ಶನಿವಾರಸAತೆ, ಆ. ೨೦: ಶನಿವಾರಸಂತೆ ಪೊಲೀಸ್ ಠಾಣೆಯ ನೂತನ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮಂಜುನಾಥ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಠಾಣಾಧಿಕಾರಿಯಾಗಿದ್ದ ಪರಶಿವಮೂರ್ತಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಜುನಾಥ್ ಅಧಿಕಾರಿಯಾಗಿ ಆಗಮಿಸಿದ್ದಾರೆ.
ಈ ಸಂದರ್ಭ ದಲಿತ ಮುಖಂಡ ಡಿ.ಜೆ. ಈರಪ್ಪ ನೇತೃತ್ವದಲ್ಲಿ ದಸಂಸ ಸಂಘಟನೆಯ ಪ್ರಮುಖರಾದ ಎ.ಎನ್. ಅವಿನಾಶ್, ಫಾಲಾಕ್ಷ, ವಿರೂಪಾಕ್ಷ, ಸೂರಜ್, ಸುಬ್ಬಯ್ಯ, ರವಿ ಇತರರು ಠಾಣೆಗೆ ಆಗಮಿಸಿ ನೂತನ ಅಧಿಕಾರಿಯನ್ನು ಸ್ವಾಗತಿಸಿದರು.
ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಣ, ಕಾನೂನು ಸುವ್ಯವಸ್ಥೆ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗೆ ಭೇಟಿ ನೀಡುವ ಬಗ್ಗೆ ಅವರು ಚರ್ಚಿಸಿದರು.