ಕೂಡಿಗೆ, ಆ. ೨೨ : ಆಲೂರು ಸಿದ್ದಾಪುರ ವಲಯದ ರೋಟರಿ ಮಲ್ಲೇಶ್ವರದ ವತಿಯಿಂದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೨೨-೨೩ ನೇ ಸಾಲಿನಲಿ ಪ್ರಥಮ ಸ್ಥಾನವನ್ನು ಪಡೆದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಲಾವಿಭಾಗದ ವಿದ್ಯಾರ್ಥಿ ಎಲ್. ಧನುಷ್, ವಿಜ್ಞಾನ ವಿಭಾಗದಲ್ಲಿ ಜೆ. ಬಲವರ್ಧನ್, ವಾಣಿಜ್ಯ ವಿಭಾಗದಲ್ಲಿ ಎಂ. ಸಿಂಚನ ಎಂಬ ವಿದ್ಯಾರ್ಥಿಗಳಿಗೆ ನಗದು ಮತ್ತು ಅಭಿನಂದನ ಫಲಕಗಳನ್ನು ನೀಡಿ ಗೌರವಿಸಲಾಯಿತು.
ಸನ್ಮಾನ ನೆರವೇರಿಸಿದ ಬಳಿಕ ಮಾತನಾಡಿದ ರೋಟರಿ ಮಲ್ಲೇಶ್ವರದ ಅಧ್ಯಕ್ಷ ಉದಯ್ ಕುಮಾರ್, ರೋಟರಿ ಸಂಸ್ಥೆಯ ಸೇವಾ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯದರ್ಶಿ ಸಂಪತ್ ಮಾತನಾಡಿ, ಈ ವರ್ಷ ರೋಟರಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿಶೇಷವಾಗಿ ವಿದ್ಯಾರ್ಥಿಗಳ ಅಭಿವೃದ್ಧಿಯ ದಿಸೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ ಎಂದು ತಿಳಿಸಿದರು. ನಿಕಟ ಪೂರ್ವ ಅಧ್ಯಕ್ಷ ಶುಂಠಿ ರಾಮಣ್ಣ, ರೋಟೇರಿಯನ್ಗಳಾದ ಹೇಮಂತ್, ನಾರಾಯಣಸ್ವಾಮಿ ಜೀವನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಶ್ರೀಲತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಹಂಡ್ರAಗಿ ನಾಗರಾಜ್, ಕೆ.ಕೆ. ಭವಾನಿ ಸೇರಿದಂತೆ ಉಪನ್ಯಾಸಕ ವೃಂದದವರು ಇದ್ದರು.