ನಾಗರಪAಚಮಿ ದಿನದಂದು ನಾಗರಕಲ್ಲಿಗೆ, ಹಾವಿನ ಹುತ್ತಕ್ಕೆ ಶ್ರದ್ಧಾ ಭಕ್ತಿಗಳಿಂದ ಹಾಲೆರೆಯುವುದು ಹಿಂದಿನಿAದಲೂ ನಡೆದುಕೊಂಡು ಬಂದ ಸಂಪ್ರದಾಯವೆನ್ನಬಹುದು. ನಾಗದೇವತೆಗಳಿಗೆ ಹಾಲೆರೆಯುವ ಪದ್ಧತಿಯ ಹಿಂದೆ ನಂಬಿಕೆಗಳಿವೆ. ನಾಗರ ಎಂಬ ಚರ್ಮವ್ಯಾಧಿ ಬಂದಾಗ ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣವಿದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದ ಪಂಚಮಿ ದಿನ ಹುತ್ತಕ್ಕೆ ಹಾಲೆರೆಯುವವರ ಬಗ್ಗೆ ಹಿರಿಯರು ಹೀಗೆನ್ನುತ್ತಾರೆ. ಹುತ್ತಕ್ಕೆ ಹಾಲೆರೆಯುವುದು ಕೃತಜ್ಞತೆಗಾಗಿ. ಸಾಮಾನ್ಯವಾಗಿ ಜ್ಯೇಷ್ಠ ಆಷಾಢದ ನಡುವೆ ಮಳೆಯಾಗುತ್ತದೆ. ರೈತರು ಬಿತ್ತನೆಯಲ್ಲಿ ತೊಡಗಿ ಕೊಳ್ಳುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜ ಗಳು ಪೈರಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ಇಲಿಗಳು ತಿಂದು ಹಾನಿಯನ್ನುಂಟು ಮಾಡುತ್ತವೆ. ಇಲಿಗಳನ್ನು ಹಿಡಿಯುವುದು ರೈತರಿಗೆ ಕಷ್ಟಕರ. ಈ ಕೆಲಸದಲ್ಲಿ ಹಾವುಗಳು ರೈತನಿಗೆ ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಹಾವು ಗಳನ್ನು ರೈತನ ಮಿತ್ರ ಎನ್ನುತ್ತಾರೆ. ಈ ಋಣಕ್ಕೆ ರೈತ ಹುತ್ತಕ್ಕೆ ಹಾಲೆರೆಯುತ್ತಾನೆ ಎನ್ನಲಾಗುತ್ತದೆ. - ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು.