*ಸಿದ್ದಾಪುರ, ಆ. ೨೨ : ಕಳೆದ ೪೧ ವರ್ಷಗಳಿಂದ ಅಭ್ಯತ್‌ಮಂಗಲ ಭಾಗದಲ್ಲಿ ಅಂಚೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ತೆರಂಬಳ್ಳಿ ರಾಮಚಂದ್ರ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆಯ ರಂಗಮAದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಮಾಜಿ ಅಧ್ಯಕ್ಷ ಅಂಚೆಮನೆ ಸುಧಿ, ಸಿ.ಪಿ. ದಿವಾಕರ್, ಮಂಜುಳ, ಅನಿತಾ, ಸುಧಾ, ಪಂಚಾಯಿತಿ ಸದಸ್ಯರುಗಳು, ಕಾರ್ಯದರ್ಶಿ ರವಿ ಹಾಗೂ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮತ್ತಿತರರು ಉಪ್ಥಿತರಿದ್ದರು.