ಚೆಯಂಡಾಣೆ, ಆ. ೨೦: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ಕಡಂಗ ಸೆಕ್ಟರ್ ವತಿಯಿಂದ ಸೆಪ್ಟೆಂಬರ್ ೧೦ ರಂದು ಬೆಂಗಳೂರುವಿನಲ್ಲಿ ನಡೆಯಲಿರುವ ಎಸ್‌ಎಸ್‌ಎಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರಾರ್ಥ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಟಶೈಖುನಾ ಮಹ್ಮೂದ್ ಉಸ್ತಾದರ ಮಖ್ಬರ ಝಿಯಾರತ್‌ನೊಂದಿಗೆ ಕಿಕ್ಕರೆಯಿಂದ ಪ್ರಾರಂಭಗೊAಡ ಬೈಕ್ ಜಾಥಾ ಎಡಪಾಲ, ಕೊಕ್ಕಂಡಬಾಣೆ ಮೂಲಕ ಸಂಚರಿಸಿ ಕಡಂಗ ಪಟ್ಟಣದಲ್ಲಿ ಸಮಾಪ್ತಿಗೊಂಡಿತ್ತು.

ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಸ್‌ಎಫ್ ಕಡಂಗ ಸೆಕ್ಟರ್ ಅಧ್ಯಕ್ಷ ಶಮೀರ್ ಸಖಾಫಿ ಸೆಪ್ಟೆಂಬರ್ ೧೦ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಲಕ್ಷಾಂತರ ಕಾರ್ಯಕರ್ತರು ಸಂಗಮಗೊಳ್ಳುವ ಎಸ್‌ಎಸ್‌ಎಫ್ ಗೋಲ್ಡನ್ ೫೦ ಮಹಾ ಸಮ್ಮೇಳನ ನಡೆಯಲಿದೆ ಎಂದರು.

ಈ ಸಂದರ್ಭ ಎಸ್‌ಎಸ್‌ಎಫ್ ವೀರಾಜಪೇಟೆ ಡಿವಿಷನ್ ಕೋಶಾಧಿಕಾರಿ ಇಸ್ಮಾಯಿಲ್ ಅಹ್ಸನಿ, ಕಡಂಗ ಸೆಕ್ಟರ್ ಕಾರ್ಯದರ್ಶಿ ಶಮೀರ್, ಕಡಂಗ ಶಾಖಾ ಅಧ್ಯಕ್ಷ ರಾಫಿ ಝೈನಿ, ಕಾರ್ಯದರ್ಶಿ ರಾಝಿಕ್, ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಎಂಜೆ ಕಾರ್ಯಕರ್ತರು ಉಪಸ್ಥಿತರಿದ್ದರು.