ವೀರಾಜಪೇಟೆ, ಆ. ೨೧: ವೀರಾಜಪೇಟೆಯ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿಟ್ಟಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರದ ಮಾಹಿತಿ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ವೀರಾಜಪೇಟೆಯ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಮಾಹಿತಿ ನೀಡಿ ಸೈಬರ್ ಕ್ರೆöÊಂ ಮತ್ತು ಅಪರಿಚಿತ ಕರೆಗಳು ಬಂದಾಗ ಆಧಾರ್ ನಂಬರ್, ಓಟಿಪಿಗಳನ್ನು ಹಂಚಿಕೊಳ್ಳಬಾರದೆAದು ಸ್ವಸಹಾಯ ಸಂಘದ ಮಹಿಳೆಯರಿಗೆ ಮಾಹಿತಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಯೊಜನಾಧಿಕಾರಿ ದಿನೇಶ್ ಮಾತನಾಡಿ ಯೋಜನೆಯ ಕಾರ್ಯಕ್ರಮಗಳಾದ ಆರೋಗ್ಯ ರಕ್ಷಾ, ಸಾಮಾನ್ಯ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳು, ಜನಮಂಗಳ ಕಾರ್ಯಕ್ರಮ, ಈ ಶ್ರಮ್, ಪಾನ್ ಕಾರ್ಡ್ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ಅಂಬಟ್ಟಿ ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ವಾಣಿ, ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿ ಸಬಿತ, ಒಕ್ಕೂಟದ ಅಧ್ಯಕ್ಷ ರಂಜನ್, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ರೇಖಾ ಗಣೇಶ್, ಅಂಗನವಾಡಿ ಶಿಕ್ಷಕಿ ಲತಾ, ಸುವಿಧಾ, ಸಹಾಯಕಿ ಗೀತಾ, ವಿಪತ್ತು ಘಟಕದ ಸ್ವಯಂ ಸೇವಕರಾದ ಅರುಣ್, ಒಕ್ಕೂಟದ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಭಾಗವಹಿಸಿದ್ದರು.