ಕುಶಾಲನಗರ, ಆ. ೨೦: ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಶೌಚಾಲಯದ ತ್ಯಾಜ್ಯ ತೆರವು ಗೊಳಿಸಿ ಟ್ಯಾಂಕರ್ ಮೂಲಕ ಸಾಗಿಸಿ ಮಡಿಕೇರಿ ರಸ್ತೆಯ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿ ಯಲ್ಲಿ ವಿಲೇವಾರಿ ಮಾಡುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿ ವಾಹನ ವಶಪಡಿಸುವು ದರೊಂದಿಗೆ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪಿರಿಯಾಪಟ್ಟಣಕ್ಕೆ ಸೇರಿದ ಟ್ಯಾಂಕರ್ (ಏಂ-೪೩ ಂ೦೬೩೩) ನಲ್ಲಿ ಶೌಚ ತ್ಯಾಜ್ಯವನ್ನು ಅರಣ್ಯದ ಒಳಗೆ ಪೈಪ್ ಮೂಲಕ ಬಿಡುತ್ತಿದ್ದ ಸಂದರ್ಭ ಮೀಸಲು ಅರಣ್ಯದ ಉಪ ವಲಯ ಅರಣ್ಯ ಅಧಿಕಾರಿ ಗಳಾದ ಅನಿಲ್ ಡಿಸೋಜಾ ಮತ್ತು ದೇವಯ್ಯ ಅವರುಗಳು ಪತ್ತೆಹಚ್ಚಿ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.
ವಾಹನದಲ್ಲಿದ್ದ ಚಾಲಕ ಅಶೋಕ ಮತ್ತು ಕುಶಾಲನಗರದ ರಾಮ ಎಂಬವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. -ಸಿಂಚು