ಶನಿವಾರಸಂತೆ, ಆ. ೨೦: ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಸಾರ್ವ ಜನಿಕರ ಸಹಭಾಗಿತ್ವ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಸ್ಥಳೀಯಾಡಳಿತದೊಂದಿಗೆ ಕೈಜೋಡಿಸಬೇಕು. ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಬೇಕೆಂದು ಶಾಸಕ ಡಾ. ಮಂಥರ್ ಗೌಡ ಅಭಿಪ್ರಾಯಿಸಿದರು.
ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಿAದ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ವಿಷಯದಲ್ಲಿ ಸಾರ್ವಜನಿಕರಿಗೆ ಪಂಚಾಯಿತಿ ಯಿಂದ ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸಬೇಕೆಂದು ನಿರ್ದೇಶಿಸಿದ ಅವರು, ಸಾರ್ವಜನಿಕರು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ವಾಹನಕ್ಕೆ ಹಾಕಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್, ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಪಾವನ, ರೇಣುಕಾ, ವಿನೋದಾ, ದೊಡ್ಡಯ್ಯ, ಮೋಕ್ಷಿಕ್ ರಾಜ್, ದಿನೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಅಭಿಯಂತರ ವೀರೇಂದ್ರ, ಸಲೀಂ, ಸ್ವಚ್ಛ ಭಾರತ್ ಮಿಷನ್‌ನ ಪೆಮ್ಮಯ್ಯ, ಗುತ್ತಿಗೆದಾರ ಜೆ.ಕೆ. ವೇದ್‌ಕುಮಾರ್, ಪ್ರಮುಖರಾದ ಬಿ.ಬಿ. ಸತೀಶ್ ತಾಕೇರಿ, ಬಿ.ಇ. ಜಯೇಂದ್ರ, ಚೇತನ್, ಪಾಲಾಕ್ಷ, ತೇಜ್‌ಕುಮಾರ್, ಸಾಬ್ಜಾನ್, ಸುಲೈಮಾನ್, ಡಿ.ಆರ್. ವೇದ್‌ಕುಮಾರ್, ಗ್ರಾ.ಪಂ. ಕಾರ್ಯದರ್ಶಿ ಅಶ್ವಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಳಗೂರು ಮತ್ತು ಶಿವರಳ್ಳಿ ಗ್ರಾಮಸ್ಥರು ಸಮುದಾಯ ಭವನ ನಿರ್ಮಿಸಿಕೊಡುವಂತೆ ಇದೇ ಸಂದರ್ಭ ಶಾಸಕರಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ. ವ್ಯಾಪ್ತಿಯ ಹಲವಷ್ಟು ಸಾರ್ವಜನಿಕರು ಶಾಸಕರಿಗೆ ಅಹವಾಲು ಸಲ್ಲಿಸಿದರು.