ಮಡಿಕೇರಿ, ಆ. ೨೧: ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಇಂಜಿಲಗೆರೆ, ಸಿದ್ದಾಪುರ, ಪುಲಿಯೇರಿ, ಗೌರಿ ಗ್ರಾಮದಲ್ಲಿ ಅಂಚೆ ಪತ್ರಗಳನ್ನು ವಿತರಣೆ ಮಾಡುತ್ತಿದ್ದ ಪೋಸ್ಟ್ಮ್ಯಾನ್ ಗಂಗಾಧರ ಅವರು ನಿವೃತ್ತಿಗೊಂಡ ಹಿನ್ನೆಲೆ ಸನ್ಮಾನಿಸಲಾಯಿತು.

ಜಿಮ್ಮಿ ಸಿಕ್ವೇರ, ಗಿರೀಶ್, ರಿಷಾ ಸುರೇಂದ್ರ, ಗಂಗಾಧರ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಗ್ರಾಮದ ಪ್ರಮುಖರಾದ ಸಹದೇವನ್, ಎಂ.ಜಿ. ರಾಜು, ವೆಂಕಪ್ಪ ರೈ ಭಾಗವಹಿಸಿದ್ದರು.

ನಂತರ ಎಸ್.ಎನ್.ಡಿ.ಎಂ. ಪುಲಿಯೇರಿ ಶಾಖೆ, ಗೌರಿ ಶಾಖೆ, ನವಚೈತನ್ಯ ಸ್ವ ಸಹಾಯ ಸಂಘ, ಅನುಶ್ರೀ ಶಕ್ತಿ ಸಂಘ, ನಿವೃತ್ತ ಶಿಕ್ಷಕ ಜಿಮ್ಮಿ ಸಿಕ್ವೇರಾ ಅವರುಗಳು ಸನ್ಮಾನಿಸಿ ಗೌರವಿಸಿದರು.