ಸೋಮವಾರಪೇಟೆ, ಆ. ೨೦: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಮಾಹಿತಿ ಬಯಸಿರುವ ಪೊಲೀಸ್ ಇಲಾಖೆ, ಸೋಮವಾರಪೇಟೆ ಕಾರೇಕೊಪ್ಪದ ಕೆ.ಎಸ್. ಚೇತನ್ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸುವಂತೆ ಪತ್ರಿಕೆ ಮೂಲಕ ಮನವಿ ಮಾಡಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೇಕೊಪ್ಪ ನಿವಾಸಿ ರೂಪಾ ಹಾಗೂ ಸುಬ್ರಮಣಿ ಅವರುಗಳ ಪುತ್ರ, ವಿಶೇಷ ಚೇತನ, ಚೇತನ್ ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ೦೮೨೭೬ ೨೮೨೦೪೦/ ಮೊ.೯೪೮೦೮೦೪೯೫೨ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ