ಮಡಿಕೇರಿ, ಆ. ೨೨: ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ನೀರಿನಲ್ಲಿ ಮೃತದೇಹ ಗೋಚರವಾಗಿದೆ. ೫ ಅಡಿ ಎತ್ತರ, ನೀಲಿ, ಖಾಕಿ ಹಳದಿ ಹೂಗಳಿರುವ ಪಾಲಿಸ್ಟರ್ ಸೀರೆ ಧರಿಸಿದ್ದು, ಖಾಕಿ ಬಣ್ಣದ ಬ್ಲೌಸ್ ಧರಿಸಿರುವುದು ತಿಳಿದು ಬಂದಿದೆ.

ವಾರಸುದಾರರಿದ್ದಲ್ಲಿ ೦೮೨೭೬- ೨೭೮೪೩೩/೨೭೪೪೦೦ ಅಥವಾ ೦೮೨೭೨-೨೨೯೦೦೦ ಸಂಖ್ಯೆಯನ್ನು ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.