ಮುಳ್ಳೂರು, ಆ. ೨೧: ರೋಟರಿ ಮಲ್ಲೇಶ್ವರ ಆಲೂರು ಸಿದ್ದಾಪುರ ಇವರ ವತಿಯಿಂದ ರೋಟರಿ ಸಂಸ್ಥೆಯ ವನಮಹೋತ್ಸವ ಯೋಜನೆಯಡಿಯಲ್ಲಿ ಸಮೀಪದ ಬಾಣವಾರ ಅರಣ್ಯ ಉಪ ವಲಯ ಕಚೇರಿಯ ಸುತ್ತಮುತ್ತ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ರೋಟರಿ ಮಲ್ಲೇಶ್ವರ ಆಲೂರು ಸಿದ್ದಾಪುರ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ-ರೋಟರಿ ಸಂಸ್ಥೆಯು ಸಮಾಜ ಸೇವೆ, ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಜೊತೆಯಲ್ಲಿ ಅರಣ್ಯ, ಪರಿಸರ, ಆರೋಗ್ಯ, ಶಿಕ್ಷಣ ಇನ್ನು ಮುಂತಾದ ಕ್ಷೇತ್ರದ ಪ್ರಗತಿಗಾಗಿ ಸರಕಾರದ ಜೊತೆಗೆ ಕೈಜೋಡಿಸುತ್ತಿದೆ ಎಂದರು. ರೋಟರಿ ಸಂಸ್ಥೆಯ ಯೋಜನೆಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಒಂದಾಗಿದ್ದು ಈ ನಿಟ್ಟಿನಲ್ಲಿ ಆಲೂರು ಸಿದ್ದಾಪುರ ಮಲ್ಲೇಶ್ವರ ರೋಟರಿ ಸಂಸ್ಥೆಯಿAದ ವನಮಹೋತ್ಸವದ ಅಂಗವಾಗಿ ಸದರಿ ಅರಣ್ಯ ಇಲಾಖೆ ಕಚೇರಿಯ ಸುತ್ತಮುತ್ತಲಿನ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದ ಅವರು ಸಾರ್ವಜನಿಕರು ರೋಟರಿ ಸಂಸ್ಥೆಯ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.

ಗಿಡ ನೆಡುವ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್, ಸದಸ್ಯರಾದ ಜಿ.ಎಂ.ಹೇಮAತ್, ಪ್ರಕಾಶ್, ಎಂ.ಇ.ವೆAಕಟೇಶ್, ಉಪ ವಲಯ ಅರಣ್ಯಾಧಿಕಾರಿ ರಾಕೇಶ್, ಅರಣ್ಯ ರಕ್ಷಕರಾದ ಪ್ರಕಾಶ್, ಪ್ರಸಾದ್, ಸದಾನಂದ ಹಿಪ್ಪರಗಿ ಅರಣ್ಯ ಇಲಾಖೆ ಸಿಬ್ಬಂದಿ ಸತೀಶ್ ಗೌಡ, ಚಟ್ಯಪ್ಪ, ಪ್ರವೀಣ್, ಧರ್ಮ, ವಿಕಾಸ್ ಮುಂತಾದವರು ಇದ್ದರು.