ಇಂದು ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಂ
ನವದೆಹಲಿ, ಆ. ೨೨: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮುಂದಾ ಳತ್ವದಲ್ಲಿ ಜುಲೈ ೧೪ ರಂದು ಚಂದ್ರನೆಡೆಗೆ ಪಯಣ ಬೆಳೆಸಿದ ಚಂದ್ರಯಾನ ೩ ನೌಕೆಯು ತನ್ನ ಪಯಣವನ್ನು ಇಂದು ಪೂರ್ಣಗೊಳಿಸಲಿದೆ. ಈಗಾಗಲೇ ಚಂದ್ರನ ಕಕ್ಷೆಯಲ್ಲಿ ಇರಿಸಲಾಗಿ ಕಿರಿದಾದ ಕಕ್ಷೆಯಲ್ಲಿ ಸುತ್ತುತ್ತಿರುವ ವಿಕ್ರಂ ಲ್ಯಾಂಡರ್ ತಾ. ೨೩ ರಂದು (ಇಂದು) ಸಂಜೆ ೬ ಗಂಟೆ ೪ ನಿಮಿಷಕ್ಕೆ ಚಂದ್ರನ ಮೇಲ್ಮೆöÊ ಮೇಲೆ ಸುರಕ್ಷಿತವಾಗಿ ಇಳಿಯುವ ನಿರೀಕ್ಷೆಯಿದೆ. ಬಳಿಕ ಲ್ಯಾಂಡರ್ ಒಳಗಿರುವ ಪ್ರಗ್ಯಾನ್ ರೋವರ್ ಚಂದ್ರನ ಪದರದ ಮೇಲೆ ಸಂಚರಿಸಲಿದೆ. ಸಂಜೆ ೫:೨೦ ರಿಂದಲೇ ಯೋಜನ ನಿಯಂತ್ರಣದ ನೇರ ಪ್ರಸಾರ ಪ್ರಾರಂಭವಾಗಲಿದ್ದು, ಇಸ್ರೋ ಅಧಿಕೃತ ಯೂಟ್ಯೂಬ್ ಚಾನೆಲ್ನ ಲಿಂಕ್ "hಣಣಠಿs://ತಿತಿತಿ.ಥಿouಣube.ಛಿom/ತಿಚಿಣಛಿh?v= ಆಐಂ_ ೬೪ಥಿz೮Ss" ಅಥವಾ isಡಿo.gov.iಟಿ ವೆಬ್ಸೈಟ್ ಮೂಲಕ ವೀಕ್ಷಿಸಬಹದಾಗಿದೆ.
ಸಂತ್ರಸ್ತೆಯ ಭೇಟಿ ನಿರಾಕರಣೆ : ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಧರಣಿ
ನವದೆಹಲಿ, ಆ. ೨೨: ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸಲು ಕಾರಣವಾದ ಪ್ರಕರಣಕ್ಕೆ ಸಂಬAಧಿಸಿದAತೆ ಸಂತ್ರಸ್ತ ಬಾಲಕಿಯನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ದೆಹಲಿಯ ಆಸ್ಪತ್ರೆ ಎದುರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ವಾತಿ ಮಾಲೀವಾಲ್ ದೆಹಲಿಯ ಆಸ್ಪತ್ರೆ ಎದುರು ನಿನ್ನೆ ಸಂಜೆಯಿAದ ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿ ಹಾಗೂ ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರೇಮೋದಯ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಗೆ ಗರ್ಭಪಾತದ ಔಷಧ ನೀಡಿದ ಆರೋಪದ ಮೇಲೆ ಆರೋಪಿಯ ಪತ್ನಿಯನ್ನೂ ವಶಕ್ಕೆ ಪಡೆಯಲಾಗಿದೆ.
ಭೂಮಾಪನ ಇಲಾಖೆ ಅಧೀಕ್ಷಕನ ಬಳಿ ಐದು ಬಾರ್!
ಬೆಂಗಳೂರು, ಆ. ೨೨: ಬೆಂಗಳೂರು ಪೂರ್ವ (ಕೆ.ಆರ್. ಪುರ) ತಾಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸ ಮೂರ್ತಿ ಐದು ಮದ್ಯದಂಗಡಿಗಳನ್ನು ಹೊಂದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಅಧಿಕಾರಿಯು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ತುಮಕೂರು ಜಿಲ್ಲೆಯ ೧೪ ಸ್ಥಳಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿಮಾಡಿರುವ ಲೋಕಾಯುಕ್ತ ಪೊಲೀಸರು, ಶೋಧ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಐದು ಕಡೆ ಶ್ರೀನಿವಾಸಮೂರ್ತಿ ಮದ್ಯದಂಗಡಿಗಳನ್ನು ಹೊಂದಿರುವುದನ್ನು ಪತ್ತೆ ಮಾಡಲಾಗಿದೆ. ಹಲವು ಕಡೆಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿರುವ ದಾಖಲೆಗಳೂ ಪತ್ತೆಯಾಗಿದೆ.
‘ಹಣಕಾಸು ಆಯೋಗದ ಶಿಫಾರಸಿನಂತೆ ಹಣ ಬಿಡುಗಡೆ ಮಾಡಿ’
ಬೆಂಗಳೂರು, ಆ. ೨೨: ೧೫ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ೫,೪೯೫ ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ೧೫ನೇ ಹಣಕಾಸು ಆಯೋಗದ ೨೦೨೦-೨೧ರ ಪ್ರಕಾರ ವಿಶೇಷ ಅನುದಾನವಾಗಿ ೫,೪೯೫ ಕೋಟಿ ರೂ. ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಭೂಕುಸಿತ:ಸಾವಿನ ಸಂಖ್ಯೆ ೫ಕ್ಕೆ ಏರಿಕೆ
ಶಿಮ್ಲಾ, ಆ. ೨೨: ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಅವಶೇಷಗಳ ಅಡಿಯಿಂದ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಐದನೇ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಕಿರ್ಗಾನಿ ಗ್ರಾಮದ ೩೪ ವರ್ಷದ ಸೋಹನ್ ಸಿಂಗ್ ರಾವತ್ ಎಂದು ಗುರುತಿಸಲಾಗಿದೆ ಎಂದು ತೆಪ್ರಿ ಜಿಲ್ಲಾ ಮ್ಯಾಜಿಸ್ಟೆçÃಟ್ ಮಯೂರ್ ದೀಕ್ಷಿತ್ ಹೇಳಿದ್ದಾರೆ. ಸೋಮವಾರ ಹಿಮಾಚಲ ಪ್ರದೇಶದ ಚಂಬಾ ಪಾರ್ಕಿಂಗ್ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಓರ್ವ ಮಹಿಳೆ ಮತ್ತು ಆಕೆಯ ನಾಲ್ಕು ತಿಂಗಳ ಮಗು ಸೇರಿದಂತೆ ಐವರು ಜೀವಂತ ಸಮಾಧಿಯಾಗಿದ್ದಾರೆ. ಭೂ ಕುಸಿತ ಪ್ರದೇಶದಲ್ಲಿ ಸುಮಾರು ೧೨ ಗಂಟೆಗಳ ಕಾಲ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿರುವ ಪಾಕ್ ಸಹೋದರಿ
ನವದೆಹಲಿ, ಆ. ೨೨: ಪ್ರತಿವರ್ಷದಂತೆ ಈ ಬಾರಿಯೂ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನ ಸಹೋದರಿ ಖಮರ್ ಮೊಹಿನ್ ಶೇಖ್ ದೆಹಲಿಗೆ ಆಗಮಿಸಿ ರಾಖಿ ಕಟ್ಟಲಿದ್ದಾರೆ. ಕೋವಿಡ್ ಕಾರಣದಿಂದ ಕಳೆದ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಈ ವರ್ಷ ನಾನು ನನ್ನ ಕೈಯಾರೆ ತಯಾರಿಸಿದ ರಾಖಿ ಹಾಗೂ ಕೃಷಿ ಸಂಬAಧಿ ಪುಸ್ತಕದೊಂದಿಗೆ ದೆಹಲಿಗೆ ತೆರಳಲಿದ್ದೇನೆ ಎಂದು ಖಮರ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ‘ರಾಷ್ಟಿçÃಯ ಐಕಾನ್’
ನವದೆಹಲಿ, ಆ. ೨೨: ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೇಂದ್ರ ಚುನಾವಣಾ ಆಯೋಗ (ಇಸಿ) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು "ರಾಷ್ಟಿçÃಯ ಐಕಾನ್" ಎಂದು ನೇಮಕ ಮಾಡಿದೆ. ಇಂದು ದೆಹಲಿಯಲ್ಲಿ ಈ ಸಂಬAಧ ತೆಂಡೂಲ್ಕರ್ ಮತ್ತು ಚುನಾವಣಾ ಸಮಿತಿ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ತೆಂಡೂಲ್ಕರ್ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.