬಾರಗಡಿಗೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಕುಂಬಾರಗಡಿಗೆಯಿAದ ಮರಿಯಾನೆಯನ್ನು ಒಳಗೊಂಡAತೆ ಒಟ್ಟು ೪ ಆನೆಗಳು ಕಾಜೂರು ಅರಣ್ಯ ಸೇರಿವೆ.
ಕಳೆದ ಮೂರು ದಿನಗಳಿಂದ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡ ಹಾಗೂ ಎಲಿಫೆಂಟ್ ಟಾಸ್ಕ್ಫೋರ್ಸ್ನ ಸಿಬ್ಬಂದಿಗಳು ಸೇರಿದಂತೆ ಒಟ್ಟು ೩೫ ಮಂದಿಯ ತಂಡ ಕಾರ್ಯಾಚರಣೆ ನಡೆಸಿ, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದೆ.
ಕಳೆದ ಒಂದೂವರೆ ತಿಂಗಳಿನಿAದ ಕಾಜೂರು ಅರಣ್ಯದಿಂದ ಹಾನಗಲ್ಲು, ಕಿರಗಂದೂರು, ತಾಕೇರಿ, ಹರಗ ಮೂಲಕ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಕುಂಬಾರಗಡಿಗೆ, ಚಾಮೇರಮನೆ ಭಾಗಕ್ಕೆ ತೆರಳಿದ್ದ ಮರಿಯಾನೆಯನ್ನು ಒಳಗೊಂಡAತೆ ಮೂರು ಕಾಡಾನೆಗಳು ಹಾಗೂ ಮಡಿಕೇರಿ ಭಾಗದ ಮುಟ್ಲು, ಮುಕ್ಕೋಡ್ಲು ಭಾಗದಿಂದ ಆಗಮಿಸಿದ್ದ ಒಂಟಿ ಸಲಗ ಗರ್ವಾಲೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದು, ಕೃಷಿ ಫಸಲನ್ನು ಮನಸೋಯಿಚ್ಛೆ ನಷ್ಟಪಡಿಸುತ್ತಿದ್ದವು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ನೇತೃತ್ವದಲ್ಲಿ ಆರ್‌ಆರ್‌ಟಿ ತಂಡ ಹಾಗೂ ಎಲಿಫೆಂಟ್ ಟಾಸ್ಕ್ಫೋರ್ಸ್ನ ೩೫ ಸಿಬ್ಬಂದಿಗಳು ಕಳೆದ ೩ ದಿನಗಳಿಂದ ಕೂಂಬಿAಗ್ ನಡೆಸಿ, ಕೊನೆಗೂ ಕಾಜೂರು ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂಬಾರಗಡಿಗೆಯಲ್ಲಿದ್ದ ಒಟ್ಟು ೪ ಆನೆಗಳನ್ನು ಹರಗ, ತಾಕೇರಿ, ಕಿರಗಂದೂರು, ಹಾನಗಲ್ಲುಶೆಟ್ಟಳ್ಳಿ-ಹಾನಗಲ್ಲು ಗ್ರಾಮದ ಗಡಿ, ದುದ್ದುಗಲ್ಲು ಹೊಳೆ ಮೂಲಕ ಮರಳಿ ಕಾಜೂರು ಅರಣ್ಯಕ್ಕೆ ಓಡಿಸಲಾಗಿದೆ.
ಮರಿಯಾನೆಯನ್ನು ಒಳಗೊಂಡAತೆ ಎರಡು ಹೆಣ್ಣಾನೆಗಳು ಕಾಜೂರು ಅರಣ್ಯದಿಂದಲೇ ಗರ್ವಾಲೆಗೆ ತೆರಳಿದ್ದವು. ಈ ಗುಂಪಿಗೆ ಮುಕ್ಕೋಡ್ಲು ಭಾಗದಿಂದ ಬಂದಿರುವ ಒಂಟಿ ಸಲಗವೂ ಸೇರಿಕೊಂಡಿದ್ದು, ಕಾರ್ಯಾಚರಣೆ ಸಂದರ್ಭ ಒಂಟಿ ಸಲಗ ಕಾಜೂರು ಅರಣ್ಯಕ್ಕೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಮತ್ತೆ ಅದೇ ಮಾರ್ಗವಾಗಿ ಮುಕ್ಕೋಡ್ಲು, ಮುಟ್ಲು ಅರಣ್ಯ ಭಾಗಕ್ಕೆ ತೆರಳಲೂಬಹುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ಅವರು ಮಾಹಿತಿ ನೀಡಿದ್ದಾರೆ.