ಗೋಣಿಕೊಪ್ಪಲು, ಆ. ೨೧: ಸರ ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ ತ್ಮಾಡುವಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಮಿತಿಯನ್ನು ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಬಲ್ಯಮಂಡ ವೇಣು ಮಂದಣ್ಣ, ಉಪಾಧ್ಯಕ್ಷರಾಗಿ ಸುಶೀಲಾ ಟಿ.ಎಂ. ಕಾರ್ಯದರ್ಶಿಯಾಗಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯವತಿ ಟಿ.ವಿ. ಖಜಾಂಚಿಯಾಗಿ ಉಮೇಶ್ ನೇಮಕಗೊಂಡರು.

ಸದಸ್ಯರಾಗಿ ಅಣ್ಣಯ್ಯ ಕೆ.ಆರ್., ಗುಮ್ಮಟ್ಟಿರ ಆಕಾಶ್, ಗಿರೀಶ್, ಚೇತನ್, ಗೋಪಾಲಕೃಷ್ಣ, ಜಯ ಪ್ರಕಾಶ್, ನೇತ್ರಾವತಿ, ಜ್ಯೋತಿ, ರೇಷ್ಮಾ ಅವರನ್ನು ಈ ವೇಳೆ ಸದಸ್ಯರ ಸಮ್ಮು ಖದಲ್ಲಿ ಆಯ್ಕೆ ಮಾಡಲಾಯಿತು.

ಈ ಶಾಲೆಯಲ್ಲಿ ವಿದ್ಯಾರ್ಜನೆ ಪಡೆದ ವಿದ್ಯಾರ್ಥಿಗಳು ಮಹೇಶ್ ಮತ್ತು ವಿದ್ಯಾ ಹಾಗೂ ಕವಿತಾ, ರೇಷ್ಮಾ ಅವರು ವಿವಿಧ ಊರು ಗಳಿಂದ ಆಗಮಿಸಿ ಮಾತನಾಡಿದರು.

ಮುಖ್ಯ ಶಿಕ್ಷಕಿ ಭಾಗ್ಯವತಿ ಸ್ವಾಗತಿಸಿ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರದ ಬಗ್ಗೆ ವಿವರಿಸಿದರು.

ಗ್ರಾಮೀಣ ಭಾಗದ ಶಾಲೆ ಯನ್ನು ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ನೂತನ ಸಂಘವು ಕೈ ಜೋಡಿಸಿ ಶ್ರಮಿಸೋಣ ಎಂದರು. ಶಿಕ್ಷಕಿ ತಾರ ಪ್ರಾರ್ಥಿಸಿ, ವಂದಿಸಿದರು.

ಶಾಲಾ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಉಷಾ ಎಂ.ಎಸ್. ಪಾಲ್ಗೊಂಡಿದ್ದರು. ಈ ವೇಳೆ ಶಾಲೆಯ ಅತಿಥಿ ಶಿಕ್ಷಕರಾದ ಉಷಾ ಹಾಗೂ ಸಂದ್ಯಾ ಅವರು ಹಾಜರಿದ್ದರು.