ಮಡಿಕೇರಿ, ಆ. ೨೦: ಮಡಿಕೇರಿಯ ಪ್ರಮುಖ ಪ್ರವಾಸಿ ಕೇಂದ್ರವಾದ ರಾಜಾಸೀಟು ಮಳೆಗಾಲವೂ ಸೇರಿದಂತೆ ಪ್ರವಾಸಿಗರಿಗೆ ಸಾರ್ವಕಾಲಿಕ ಮತ್ತು ಸ್ಥಳೀಯರಿಗೆ ಪ್ರಿಯವಾಗಿರುವ ಉದ್ಯಾನವಾಗಿ ಅಭಿವೃದ್ಧಿಗೊಂಡಿದೆ., ಇದೀಗ ಝಿಪ್ಲೈನ್ ಮತ್ತು ಸಂಗೀತ ಕಾರಂಜಿಯ ಹೆಚ್ಚುವರಿ ಆಕರ್ಷಣೆಗಳೊಂದಿಗೆ ಪ್ರವಾಸಿಗರಿಗೆ ಎಲ್ಲಾ ಕಾಲದಲ್ಲಿಯೂ ಭೇಟಿ ನೀಡುವ ಸ್ಥಳವಾಗಿದೆ. ಈ ವರ್ಷ ಮಳೆಗಾಲದಲ್ಲಿಯೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿರುವದು ವಿಶೇಷವೆನಿಸಿದೆ.
ರಾಜಾಸೀಟು ಉದ್ಯಾನಕ್ಕೆ ಈಗಿನ ಮಳೆಗಾಲದಲ್ಲಿಯೇ ಸರಾಸರಿ ನಿತ್ಯ ೩೦೦ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆೆ. ತೋಟಗಾರಿಕಾ ಇಲಾಖೆಯ ದಾಖಲೆಯ ಪ್ರಕಾರ ವಾರಾಂತ್ಯದಲ್ಲಿ ಈ ವರ್ಷದ ಮಳೆಗಾಲದಲ್ಲಿ ಶನಿವಾರದಂದು ೩೫೦ ಮತ್ತು ಭಾನುವಾರದಂದು ೪೫೦ ರವರೆಗೂ ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬAದಿದೆ. ದೈನಂದಿನ ಪ್ರವೇಶ ಶುಲ್ಕ ಸಂಗ್ರಹ ಸರಾಸರಿ ರೂ. ೬,೦೦೦ ಮತ್ತು ಶನಿವಾರದಂದು ರೂ. ೭,೦೦೦ ಹಾಗೂ ಭಾನುವಾರ ಇದು ರೂ. ೯,೦೦೦. ಕ್ಕಿಂತ ಹೆಚ್ಚಾಗಿರುತ್ತದೆ. ರಾಜಾಸೀಟಿಗೆ ಪ್ರವೇಶ ಶುಲ್ಕ ತಲಾ ರೂ. ೨೦ ಸಂಜೆಯ ಸಮಯದಲ್ಲಿ ಸಂಗೀತ ಕಾರಂಜಿ ವೀಕ್ಷಣೆಯನ್ನು ಒಳಗೊಂಡಿದೆ. ಆದರೆ, ದೈನಂದಿನ ಬೆಳಿಗ್ಗೆ ವೇಳೆ ವಾಕ್ ಮಾಡುವವರು ಬೆ. ೫ ರಿಂದ ೮.೩೦ ರವರೆಗೂ ಉಚಿತ ಪ್ರವೇಶವನ್ನು ಆನಂದಿಸುತ್ತಿದ್ದಾರೆ. ಪ್ರವೇಶ ಶುಲ್ಕ ಬೆ. ೮.೩೦ ರ ನಂತರ ಮಾತ್ರ ಪ್ರಾರಂಭವಾಗುತ್ತವೆ.
ಝಿಪ್ ಲೈನ್ ಆಕರ್ಷಣೆ
ಝಿಪ್ ಲೈನ್ ಪ್ರಿಯರು ಪ್ರತ್ಯೇಕ ರೂ.೩೦೦ ಶುಲ್ಕ ಪಾವತಿಸಬೇಕು. ತೋಟಗಾರಿಕಾ ಹಿರಿಯ ಅಧಿಕಾರಿ ಚಕ್ಕೇರ ಪ್ರಮೋದ್ ಅವರ ಪ್ರಕಾರ ಕಳೆದ ಏಪ್ರಿಲ್ನಲ್ಲಿ ಪ್ರಾರಂಭವಾದ ಝಿಪ್ ಲೈನ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಚಾಲನೆಯಲ್ಲಿದೆ. ಒಪ್ಪಂದದ ಪ್ರಕಾರ ಬೆಂಗಳೂರು ಮೂಲದ ಕಂಪೆನಿಯು ಮಾಸಿಕ ೩ ಲಕ್ಷ ರೂ. ವನ್ನು ತೋಟಗಾರಿಕಾ ಇಲಾಖೆಗೆ ಪಾವತಿಸುತ್ತಿದೆ. ಸುಸೂತ್ರವಾಗಿ ನಡೆಯುತ್ತಿರುವ ಝಿಪ್ ಲೈನ್ ಪಯಣ ಸಹಭಾಗಿತ್ವ ಒಪ್ಪಂದದ ಅನ್ವಯ ೫ ವರ್ಷ ಗಳವರೆಗೆ ಮುಂದುವರಿ ಯುತ್ತದೆ. ಬಹುಪಾಲು ಪ್ರವಾಸಿಗರು ಝಿಪ್ಲೈನ್ ಪಯಣ ಆನಂದಿಸುತ್ತಾರೆ. ೩ಏಳನೇ ಪುಟಕ್ಕೆ
ಕೂರ್ಗ್ ವಿಲೇಜ್ಗೆ ಪ್ರತ್ಯೇಕ ಗೇಟ್
(ಮೊದಲ ಪುಟದಿಂದ) ಕೂರ್ಗ್ ವಿಲೇಜ್ ಈ ಹಿಂದೆಯೇ ಪ್ರಾರಂಭಗೊAಡಿದ್ದು ಕೆಲವು ಕೊರತೆಯಿಂದಾಗಿ ಅಧಿಕೃತವಾಗಿ ಚಾಲನೆಗೊಂಡಿಲ್ಲ. ಕೂರ್ಗ್ ವಿಲೇಜ್ಗೆ ತೆರಳಲು ರಾಜಾಸೀಟು ಹೊರಭಾಗದಿಂದ ಪ್ರತ್ಯೇಕ ಗೇಟ್ಅನ್ನು ಇದೀಗ ನಿರ್ಮಿಸಲಾಗಿದೆ. ಒಳಭಾಗದಲ್ಲಿಯೂ ಮತ್ತೊಂದು ಗೇಟ್ ನಿರ್ಮಿಸಲಾಗುತ್ತಿದ್ದು ನೇರವಾಗಿ ತೆರಳುವಂತಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ೧೫ ಸ್ಟಾಲ್ಗಳನ್ನು ಈಗಾಗಲೇ ಸರಕಾರಿ ಇಲಾಖೆಗಳು, ಹಾಪ್ಕಾಮ್ಸ್, ಲ್ಯಾಂಪ್ ಸೊಸೈಟಿ ಸ್ತಿçà ಶಕ್ತಿ ಹಾಗೂ ಸ್ವಸಹಾಯ ಗುಂಪುಗಳು ಮೊದಲಾದ ಸಂಸ್ಥೆಗಳಿಗೆ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಇದೀಗ ಪ್ರತ್ಯೇಕ ಗೇಟ್ ಮತ್ತಿತರ ವ್ಯವಸ್ಥೆಗಳು ಪೂರ್ಣಗೊಂಡ ಬಳಿಕ ಮುಂದಿನ ಅಕ್ಟೋಬರ್ನಿಂದ ಈ ಸ್ಟಾಲ್ಗಳು ತೆರೆÀಯಲ್ಪಡುವುದಾಗಿ ಪ್ರಮೋದ್ ಮಾಹಿತಿಯಿತ್ತರು. ವಿವಿಧ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಜನರಿಗೆ ಈ ಮೂಲಕ ಅನುಕೂಲವಾಗಲಿದೆ. ಸ್ಟಾಲ್ಗಳಲ್ಲಿ ಕೃಷಿ ಉತ್ಪನ್ನಗಳು, ನವ ಸಿರಿಧಾನ್ಯ ಮೊದಲಾದ ಆಹಾರ ಪದಾರ್ಥಗಳು, ಕಾಫಿ ಉತ್ಪನ್ನಗಳನ್ನು ಮೊದಲಾಗಿ ಅನೇಕ ಉತ್ಪನ್ನಗಳನ್ನು ಮಾರಾಟಕ್ಕೆ ಇರಿಸಿಕೊಳ್ಳಲು ತಯಾರಿ ನಡೆದಿದೆ. ಪ್ರವಾಸಿಗರಿಗೆ ಕಾಫಿ , ತಿಂಡಿ ಪದಾರ್ಥಗಳೂ ಲಭ್ಯವಾಗಲಿವೆ.
ಗ್ರೇಟರ್ ರಾಜಾಸೀಟು ಅಪೂರ್ಣ ಕಾಮಗಾರಿ
ವಿಶಾಲವಾದ ಪ್ರಾಕೃತಿಕÀ ರಮ್ಯ ದರ್ಶನ ಕಲ್ಪಿಸುವ ಮತ್ತು ದೀರ್ಘÀ ವಾಕಿಂಗ್ ಪ್ರದೇಶವನ್ನು ಹೊಂದಿರುವ ಗ್ರೇಟರ್ ರಾಜಾಸೀಟು ವಿಭಾಗದ ಉಸ್ತುವಾರಿ ಪ್ರವಾಸೋದ್ಯಮ ಇಲಾಖೆಯಿಂದ ತೋಟಗಾರಿಕಾ ಇಲಾಖೆಗೆ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಲಾಗಿಲ್ಲ. ಈ ಬಗ್ಗೆ ಕೊಡಗು ಪ್ರವಾಸೋದ್ಯಮ ಪ್ರಬಾರ ಉಪ ನಿರ್ದೇಶಕ ಯತೀಶ್ ಉಳ್ಳಾಲ್ ಅವರ ಗಮನಕ್ಕೆ ತಂದಾಗ ಅವರು ಗ್ರೇಟರ್ ರಾಜಾಸೀಟು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಇನ್ನೂ ಪೂರ್ಣಗೊಳ್ಳಬೇಕಿದೆ., ಒಟ್ಟು ಯೋಜನಾ ವೆಚ್ಚವಾದ ರೂ ೪ ಕೋಟಿ ೯೮ ಲಕ್ಷದಲ್ಲಿ ಗುತ್ತಿಗೆದಾರರಿಗೆ ಇನ್ನೂ ರೂ ೩೦ ಲಕ್ಷ ಪಾವತಿಸಬೇಕಿದ್ದು , ಕಾಮಗಾರಿಯೂ ಬಾಕಿ ಇದೆ. ಈ ಬಗ್ಗೆ ವಾಸ್ತವಾಂಶವನ್ನು ಪರಿಶೀಲಿಸುವುದಾಗಿ ತಿಳಿಸಿದ ಅವರು, ಯೋಜನೆ ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ನಡುವೆ ಜನರು ಈ ವಿಶಾಲವಾದ ಪ್ರದೇಶದಲ್ಲಿ ವಾಕಿಂಗ್, ಜಾಗಿಂಗ್ ಮತ್ತು ರಮಣೀಯ ನಿಸರ್ಗದರ್ಶನ ಮಾಡಿ ಆನಂದಿಸುತ್ತಿರುವುದು ನಿತ್ಯಗೋಚರ.
ಸಣ್ಣ ಅಂಗಡಿಗಳಿಗೆ ಅವಕಾಶ
ಇತ್ತೀಚೆಗೆ ರಾಜಾಸೀಟು ಹೊರಆವರಣದಲ್ಲಿ ಕೆಲವರ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಸದ್ಯದಲ್ಲಿಯೇ ಸುಮಾರು ೨೫-೩೦ ಸಣ್ಣ ಅಂಗಡಿಗಳನ್ನು ಕಲ್ಪಿಸಿ ಬೀದಿಬದಿ ವ್ಯಾಪಾರಿಗಳಿಗೆ ಹರಾಜಿನ ಮೂಲಕ ನೀಡುವ ಪ್ರಕ್ರಿಯೆಯನ್ನು ಇಲಾಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಪ್ರಸಕ್ತ ಸ್ಥಿತಿಯಲ್ಲಿ ಯಾವದೇ ಅಂಗಡಿಗಳಿಲ್ಲದೆ ರಾಜಾಸೀಟಿಗೆ ಬರುವವರಿಗೆ ಅನಾನುಕೂಲವಾಗಿದೆ. ಝಿಪ್ ಲೈನ್ ಬಳಿಯಲ್ಲಿ ಶೌಚಾಲಯವೊಂದನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಎಲ್ಲರ ಅನುಕೂಲಕ್ಕಾಗಿ ಮತ್ತೊಂದು ಶೌಚಾಲಯ ನಿರ್ಮಾಣದ ಕಾಮಗಾರಿ ಗ್ರೇಟರ್ ರಾಜಾಸೀಟು ಯೋಜನೆಯಲ್ಲಿದ್ದು ಇನ್ನು ನಿರ್ಮಾಣಗೊಳ್ಳಬೇಕಿದೆ.
-ವರದಿ: “ಚಕ್ರವರ್ತಿ”, ಚಿತ್ರಗಳು: ಲಕ್ಷಿö್ಮÃಶ್