ವೀರಾಜಪೇಟೆ, ಆ. ೨೦: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವೀರಾಜಪೇಟೆ ತಾಲೂಕು ಸಮಿತಿಯ ಮಹಾಸಭೆ ಹಾಗೂ ಸನ್ಮಾನ ಸಮಾರಂಭ ನಗರದ ಎ-ಜೆಡ್ ಸಭಾಂಗಣದಲ್ಲಿ ನಡೆಯಿತು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಂ. ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಸಮಿತಿ ಅಧ್ಯಕ್ಷ ಭರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ವೀರಾಜಪೇಟೆಯ ಹಿರಿಯ ವಿದ್ಯುತ್ ಗುತ್ತಿಗೆದಾರರಾದ ಸಿ. ಎಲೆಕ್ಸ್, ರಫೀಕ್ ಹಾಗೂ ಯೂಸಫ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಗುತ್ತಿಗೆದಾರರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಜೆ. ಚಂದ್ರಶೇಖರ್ ಸಮಿತಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ, ವರದಿ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಗುತ್ತಿಗೆದಾರರ ಸಮಿತಿ ಉಪಾಧ್ಯಕ್ಷ ಹಂಸ, ಖಜಾಂಚಿ ಸರ್ಪುದ್ದೀನ್, ಸಲಹಾ ಸಮಿತಿ ಸದಸ್ಯರಾದ ಬಿ.ಸಿ. ಕಿರಣ್, ಬಿ.ಎನ್. ರಮೇಶ್, ಹರೀಶ್, ರಾಜ, ರಾಜೇಶ್, ಪ್ರಸನ್ನ, ಮಣಿ ಸೇರಿದಂತೆ ಸಂಘದ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.