ಹೆಮ್ಮೆಯ ದಿನ

ಈ ದಿನವನ್ನು ನಾವು ಆಗಸ್ಟ್ ೧೫ರಂದು ೧೯೪೭ರಲ್ಲಿ ಪಡೆದಿದ್ದೇವೆ. ನಾವು ನಮ್ಮ ಹೆಮ್ಮೆಯ ದಿನವೆಂದು ಆಚರಿಸುತ್ತೇವೆ. ಈ ದೇಶದ ಗಣ್ಯ ವ್ಯಕ್ತಿಗಳು ನಮ್ಮ ದೇಶದ ಸ್ವಾತಂತ್ರö್ಯ ಕ್ಕಾಗಿ ಬಹುಕಾಲ ಶ್ರಮಿಸಿ. ನಮ ಗಾಗಿ ಸ್ವಾತಂತ್ರö್ಯ ತಂದುಕೊಟ್ಟಿರುವ ಮಹಾತ್ಮ ಗಾಂಧೀಜಿಯವರು ಹಾಗೂ ಎಲ್ಲಾ ಗಣ್ಯವ್ಯಕ್ತಿಗಳ ಶ್ರಮ ದಿಂದ ನಮಗೆ ಸ್ವಾತಂತ್ರö್ಯ ಸಿಕ್ಕಿರು ತ್ತದೆ. ಜೈ ಭಾರತ್ ಮಾತಾಕಿ

-ಪ್ರಕೃತಿ ಕಾರ್ಯಪ್ಪ,

೬ನೇ ತರಗತಿ

ಸಂತ ಜೋಸೆಫರ ಶಾಲೆ, ಮಡಿಕೇರಿ.ಯೋಧರಿಗೆ ವಂದನೆ

ನನ್ನ ದೇಶ ಭಾರತ. ತ್ರಿವರ್ಣ ಧ್ವಜವು ಭಾರತದ ರಾಷ್ಟಿçಯ ಧ್ವಜವಾಗಿದೆ. ನಾವು ಪ್ರತಿ ವರ್ಷ ಆಗಸ್ಟ್ ೧೫ರಂದು ಸ್ವಾತಂತ್ರö್ಯದಿನವನ್ನು ಆಚರಿಸುತ್ತೇವೆ. ಲಕ್ಷಾಂತರ ಭಾರತೀಯರು ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿ ಸ್ವಾತಂತ್ರö್ಯವನ್ನು ತಂದುಕೊಟ್ಟಿದ್ದಾರೆ. ನಾವು ಶಾಲೆಯಲ್ಲಿ ರಾಷ್ಟçಗೀತೆಯನ್ನು ಬೆಳಗ್ಗೆ ಎಲ್ಲರೂ ಸೇರಿ ಹಾಡುತ್ತೇವೆ. ಜನಗಣಮನ, ಝಂಡ ಹೂಂಚ ರಹೇ ಹಮಾರ ಗೀತೆಗಳನ್ನು ಹೇಳುವಾಗ, ಕೇಳುವಾಗ ಮೈ ರೊಮಾಂಚನವಾಗುತ್ತೆ. ನಮ್ಮ ದೇಶವನ್ನು ಹಗಲು ರಾತ್ರಿ ಎನ್ನದೇ ಕಾಯುವ ಸೈನಿಕರಿಗೂ, ಪೊಲೀಸರಿಗೂ ಅನುದಿನವೂ ವಂದನೆಯನ್ನು ಸಲ್ಲಿಸುವಂತಾಗಬೇಕು. ನಮ್ಮ ದೇಶದ ಬೆನ್ನೆಲುಬಾಗಿರುವಂತ ರೈತರನ್ನು ಪ್ರೋತ್ಸಾಹಿಸಬೇಕು. ನಮ್ಮ ದೇಶದ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ತಿಳಿಹೇಳಬೇಕು. ಎಲ್ಲರ ರಕ್ತದಲ್ಲಿ ರಾಷ್ಟçಪ್ರೇಮ ಹರಿದಾಡಬೇಕು. ‘ಭಾರತ್ ಮಾತ ಕೀ ಜೈ, ಜೈ ಹಿಂದ್’

-ನಿಶ್ಚಿತ ಬಿ.ಪಿ., ಸಂತ ಜೋಸೆಫರ ಶಾಲೆ, ಮಡಿಕೇರಿ

ತ್ಯಾಗ, ಬಲಿದಾನದ ಕೈಗನ್ನಡಿ

ನಮ್ಮ ಮಾತೃಭೂಮಿಯಾದ ಭಾರತಾಂಬೆಯನ್ನು ನಮ್ಮ ತಾಯಿಯಷ್ಟೇ ಪ್ರೀತಿಸಿ, ಗೌರವಿಸಬೇಕು. ಭಾರತ ಮಾತೆಯ ಮಡಿಲಲ್ಲಿ ಬೆಳೆಯುತ್ತಿರುವ ಪ್ರತಿಯೊಬ್ಬ ಪ್ರಜೆಯೂ ದೇಶದ ಒಳಿತಿಗಾಗಿ ಶ್ರಮಿಸಬೇಕು. ದೇಶದ ರಕ್ಷಣೆ, ಅಭಿವೃದ್ಧಿ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂಬುದನ್ನು ಅರಿತುಕೊಳ್ಳ ಬೇಕು. ನಮ್ಮಲ್ಲಿ ದೇಶಪ್ರೇಮ ಮೂಡಿದಾಗ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುತ್ತದೆ. ನಮ್ಮ ದೇಶದ ಸ್ವಾತಂತ್ರö್ಯಕ್ಕೋಸ್ಕರ ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳ, ವೀರಯೋಧರ ಬಗ್ಗೆ ನಾವು ಅರಿತಿದ್ದೇವೆ. ಈಗಲೂ ದೇಶದ ರಕ್ಷಣೆಯಲ್ಲಿ ತೊಡಗಿ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶ ಸೇವೆ ಮಾಡುತ್ತಿರುವ ಯೋಧರು ಅದೆಷ್ಟೋ...ಈ ಯೋಧರ ತ್ಯಾಗ, ಬಲಿದಾನ ರಾಷ್ಟçಪ್ರೇಮಕ್ಕೆ ಕನ್ನಡಿ ಹಿಡಿದಂತಿದೆ.

ದೇಶಕೋಸ್ಕರ ಹುತಾತ್ಮರಾದ ವೀರಯೋಧರನ್ನು ನಮಿಸುತ್ತಾ ಅವರ ರಾಷ್ಟçಕ್ಕೆ ಪ್ರೇಮವನ್ನು ಶ್ಲಾಘಿಸುತ್ತಾ ಅವರು ನಡೆದ ಹಾದಿಯಲ್ಲಿ ಮುಂದಾಗೋಣ. ವಂದೇ ಮಾತರಂ.

-ರೋಷನ್ ಆರ್. ನಾಯ್ಕ್, ೪ನೇ ತರಗತಿ

ಸಂತ ಅನ್ನಮ್ಮ ಶಾಲೆ, ವೀರಾಜಪೇಟೆ ರಾಷ್ಟçಧ್ವಜವನ್ನು ಪ್ರೀತಿಸುತ್ತೇನೆ

ಭಾರತದ ರಾಷ್ಟç ಧ್ವಜವನ್ನು ಜುಲೈ ೨೨, ೧೯೪೭ರಂದು ಅಂಗೀಕರಿಸಲಾಯಿತು.

ರಾಷ್ಟçಧ್ವಜವನ್ನು ಪಿಂಗಳಿ ವೆಂಕಯ್ಯ ವಿನ್ಯಾಸ ಗೊಳಿಸಿದರು.

ರಾಷ್ಟçಧ್ವಜವು ನಮ್ಮ ರಾಷ್ಟçದ ಗೌರವ ಮತ್ತು ಹೆಮ್ಮೆಯ ಸಂಕೇತವಾಗಿದೆ.

ರಾಷ್ಟçಧ್ವಜವು ೩.೨ರ ಉದ್ದ ಮತ್ತು ಅಗಲದ ಅನುಪಾತವಾಗಿದೆ.

ಇದನ್ನು ತ್ರಿವರ್ಣಧ್ವಜವೆಂದು ಕರೆಯಲಾಗುತ್ತದೆ.

ಪ್ರತಿಯೊಂದು ಬಣ್ಣವು ವಿಭಿನ್ನ ಅರ್ಥಗಳನ್ನು ಸಂಕೇತಿಸುತ್ತವೆ.

ಭಾರತೀಯ ಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿವೆ.

ರಾಷ್ಟçಧ್ವಜದ ಮಧ್ಯದಲ್ಲಿ ‘ಅಶೋಕ ಚಕ್ರ’ವೆÀಂದು ಕರೆಯಲ್ಪಡುವ ನೀಲಿ ಚಕ್ರವನ್ನು ಒಳಗೊಂಡಿದೆ.

ಕೇಸರಿ ಬಣ್ಣವು ಧೈರ್ಯ, ತ್ಯಾಗವನ್ನು ಸೂಚಿಸುತ್ತದೆ.

ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ.

ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ನಾನು ನನ್ನ ರಾಷ್ಟç ಧ್ವಜವನ್ನು ಪ್ರೀತಿಸುತ್ತೇನೆ.

-ರಿಂಶಾ ಎನ್.ಎನ್., ೬ನೇ ತರಗತಿ

ಸಂತ ಜೋಸೆಫರ ಶಾಲೆ, ಮಡಿಕೇರಿನಾವು ನಮ್ಮ ರಾಷ್ಟçಧ್ವಜವನ್ನು ಗೌರವಿಸುತ್ತೇವೆ ಮತ್ತು ನಮ್ಮ ದೇಶದ ಒಳಿತಿಗಾಗಿ ಅದರ ಎಲ್ಲಾ ಸಂದೇಶಗಳನ್ನು ಅನುಸರಿಸುತ್ತೇವೆ. ನಮ್ಮ ರಾಷ್ಟçಧ್ವಜವನ್ನು ವಿಶ್ವದ ಅಗ್ರಸ್ಥಾನದಲ್ಲಿ ಏರಿಸುವ ಪ್ರತಿಜ್ಞೆ ಯನ್ನು ತೆಗೆದುಕೊಳ್ಳುತ್ತೇವೆ, ಅದು ಭಾರತದ ಪರಂಪರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಎಲ್ಲಾ ದೇಶಗಳು ಭಾರತವನ್ನು ವಿಶ್ವ ನಾಯಕನಾಗಿ ಮಾತ್ರವಲ್ಲದೆ ಎಲ್ಲಾ ದೇಶಗಳ ತಂದೆಯಾಗಿಯೂ ನೋಡುತ್ತವೆ. ಕುಟುಂಬ ಸದಸ್ಯರಿಗೆ ಮಾರ್ಗದರ್ಶನ ನೀಡಿ ಸೌಹಾರ್ದತೆ ಕಾಪಾಡುವುದು ತಂದೆಯ ಕೆಲಸವಂತೆ. ಭಾರತ ಮತ್ತು ಅದರ ಧ್ವಜ ಕೂಡ ಅಂತಹ ಅವಕಾಶ ಮತ್ತು ಗೌರವವನ್ನು ಪಡೆಯುತ್ತದೆ. ಇಡೀ ಜಗತ್ತನ್ನು ಕುಟುಂಬವಾಗಿ ನೋಡುವುದು ಭಾರತದ ಪರಂಪರೆ.

-ಮಿಂಚು. ಕೆ. ಎಲ್. ೧೦ ನೇ ತರಗತಿ

ಸಂತ ಜೋಸೆಫರ ಶಾಲೆ, ಮಡಿಕೇರಿ ಹೆಮ್ಮೆಯ ಕ್ಷಣ

ಸ್ವಾತಂತ್ರö್ಯ ದಿನಾಚರಣೆ ೨೦೨೩ ಸ್ವಾತಂತ್ರö್ಯ ದಿನವು ಭಾರತದ ರಾಷ್ಟಿçÃಯ ಹಬ್ಬವಾಗಿದೆ. ಈ ದಿನವನ್ನು ಪ್ರತಿ ವರ್ಷ ಆಗಸ್ಟ್ ೧೫ರಂದು ಆಚರಿಸ ಲಾಗುತ್ತದೆ.

ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರö್ಯ ದೊರೆತ ಕಾರಣ ಈ ದಿನವನ್ನು ಆಚರಿಸಲಾಗುತ್ತದೆ. ಭಾರತ ೧೫ ಆಗಸ್ಟ್ ೧೯೪೭ ರಂದು ಸ್ವತಂತ್ರ ರಾಷ್ಟçವಾಯಿತು. ಈ ದಿನದಂದು ಪ್ರತಿ ವರ್ಷ ರಾಷ್ಟçಧ್ವಜವನ್ನು ಹಾರಿಸಲಾಗುತ್ತದೆ. ಭಾರತದ ಸ್ವಾತಂತ್ರö್ಯಕ್ಕೆ ಹೋರಾಡಿದ ಮಹನೀಯರನ್ನು ನೆನಪಿಸುವ ದಿನವಾಗಿದೆ.

ಪ್ರಧಾನಮಂತ್ರಿಯವರು ಈ ದಿನದಂದು ಕೆಂಪುಕೋಟೆಯಿAದ ಇಡೀ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇದು ದೇಶದ ಅತ್ಯಂತ ಹೆಮ್ಮೆಯ ಕ್ಷಣ. ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮದ ಭಾವನೆಯನ್ನು ಮೂಡಿಸುತ್ತದೆ. ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ.

-ಪಿ.ಪಿ. ಕುಟ್ಟಪ್ಪ, ೬ನೇ ತರಗತಿ,

ರೋಟರಿ ಶಾಲೆ, ವೀರಾಜಪೇಟೆ ಭಾರತವು ಪ್ರಜಾಪ್ರಭುತ್ವ ದೇಶವಾಗಿದೆ.. ೧೯೪೭ ನೇ ಆಗಸ್ಟ್ಟ್ ೧೫ ರಂದು ಬ್ರಿಟಿಷರ ಕೈ ಮುಷ್ಟಿಯೊಳಗೆ ಇದ್ದ ನಮಗೆ ಸ್ವಾತಂತ್ರö್ಯ ಸಿಕ್ಕಿತು. ಇದಕ್ಕಾಗಿ ಹೋರಾಡಿ ವೀರ ಮರಣವೆತ್ತ ಅನೇಕ ವೀರರು ಇದ್ದಾರೆ. ತ್ರಿವರ್ಣ ಧ್ವಜವು ನಮ್ಮ ದೇಶದ ಅಖಂಡತೆ, ಐಕ್ಯತೆಯನ್ನು ಸಾರುತ್ತದೆ. ದೇಶಪ್ರೇಮದ ಜೊತೆ ದೇಶಕ್ಕಾಗಿ ಪ್ರಾಣತೆತ್ತವರನ್ನು ಸ್ಮರಿಸೋಣ. ಪ್ರತಿ ಮನೆಗಳಲ್ಲಿ ರಾಷ್ಟç ಧ್ವಜ ಹಾರಿಸುವ ಮೂಲಕ ದೇಶಪ್ರೇಮವ ಮೆರೆಯೋಣ ಎಲ್ಲರಿಗೂ ಸ್ವಾತಂತ್ರö್ಯ ದಿನದ ಶುಭಾಶಯಗಳು.

-ವಿಶ್ಮಾ ದಯಾನಂದ ರೈ ೬ ತರಗತಿ.

ನ್ಯಾಷನಲ್ ಅಕಾಡೆಮಿ ಸ್ಕೂಲ್, ಅತ್ತೂರು

ರಾಷ್ಟçಧ್ವಜಕ್ಕೆ ವಂದಿಸೋಣ

ನಾವು ಭಾರತ ಭೂಮಿಯಲ್ಲಿ ಹುಟ್ಟಿದ್ದೇ ನಮ್ಮ ಅದೃಷ್ಟ. ಅನೇಕತೆಯಲ್ಲಿ ಐಕ್ಯಮಂತ್ರ ದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯ ಚೆಂದದ ಹೆಮ್ಮೆಯ ದೇಶ ನನ್ನೀ ದೇಶ. ನಮ್ಮ ದೇಶದ ಶ್ರೇಷ್ಠತೆ, ನಮ್ಮ ಹಿರಿಮೆ ಗರಿಮೆಯ ಸಂಕೇತವೂ. ನೂರಾರು ಭಾಷೆಗಳು ಸಾವಿರಾರು ಜಾತಿಗಳು ಹತ್ತು ಹಲವು ಧರ್ಮಗಳಿಂದ ಒಂದೇ ಎಂದು ಬೀಗುತ್ತಿರುವ ಹೆಮ್ಮೆಯ ರಾಷ್ಟç. ದಾಸ್ಯದ ಸಂಕೋಲೆ ಕಳಚಿ ಸ್ವಾತಂತ್ರö್ಯದ ಕಹಳೆ ಊದಿ ತ್ರಿವರ್ಣ ಧ್ವಜವ ಏರಿಸಿ ತ್ಯಾಗ ಬಲಿದಾನಗಳ ಮಂತ್ರಘೋಷ ಮೊಳಗಿಸಿ ಅಮರರಾದ ದೇಶಭಕ್ತರ ನೆನೆದು ಪುಳಕ ಮೂಡಿಸಿ, ಈ ಪುಣ್ಯಭೂಮಿ ನಿಜಕ್ಕೂ ಶ್ರೇಷ್ಠವೂ. ಸಾಧಕರು, ರೈತರು, ಸೈನಿಕರು ಪಡೆದಿರುವ ಪುಣ್ಯದೇಶ ನಮ್ಮ ಭಾರತ ದೇಶವು.

- ದಿನೇಶ್ ಎಸ್. ಕೆ., ೫ನೇ ತರಗತಿ, ಮಡಿಕೇರಿ.

ನನ್ನ ಭಾರತ ಶ್ರೇಷ್ಠ ಭಾರತ

ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ವಿಶ್ವದ ಅತ್ಯಂತ ಮಹತ್ವದ ಆಧುನಿಕ ಪ್ರಜಾಪ್ರಭುತ್ವವಾಗಿದೆ. ನನ್ನ ರಾಷ್ಟçವು ಎಲ್ಲಾ ಬಾಹ್ಯಾಕಾಶ ಸಂಶೋಧನೆ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ನನ್ನ ದೇಶವು ತನ್ನ ಸ್ವಾತಂತ್ರö್ಯವನ್ನು ಗೆಲ್ಲಲು ಬಹಳ ಕಷ್ಟಪಟ್ಟು ತ್ಯಾಗ ಮಾಡಿ ಸಹ ಪರಿಶ್ರಮಪಟ್ಟಿತು. ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ.

ನನ್ನ ದೇಶವು ದೇಹಗಳಿಂದ ತುಂಬಿರುವ ಹಳ್ಳಿಗಳು ಮತ್ತು ಹೊಲಗಳ ನಾಡು, ನಮ್ಮ ದೇಶದ ಬಹುಪಾಲು ಮಹಾನ್ ನಾಯಕರು ಹಳ್ಳಿಗಳಿಂದ ಬಂದವರು. ನಮ್ಮ ಕ್ಷೇತ್ರಗಳು ಗಂಗಾ, ಯಮುನಾ, ಬ್ರಹ್ಮಪುತ್ರ, ಗೋದಾವರಿ, ನರ್ಮದಾ, ಕೃಷ್ಣ ಮತ್ತು ಕಾವೇರಿಯಂತಹ ಪ್ರಬಲ ನದಿಗಳಿಂದ ಪೋಷಿಸಲ್ಪಡುತ್ತದೆ. ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಧಾರ್ಮಿಕ ಪ್ರಾದೇಶಿಕ ಭಾಷಾ ವೈವಿಧ್ಯತೆಯ ಎಲ್ಲಾ ಪರಿಗಣನೆಗಳನ್ನು ಮೀರಿದೆ. ಭಾರತವು ಅಹಿಂಸೆ ಮತ್ತು ನ್ಯಾಯದ ತತ್ವಗಳ ಆಧಾರದ ಮೇಲೆ ಸ್ವಾತಂತ್ರö್ಯ ಹೋರಾಟ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಶ್ರೀಮಂತ ಇತಿಹಾಸದಿಂದ ನಿರ್ಮಿಸಲ್ಪಟ್ಟ ಒಂದು ಅನನ್ಯ ರಾಷ್ಟçವಾಗಿದೆ. ಇದು ಸಾಂಸ್ಕೃತಿಕ ಬೆಳವಣಿಗೆಯ ಶ್ರೀಮಂತ ಇತಿಹಾಸದಿಂದ ಏಕತೆಯ ಎಳೆಯಲ್ಲಿ ನಿರ್ಮಿಸಲ್ಪಟ್ಟಿದೆ. ಇತಿಹಾಸದ ನಡುವೆ ಪರಸ್ಪರ ತಿಳುವಳಿಕೆಯ ಪ್ರಜ್ಞೆಯು ವೈವಿಧ್ಯತೆಯಲ್ಲಿ ವಿಶೇಷ ಏಕತೆಯನ್ನು ಸಕ್ರಿಯಗೊಳಿಸಿದೆ. ಭಾರತವು ಪ್ರಪಂಚದಾದ್ಯAತ ಪ್ರಸಿದ್ಧ ದೇಶವಾಗಿದೆ.

-ಜಸ್ಮಿತ ಬಿ. ಸಿ., ೮ನೇ ತರಗತಿ

ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ಹೆಮ್ಮೆಯ ದೇಶ ಭಾರತ. ಈ ಪುಣ್ಯಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು. ನಮ್ಮ ದೇಶಕ್ಕೆ ಸ್ವಾತಂತ್ರö್ಯವನ್ನು ತಂದು ಕೊಡಲು ಹಲವಾರು ಮಹನೀಯರು ಶ್ರಮಿಸಿದ್ದಾರೆ ಹಾಗೂ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಸ್ವಾತಂತ್ರö್ಯವನ್ನು ಉಳಿಸಿಕೊಂಡು ಹೋಗುವುದು ಹಾಗೂ ದೇಶವನ್ನು ಶಕ್ತಿಯುತಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ನಮಗೆ ದೇಶದ ಬಗ್ಗೆ ಪ್ರೀತಿ, ಗೌರವ ಸಮರ್ಪಣಾ ಮನೋಭಾವವಿರಬೇಕು. ನಮ್ಮ ಸಂಸ್ಕೃತಿಯನ್ನು ಆಚರಿಸಬೇಕು. ದೇಶಕಾಯುವ ಯೋಧರ ಬಗ್ಗೆ ಅಭಿಮಾನವಿರಬೇಕು. ನಮ್ಮ ದೇಶದಲ್ಲಿ ಹಲವಾರು ಜಾತಿ ಧರ್ಮಗಳಿದ್ದರೂ ನಾವೆಲ್ಲರೂ ಒಂದೇ ಎಂದು ಒಗ್ಗಟ್ಟಾಗಿದ್ದರೆ ದೇಶ ಅಭಿವೃದ್ಧಿಯಾಗುತ್ತದೆ. ನಮ್ಮೆಲ್ಲರ ರಕ್ತದಲ್ಲಿ ದೇಶಪ್ರೇಮ ತುಂಬಿರಬೇಕು. ದೇಶಕ್ಕಾಗಿ ಹೋರಾಡುವ ಛಲವಿರಬೇಕು. ಮಹಾನ್ ಹೋರಾಟಗಾರರ ನುಡಿಗಳನ್ನು ಸದಾ ನಾವು ಸ್ಮರಿಸಬೇಕು. ‘‘ಜೈ ಹಿಂದ್’’

- ಪೂರ್ವಿಕಾ ಕೆ. ಎಸ್., ೧೦ನೇ ತರಗತಿ

ಶ್ರೀ ಕೃಷ್ಣ ವಿದ್ಯಾ ಮಂದಿರ ಶಾಲೆ, ಸಿದ್ದಾಪುರ.