ಪೊನ್ನಂಪೇಟೆ, ಆ. ೨೦: ‘ಕೂರ್ಗ್ ಬಝ್’ ವತಿ ಯಿಂದ ವಿಶ್ವ ಫೋಟೋಗ್ರಫಿ ದಿನಾಚರಣೆಯ ಅಂಗವಾಗಿ ಮೊಬೈಲ್ ಫೋಟೋಗ್ರಫಿ ಸ್ಪರ್ಧೆಯನ್ನು ಆಯೋಜಿ ಸಲಾಗಿದೆ. ಕೂರ್ಗ್ ನೇಚರ್ ಫೋಟೋಗ್ರಫಿ ಎಂಬ ವಿಷಯದಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಕೊಡಗಿನ ನೈಸರ್ಗಿಕ ಚಿತ್ರಗಳನ್ನು ಮಾತ್ರ ಕಳಿಸಬೇಕಿದೆ. ಮೊಬೈಲ್ ನಲ್ಲಿ ಸೆರೆಹಿಡಿಯುವ ಮೂಲ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.

ಸ್ಪರ್ಧೆಗಾಗಿ ಸೆರೆಹಿಡಿದಿರುವ ಚಿತ್ರಗಳಿಗೆ ಯಾವುದೇ ಬಾರ್ಡರ್ ಮತ್ತು ಫ್ರೇಮ್‌ಗಳನ್ನು ಅಳವಡಿಸುವಂತಿಲ್ಲ. ಚಿತ್ರಗಳನ್ನು ಯಾವುದೇ ಕಾರಣಕ್ಕೂ ಎಡಿಟ್ ಮಾಡಿ ಬಣ್ಣ ಬದಲಿಸುವಂತಿಲ್ಲ. ವಾಟರ್ ಮಾರ್ಕನ್ನು ಬಳಸುವಂತಿಲ್ಲ. ಚಿತ್ರಗಳನ್ನು ತಿರುಗಿಸುವಂತಿಲ್ಲ ಎಂಬ ನಿಬಂಧನೆಗಳಿದ್ದು, ಒಬ್ಬ ವ್ಯಕ್ತಿ ಒಂದು ಚಿತ್ರವನ್ನು ಮಾತ್ರ ಸ್ಪರ್ಧೆಗೆ ಕಳಿಸಬಹುದಾಗಿದೆ.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿಜಯಿಗೆ ರೂ. ೧೦,೦೦೦, ದ್ವಿತೀಯ ಸ್ಥಾನ ವಿಜಯಗೆ ರೂ. ೫,೦೦೦ ನಗದು ಬಹುಮಾನ ನಿಗದಿಪಡಿಸಲಾಗಿದ್ದು, ಉಳಿದಂತೆ ಆಯ್ಕೆಯಾಗುವ ಅತ್ಯುತ್ತಮ ೫ ಚಿತ್ರಗಳಿಗೆ ತಲಾ ರೂ.೧೦೦೦ ಮೊತ್ತದ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.

ತಾ.೩೧ ರಂದು ರಾತ್ರಿ ೯ ಗಂಟೆಯೊಳಗಾಗಿ ಸ್ಪರ್ಧೆಗೆ ಚಿತ್ರಗಳನ್ನು ಕಳಿಸಲು ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೦೦೮೪೪೨೦೬೪ ಅನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.