ಮಡಿಕೇರಿ, ಆ. ೨೧: ಮೈಸೂರಿನ ರೋರ‍್ಯಾಕ್ಟ್ ಮೈಸೂರು ಈಸ್ಟ್ ಕ್ಲಬ್‌ನ ವತಿಯಿಂದ ನಾಗರಹೊಳೆ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಹಾಗೂ ಅಲ್ಲಿ ವಾಸವಿರುವ ಜನರಿಗೆ ಸುಮಾರು ೧೮೦ ಹೊದಿಕೆಗಳು ಹಾಗೂ ದಿನಸಿ ಸಾಮಾನುಗಳ ಕಿಟ್ ಅನ್ನು ಕ್ಲಬ್‌ನ ಸಲಹೆಗಾರ, ರೋಟರಿ ಅಂರ‍್ರಾಷ್ಟಿçÃಯ ಜಿಲ್ಲೆ- ೩೧೮೧ನ ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ರೋ.ನಿಖಿಲ್ ಆರ್.ಕೆ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಹಾಗೆಯೇ, ಅಲ್ಲಿನ ಸರಕಾರಿ ವಾಲ್ಮೀಕಿ ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭ ರೋಟರಿ ಅಂರ‍್ರಾಷ್ಟಿçÃಯ ಜಿಲ್ಲೆ- ೩೧೮೧ನ ಮಾಜಿ ಜಿಲ್ಲಾ ಪ್ರತಿನಿಧಿ ರೋ.ಡಾರೆಲ್, ರೋಟರಿ ಅಂರ‍್ರಾಷ್ಟಿçÃಯ ಜಿಲ್ಲೆ- ೩೧೯೨ನ ಜಿಲ್ಲಾ ಪ್ರತಿನಿಧಿ ರೋ.ಕಿರಣ್, ರೋ.ರಕ್ಷಿತ್, ರೋ.ಅಭಿ, ರೋ.ಜೀ಼ಶಾನ್ ಇದ್ದರು.