ಸಿದ್ದಾಪುರ, ಆ. ೨೦: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಸಿದ್ದಪಡಿಸುತ್ತಿರುವ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ೪೫ ಕೆ.ಜಿ. ಗೋಮಾಂಸ ವಶಪಡಿಸಿಕೊಂಡಿದ್ದಾರೆ ಆರೋಪಿ ಪರಾರಿಯಾಗಿದ್ದಾರೆ.

ಸಿದ್ದಾಪುರ ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ರಾಶೀದ್ (೩೦) ಎಂಬಾತನು ಆತನ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲು ಸಿದ್ದಪಡಿಸುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ದಾಳಿ ನಡೆಯಿತು.

ಈ ಸಂದರ್ಭದಲ್ಲಿ ಆರೋಪಿ ರಾಶೀದ್ ಪರಾರಿಯಾಗಿದ್ದು, ಆರೋಪಿಯ ಮನೆಯ ಹಿಂಭಾಗದಲ್ಲಿ ಅಂದಾಜು ೪೫ ಕೆ.ಜಿ. ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಅದಕ್ಕೆ ಬಳಸಿದ ಕತ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಆರೋಪಿಯ ವಿರುದ್ಧ ಗೋಹತ್ಯೆ ತಡೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.