ಚೆಯ್ಯಂಡಾಣೆ, ಆ. ೨೦: ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಕಟ್ಟಡಕ್ಕೆ ಸಹಕರಿಸಿದ ದಾನಿಗಳಿಗೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು.

ದಾನಿಗಳ ಪರಿಚಯವನ್ನು ಗ್ರಾ.ಪಂ. ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾಡಿ ಗ್ರಾ.ಪಂ. ಆರ್ಥಿಕ ಕೊರತೆ ಬಂದಾಗ ಬೆನ್ನೆಲುಬಾಗಿ ಸಹಕರಿಸಿದ ದಾನಿಗಳನ್ನು ನೆನೆಯುವ ಕಾರ್ಯಕ್ರಮ ಇದಾಗಿದ್ದು ಇದಕ್ಕೆ ತೆರೆಮರೆಯಲ್ಲಿ ಹಲವಾರು ದಾನಿಗಳು ಹಾಗೂ ಗುತ್ತಿಗೆದಾರರು ಸಹಕರಿಸಿದ್ದಾರೆ ಎಂದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ಆಡಳಿತ ಮಂಡಳಿ ಆಯ್ಕೆಯಾದ ಎರಡೂವರೆ ವರ್ಷದಲ್ಲೇ ಒಂದು ಉತ್ತಮ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಸಹಕರಿಸಿದ್ದಾರೆ. ನಮ್ಮ ಗ್ರಾಮ ಪಂಚಾಯಿತಿ ಕೊಡಗಿನಲ್ಲಿ ಮೊದಲನೇ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿ ಹಾಗೂ ರಾಷ್ಟçದಲ್ಲಿ ಕೂಡ ಒಂದು ಉತ್ತಮ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.

ಪೀಠೋಪಕರಣ ನೀಡಿ ಸನ್ಮಾನ ಸ್ವೀಕರಿಸಿದ ದಾನಿಗಳು: ಕಡಂಗ ಪ್ರಾ.ಕೃ.ಗ್ರಾ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಚೆಯ್ಯಂಡಾಣೆ ಪ್ರಾ.ಕೃ.ಗ್ರಾ ಸಹಕಾರ ಸಂಘದ ಪರವಾಗಿ ಉಪಾಧ್ಯಕ್ಷ ಬಾಚಮಂಡ ಸುಬ್ರಮಣಿ, ನಡಿಕೇರಿಯಂಡ ಅರ್ಜುನ್ ಕಾವೇರಪ್ಪ, ಅಬ್ದುಲ್ ರೆಹಮಾನ್ ಪಾರ್ಕೊ, ಬೊಳ್ಳಚೆಟ್ಟಿರ ಎಂ. ಸುರೇಶ, ಪೊನ್ನಚಂಡ ಎಸ್. ಮಾದಪ್ಪ, ಬೊವ್ವೇರಿಯಂಡ ರಾಜ ಸುಬ್ಬಯ್ಯ, ಬಟ್ಟಿಯಂಡ ಸಾಬಾ ಬೆಳ್ಯಪ್ಪ, ಇಸ್ಮಾಯಿಲ್ ಕೆ.ಯು., ಕರವಟ್ಟಿರ ಜಯ ಈರಪ್ಪ, ಕೋಡಿರ ಕುಶಕುಮಾರ್.

ಕಟ್ಟಡ ಕಾಮಗಾರಿ ನಿರ್ವಹಿಸಲು ಸಹಕರಿಸಿದ ಗುತ್ತಿಗೆದಾರರಾದ ಕಾರ್ತಿಕ್ ಟಿ.ಕೆ., ಸುರೇಶ್ ಬಿ.ಆರ್., ಶಿವಕುಮಾರ್ ಟಿ.ಎಂ., ರವಿ ಟಿ.ಎಂ, ರಾಜೇಶ್ ಟಿ.ಟಿ. ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.