ಗೋಣಿಕೊಪ್ಪ ವರದಿ, ಆ. ೨೧: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟದಲ್ಲಿ ೭೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ದೇಶಭಕ್ತಿ ಮೂಡಿಸಿದರು.
ಸಣ್ಣ ಮಕ್ಕಳಿಂದ ವೃದ್ಧರವರೆಗೂ ಭಾಗವಹಿಸಿ ಗಮನ ಸೆಳೆದರು. ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೋಲಿಯಂ ಬಂಕ್ವರೆಗೆ ಓಟ ನಡೆಯಿತು. ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಪಾಲ್ಗೊಂಡು ಚೈತನ್ಯ ಮೂಡಿಸಿದರು. ಓಟದ ಪ್ರಾರಂಭದಲ್ಲಿ ಕುಸಿದು ಬಿದ್ದ ಮಕ್ಕಳು ಮೇಲೆದ್ದು ಬಂದು ಗುರಿ ಸಾಧಿಸಿದರು. ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳು ಗುರಿ ಮುಟ್ಟುವ ಮೂಲಕ ಮತ್ತೆ ವಿಶೇಷತೆ ಮೂಡಿಸಿದರು.
ಲೋಪಮುದ್ರ ಮೆಡಿಕಲ್ ಸೆಂಟರ್ ನಿರ್ದೇಶಕ ಡಾ. ಅಮೃತ್ ನಾಣಯ್ಯ, ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕ ನವೀನ್, ಲಯನ್ಸ್ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಪೊಲೀಸ್ ವತಿಯಿಂದ ರಸ್ತೆಯುದ್ದಕ್ಕೂ ಮುಂಜಾಗೃತೆ ವಹಿಸಿ ಕ್ರಮಕೈಗೊಂಡರು. ಸ್ಪರ್ಧಿಗಳಿಗೆ ಗಿಡ ವಿತರಿಸಿ ಹಸಿರು ಕ್ರಾಂತಿ ಮೂಡಿಸಲಾಯಿತು. ಪ್ರಯಾಣ ವೆಚ್ಚ ನೀಡಿ ಪ್ರೋತ್ಸಾಹಿಸಲಾಯಿತು.
ವಿಜೇತರು (ಕ್ರಮವಾಗಿ ಮೊದಲ ೫ ಸ್ಥಾನ)
೧-೪ ವಯೋಮಿತಿಯ ಬಾಲಕರಲ್ಲಿ ಟಿ.ಬಿ. ನಮನ್ ಅಯ್ಯಪ್ಪ, ಪೊನ್ನಣ್ಣ, ತರುಣ್ ಕಾರ್ಯಪ್ಪ, ಪ್ರಣಿತ್, ಧೃವ್, ಬಾಲಕಿಯರಲ್ಲಿ ಭೂಮಿಕಾ, ಕೆ.ವಿ. ಬನ್ವಿ, ಬಿ.ಎಂ. ಚಾರ್ವಿ, ಕೆ.ಕೆ. ಆಕೃತ್, ನವ್ಯ, ಹಿರಿಯ ಪ್ರಾಥಮಿಕ ಬಾಲಕರಲ್ಲಿ ಪ್ರಥಮ್ ಪೂವಯ್ಯ, ಅಥ್ನಿಕ್, ಉತ್ಕರ್ಷ್ ಉತ್ತಯ್ಯ, ಜಶನ್ ಸುಬ್ಬಯ್ಯ, ಸಂಚಯ್ ತಮ್ಮಯ್ಯ, ಬಾಲಕಿಯರಲ್ಲಿ ಪಿ.ಪಿ. ಪೂವಮ್ಮ, ಕೆ.ಎಂ. ಮುತ್ತಣ್ಣ, ಕಾವೇರಮ್ಮ, ಇಶಿಕ್ ಗಂಗಮ್ಮ, ತಪಸ್ವಿ ತಂಗಮ್ಮ, ಪ್ರೌಢ ವಿಭಾಗದ ಬಾಲಕರಲ್ಲಿ ಎಂ. ನಿಶಾಂತ್, ಸೋಹನ್ ಕಾರ್ಯಪ್ಪ, ತನೀಶ್ ತಮ್ಮಯ್ಯ, ಎಂ.ಪಿ. ಪವನ್ ಪೊನ್ನಮ್ಮ, ಬಿ.ಪಿ ಮೋಹನ್, ಬಾಲಕಿಯರಲ್ಲಿ ಕೆ.ಎ. ಪೂರ್ವಿ ಪೂವಮ್ಮ, ಎ.ಎಂ. ತಂಗಮ್ಮ, ಬಿ.ಯು. ಮನಸ್ವಿ, ಎಂ. ಬಿ. ಲೇಖಾ ಮುತ್ತಮ್ಮ, ಪಿ. ಪುಣ್ಯ ಪೊನ್ನಮ್ಮ, ಹಿರಿಯರ ವಿಭಾಗದ ಪುರುಷರಲ್ಲಿ ಪ್ರಶಾಂತ್, ಶಾಜಿ, ಹೆನ್ ಮೊಣ್ಣಪ್ಪ, ಪ್ರಅದರ್ಣ ಃಮಗಪ್ಪ, ಧ್ಯಾನ್ ದೇವಯ್ಯ, ಎಂ.ಪಿ. ಸೋಮಣ್ಣ, ಮಹಿಳಾ ವಿಭಾಗದಲ್ಲಿ ಕೆ. ಚೋಂದಮ್ಮ, ರೋಶಿಕಾ ಬೆಳ್ಯಪ್ಪ, ದಿಶಾ ಪೊನ್ನಮ್ಮ, ಕೃಪಾ ರಾಬಿನ್, ನವ್ಯ ಮಂದಣ್ಣ, ೬೦ ವಯೋಮಿತಿಯಲ್ಲಿ ಎನ್.ಯು. ಭೀಮಯ್ಯ, ಮಿತಿ ಸೋಮೇಶ್, ಎಂ.ಬಿ. ರಮೇಶ್, ಸಿ.ಪಿ. ಮುತ್ತಣ್ಣ ಸ್ಥಾನ ಪಡೆದರು.
ಲಯನ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಮಟ್ಟದ ಭಾಷಣ ಮತ್ತು ದೇಶಭಕ್ತಿ ಗೀತೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಭಾಷಣ ಮತ್ತು ದೇಶಭಕ್ತಿ ಗೀತೆ ಫಲಿತಾಂಶ : (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು)
ಇಂಗ್ಲೀಷ್ ಭಾಷಣ ವಿಭಾಗ : ೧-೪ ವಿಭಾಗದಲ್ಲಿ ಕಾಲ್ಸ್ ಶಾಲೆಯ ದೈವಿಕ್ ಮಾಚಯ್ಯ, ಕಾಪ್ಸ್ ಶಾಲೆಯ ಸಮರ್ಥ್ ಪೊನ್ನಪ್ಪ, ಲಿಯಾ ಚೆಂಗಪ್ಪ, ೫-೭ ನೇ ತರಗತಿ ವಿಭಾಗದಲ್ಲಿ ಲಯನ್ಸ್ ಶಾಲೆಯ ದೇಸ್ನಾ ಉಪೇಂದ್ರ, ಚೇಂದAಡ ಸಮೃದ್ದ್, ಚರಿಷ್ಮಾ ಕಾವೇರಮ್ಮ, ಪ್ರೌಢ ವಿಭಾಗದಲ್ಲಿ ಕಾಲ್ಸ್ ಶಾಲೆಯ ಸಾತ್ವಿಕ್ ತಿಮ್ಮಯ್ಯ-ಕಾವೇರಿ ಶಾಲೆಯ ಎಂ. ಎನ್. ನಿಶಾನ್, ಕಾಪ್ಸ್ ಶಾಲೆಯ ಎಂ ನಿಯತಿ ಕಾಳಯ್ಯ, ಲಯನ್ಸ್ನ ಕೆ.ಡಿ. ಭಾಷಿತಾ, ಪದವಿಪೂರ್ವ ವಿಭಾಗದಲ್ಲಿ ಲಯನ್ಸ್ ಶಾಲೆಯ ದೃಶ್ಯ ಪೂವಮ್ಮ, ಕಾಪ್ಸ್ ಶಾಲೆಯ ಗಾಯತ್ರಿ ಕಾವೇರಿಯಪ್ಪ, ಅಮೃತ್ ಪೂವಮ್ಮ.
ಕನ್ನಡ ಭಾಷಣ ವಿಭಾಗ ; ೧-೪ ವಿಭಾಗದಲ್ಲಿ ಲಯನ್ಸ್ ಶಾಲೆಯ ತಮನ್ ಚೆಂಗಪ್ಪ, ಪಿ.ಪಿ. ಜಾಹ್ನವಿ, ಕಾಪ್ಸ್ನ ಎನ್.ಪಿ ಪ್ರಧ್ಯಾತ್ ಕಿರಣ್, ೫-೭ ವಿಭಾಗದಲ್ಲಿ ಲಯನ್ಸ್ ಶಾಲೆಯ ದೇಶ್ನಾ ಉಪೇಂದ್ರ, ಕಾಲ್ಸ್ನ ಮಯಾಂಕ್ ಮುತ್ತಪ್ಪ, ಮಯೂರ್ ಮಂದಣ್ಣ, ಪ್ರೌಢ ವಿಭಾಗದಲ್ಲಿ ಕಾವೇರಿ ಶಾಲೆಯ ಎ.ಕೆ. ಮೋಕ್ಷಾ, ಕಾಪ್ಸ್ನ ಕೆ.ಬಿ. ದೇಚಕ್ಕ, ಲಯನ್ಸ್ನ ಎಂ. ಆರ್. ಗೆಹಾನಾ-ರಿಶಾ ಗಣಪತಿ, ಪದವಿಪೂರ್ವ ವಿಭಾಗದಲ್ಲಿ ಲಯನ್ಸ್ನ ಅದ್ವಿಕಾ-ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಂ.ಎಚ್. ಶಾಹಿನಾ, ಕಾಪ್ಸ್ನ ಅಜ್ಜಮಾಡ ಪ್ರಂಜಲ್ ಸೋಮಣ್ಣ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಎಚ್.ವಿ. ಅನುಷ್ಕಾ.
ದೇಶಭಕ್ತಿ ಗೀತೆ : ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಅಪ್ಪಚ್ಚಕವಿ ವಿದ್ಯಾಲಯದ ಫಾತಿಮತ್ ನಿಜಾ, ಅರಮೇರಿ ಎಸ್ಎಂಎಸ್ ಶಾಲೆಯ ಆತ್ಮಿಕ ರೈ, ಲಯನ್ಸ್ ಶಾಲೆಯ ಕ.ಯು. ಭಾನವಿ ಮುತ್ತಮ್ಮ, ೧-೪ ವಿಭಾಗದಲ್ಲಿ ಲಯನ್ಸ್ನ ಎನ್. ಹನ್ಸಿಕಾ, ಐ. ಎಂ. ವಂದನಾ-ಕಾಲ್ಸ್ನ ಶೇಕ್ಯಾ ಬಿ ರೈ, ನಿನಾದ ಶಾಲೆಯ ಕೆ.ಎ. ಇಜ್ಜಾಸ್- ಕಾಪ್ಸ್ನ ಸಿ.ಪಿ. ಆರ್ಯನ್ ದೇವಯ್ಯ, ೫-೭ ವಿಭಾಗದಲ್ಲಿ ಕಾಲ್ಸ್ನ ಸುಹಾನ ಅಪ್ಪಯ್ಯ, ಇಶಾನಿ ಬಿ. ರೈ-ಎಸ್.ಎಂಎಸ್ ಕೆ.ಕೆ ತನಿಶಾ, ಕಾವೇರಿ ಶಾಲೆಯ ದಕ್ಷ್ ಬೋಜಣ್ಣ, ಪ್ರೌಡ ವಿಭಾಗದಲ್ಲಿ ಕಾಪ್ಸ್ ಶಾಲೆಯ ಗೈಯಾನ ಯು ಕಲ್ಕುರ್ - ಎಸ್ಎಂಎಸ್ ಶಾಲೆಯ ಆರ್. ಪುನಶ್ಚಿತಾ, ಸಂತ ಥೋಮಸ್ ಶಾಲೆಯ ಕೆ. ನಿಹಾರ-ರೋಟರಿ ಶಾಲೆಯ ಪಿ. ಎಸ್. ಆದಿತ್ಯ, ಲಯನ್ಸ್ನ ಲಕ್ಷಣ್ ಚೆಂಗಪ್ಪ, ಪದವಿಪೂರ್ವ ವಿಭಾಗದಲ್ಲಿ ಕಾಪ್ಸ್ನ ಅನಿಕಾ ನಂದೀಶ್, ವಿದ್ಯಾನಿಕೇತನದ ಡಿ. ವೈಷ್ಣವಿ ತಮನ್ಕರ್-ಸಿಐಟಿ ಕಾಲೇಜಿನ ರಿಶೀಕ್ ತಿಮ್ಮಯ್ಯ, ಕಾಪ್ಸ್ನ ಎಲ್. ಥನುಶ್ರೀ- ವಿದ್ಯಾನಿಕೇತನದ ಎಲ್ ವೈಷ್ಣವಿ ಪಡೆದುಕೊಂಡರು.