ನಾಪೋಕ್ಲು, ಆ. ೨೧: ನಾಪೋಕ್ಲು- ಪಾರಾಣೆ ಮುಖ್ಯ ರಸ್ತೆಯ ಕೈಕಾಡು ಎಂಬಲ್ಲಿ ರಸ್ತೆಯ ಸಮೀಪದಲ್ಲೇ ಇರುವ ನಿವೃತ್ತ ಸೈನಿಕ ನಾಯಕಂಡ ಬೋಪಣ್ಣ ಎಂಬವರ ಮನೆಯ ಸಮೀಪದ ವಿದ್ಯುತ್ ಕಂಬ ಬೀಳುವ ಸ್ಥಿತಿ ಯಲ್ಲಿದೆ. ಓರೆಯಾಗಿರುವ ಕಂಬ ಮನೆಯ ಅಂಗಳಕ್ಕೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯ ತಂದೊಡ್ಡುವ ಮುನ್ನ ವಿದ್ಯುತ್ ಕಂಬ ಬದಲಿಸಬೇಕಾಗಿದೆ. ವಿದ್ಯುತ್ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಇಲಾಖೆ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ಹಿರಿಯರಾದ ಬೋಪಣ್ಣ ಮಾಧ್ಯಮದೊಂದಿಗೆ ಅಳಲು ತೋಡಿಕೊಂಡಿದ್ದಾರೆ.