ಮಡಿಕೇರಿ, ಆ. ೨೧: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿ ವತಿಯಿಂದ ಸಾರ್ವಜನಿಕರಿಗಾಗಿ ಆಯೋಜಿಸ ಲಾಗಿದ್ದ ‘ರೀಲ್ಸ್’ ಸ್ಪರ್ಧೆಯಲ್ಲಿ ಕಾರ್ಕಳದ ಸೌರಭ್ ಪ್ರಥಮ ಸ್ಥಾನ ಪಡೆದುಕೊಂಡರು.

ಉಡುಪಿಯ ಸಚಿನ್ ದ್ವಿತೀಯ, ವೀರಾಜಪೇಟೆಯ ವಿಷ್ಣು ತೃತೀಯ ಸ್ಥಾನ ಗಳಿಸಿಕೊಂಡರು. ಮಂಗಳೂರಿನ ಶಶಾಂಕ್ ಶೆಟ್ಟಿಗಾರ್, ಭಾಗಮಂಡಲದ ದೇವಿಪ್ರಸಾದ್, ಕುಶಾನಗರದ ಜಯಪ್ರಸಾದ್, ಸುಂಟಿಕೊಪ್ಪದ ಪ್ರಶಾಂತ್, ಮಡಿಕೇರಿಯ ಸುಹೇಬ್ ಸಮಾಧಾನಕರ ಬಹುಮಾನ ಪಡೆದುಕೊಂಡರೆ, ಮಾಯಮುಡಿಯ ದಿಶಾ ದೇಚಮ್ಮ, ಗೋಣಿಕೊಪ್ಪದ ಲಾಸ್ಯ, ತಾನ್ಯ, ವೀರಾಜಪೇಟೆಯ ದಿಂಶಾ ದೇಚಮ್ಮ ವಿಶೇಷ ಬಹುಮಾನ ತನ್ನದಾಗಿಸಿಕೊಂಡರು. ಪತ್ರಕರ್ತರ ವಿಭಾಗದಲ್ಲಿ ವಿಶ್ವ ಕುಂಬೂರು ಬಹುಮಾನ ಪಡೆದುಕೊಂಡರು. ಕಂಬೆಯAಡ ಪುಷ್ಪ ಹಾಗೂ ದೇವಯ್ಯ ಬಹುಮಾನ ಪ್ರಾಯೋಜಿಸಿದ್ದರು.