ಪ್ರವಾಹದಿಂದ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ನೆರವು

ಬೆಂಗಳೂರು, ಆ. ೨೧: ಪ್ರವಾಹ ಹಾಗೂ ಭೂ ಕುಸಿತದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಆರ್ಥಿಕ ನೆರವು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ೧೫ ಕೋಟಿ ರೂಪಾಯಿಯನ್ನು ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಸಂಕಷ್ಟದ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲುವುದು ಮುಖ್ಯವಾಗಿದೆ. ಕರ್ನಾಟಕದ ಜನರು ಹಿಮಾಚಲ ಪ್ರದೇಶದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ. ಛತ್ತೀಸ್‌ಗಢ ಸರ್ಕಾರ ಕೂಡಾ ಹಿಮಾಚಲ ಪ್ರದೇಶಕ್ಕೆ ನೆರವು ನೀಡಿದ್ದು, ವಿಪತ್ತು ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಾಗಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ೧೧ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಅದೇ ರೀತಿ ರಾಜಸ್ಥಾನ ಸರ್ಕಾರ ಕೂಡಾ ೧೫ ಕೋಟಿ ರೂ. ಆರ್ಥಿಕ ನೆರವನ್ನು ಹಿಮಾಚಲ ಪ್ರದೇಶಕ್ಕೆ ನೀಡಿದೆ.

ತಮಿಳುನಾಡಿಗೆ ನೀರು : ರಾಜ್ಯ ಸರಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು, ಆ. ೨೧: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರು ಹಂಚಿಕೆ ವಿಚಾರ ಪ್ರಸ್ತಾಪಿಸಿ ಸಾಮಾಜಿಕ ಮಾಧ್ಯಮ ‘ಎಕ್ಸ್'ನಲ್ಲಿ (ಟ್ವಿಟರ್) ಪ್ರತಿಕ್ರಿಯಿಸಿರುವ ಬಿಜೆಪಿ, ನಾಡಿನ ಜೀವಜಲ ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಇದುವರೆಗೆ ಮಾಡಿದ ದ್ರೋಹದ ಕೆಲಸಗಳ ಪಟ್ಟಿ ಇಲ್ಲಿದೆ ಎಂದು ಕಿಡಿಕಾರಿದೆ. ಕಾಂಗ್ರೆಸ್‌ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈಕೆ, ತಮಿಳುನಾಡು ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ. ಮೇಕೆದಾಟು ಯೋಜನೆ ವಿರೋಧಿಸಿದ ಸ್ಟಾಲಿನ್ ಅವರಿಗೆ ಬೆಂಗಳೂರಿನಲ್ಲಿ ‘ಇಂಡಿಯಾ' ಮೈತ್ರಿಕೂಟದ ಹೆಸರಲ್ಲಿ ಕೆಂಪು ಹಾಸಿನ ಸ್ವಾಗತ..!, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ಇಂದು ತಮಿಳುನಾಡು ಸರ್ಕಾರ ಹಾಕಿದ ಗೆರೆಯನ್ನೂ ದಾಟುತ್ತಿಲ್ಲ..!, ಈಗಾಗಲೇ ಒಪ್ಪಂದಕ್ಕಿAತ ದುಪ್ಪಟ್ಟು ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗಿದೆ...! ಇವೆಲ್ಲದರ ಪರಿಣಾಮ ರಾಜ್ಯದ ಅನ್ನದಾತರ ಬದುಕು ಕಸಿದುಕೊಂಡದ್ದೂ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಇಲ್ಲದಂತಾಗುವ ಅಪಾಯ ಎದುರಾಗಲಿದೆ ಎಂದು ಬಿಜೆಪಿ ಗುಡುಗಿದೆ.

ನೀರು ಹಂಚಿಕೆ ವಿವಾದ : ಪ್ರತ್ಯೇಕ ಪೀಠ ರಚನೆಗೆ ಒಪ್ಪಿಗೆ

ನವದೆಹಲಿ, ಆ. ೨೧: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ತಿಕ್ಕಾಟಕ್ಕೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬAಧಿಸಿದAತೆ ವಿಚಾರಣೆಗೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ ರಚನೆಗೆ ಒಪ್ಪಿಗೆ ನೀಡಿದೆ. ಇಂದೇ ಈ ಪೀಠ ರಚನೆಯಾಗಲಿದ್ದು, ವಿಚಾರಣೆ ಕೂಡ ಇಂದೇ ಆರಂಭವಾಗಲಿದೆ ಎಂದು ಹೇಳಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಪೀಠದ ಮುಂದೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದು, ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಪ್ರಸ್ತಾಪಿಸಿದ್ದಾರೆ.

೯ ಮಂದಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ

ನವದೆಹಲಿ, ಆ. ೨೧: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿದಂತೆ ಒಂಬತ್ತು ಮಂದಿ ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು ಜೈಶಂಕರ್ ಜೊತೆಗೆ ಬಿಜೆಪಿಯ ಸದಸ್ಯರಾದ ಬಾಬುಭಾಯಿ ಜಯಸಂಗಭಾಯಿ ದೇಸಾಯಿ (ಗುಜರಾತ್), ಕೇಸರಿ ದೇವಸಿಂಗ್ ದಿಗ್ವಿಜಯಸಿಂಗ್ ಝಾಲಾ (ಗುಜರಾತ್), ನಾಗೇಂದ್ರ ರಾಯ್ (ಪಶ್ಚಿಮ ಬಂಗಾಳ) ಹಾಗೂ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್, ಡೋಲಾ ಸೇನ್, ಸುಖೇಂದ್ರಶೇಖರ್ ರಾಯ್, ಪ್ರಕಾಶ್ ಚಿಕಾಬರಿಕಾ ಮತ್ತು ಸಮೀರುಲ್ ಇಸ್ಲಾಂ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಭಾಪತಿ ಜಗದೀಪ್ ಧನಕರ್ ಅವರು ಪ್ರಮಾಣವಚನ ಬೋಧಿಸಿದರು.

ಭೂ ಕಬಳಿಕೆ : ನೇಪಾಳದ ಮಾಜಿ ಪ್ರಧಾನಿಗಳ ವಿಚಾರಣೆ

ಕಂಡು, ಆ. ೨೧: ಲಲಿತಾ ನಿವಾಸ್ ಭೂ ಕಬಳಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ನೇಪಾಳದ ಮಾಜಿ ಪ್ರಧಾನಿಗಳಾದ ಮಾಧವ್ ಕುಮಾರ್ ನೇಪಾಳ್ ಮತ್ತು ಬಾಬುರಾಮ್ ಭಟ್ಟರೆ ಅವರನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಐಬಿ) ವಿಚಾರಣೆಗೆ ಒಳಪಡಿಸಿದೆ. ಕಲ್ಮಂಡುವಿನ ಬಲುವತಾರ್‌ನಲ್ಲಿರುವ ಪ್ರಧಾನಿ ಅಧಿಕೃತ ನಿವಾಸದ ಪಕ್ಕದ ಅಂದಾಜು ೩೭ ಎಕರೆ ಜಮೀನನ್ನು ಕಬಳಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮಾಧವ್ ಕುಮಾರ್ ಮತ್ತು ಬಾಬುರಾಮ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಐಬಿ ವಕ್ತಾರ ನವರಾಜ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ. ಮಾಧವ್ ಕುಮಾರ್ ಅವರು ಪ್ರಧಾನಿಯಾಗಿದ್ದಾಗ ಈ ಹಗರಣ ನಡೆದಿತ್ತು. ಆಗ ಬಾಬುರಾಮ್ ಅವರು ಸಚಿವರಾಗಿದ್ದರು.

ಆರ್ಬಿಟರ್ ಜೊತೆ ಚಂದ್ರಯಾನ-೩ ಸಂಪರ್ಕ ಯಶಸ್ವಿ

ನವದೆಹಲಿ, ಆ. ೨೧: ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ ೩ ನಿರಂತರವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಈಗ ಇಸ್ರೋ ಚಂದ್ರಯಾನ-೩ ಬಗ್ಗೆ ಮಾಹಿತಿ ನೀಡಿದೆ. ಚಂದ್ರಯಾನ-೩ ಮತ್ತು ಚಂದ್ರಯಾನ-೨ ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ-೨ನ ಆರ್ಬಿಟರ್ ವಾಹನ-ಚಂದ್ರಯಾನ ೩ನ್ನು ಸ್ವಾಗತಿಸಿದೆ. ಇಬ್ಬರ ನಡುವೆ ದ್ವಿಮುಖ ಸಂವಹನ ನಡೆದಿದೆ. ಇಸ್ರೋ ಚಂದ್ರಯಾನ-೩ ಚಂದ್ರನ ಮೇಲೆ ಇಳಿಯುವ ಇತ್ತೀಚಿನ ಹೊಸ ಅಪ್ಡೇಟ್ ಇದಾಗಿದೆ. ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-೩ ಚಂದ್ರನ ಮೇಲ್ಮೆöÊ ಸ್ಪರ್ಶಿಸಲು ದಿನಗಣನೆ ಶುರುವಾಗಿದೆ. ಇಸ್ರೋ ವಿಜ್ಞಾನಿಗಳು ಯಾವುದೇ ತಪ್ಪು ಸಂಭವಿಸಿದರೂ, ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುತ್ತದೆ ಎಂದು ಸಂಪೂರ್ಣವಾಗಿ ಖಚಿತವಾಗಿದೆ.

ಅತ್ಯಾಚಾರವೆಸಗಿದ ಅಧಿಕಾರಿ ಅಮಾನತ್ತು

ನವದೆಹಲಿ, ಆ. ೨೧: ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ಆರೋಪದ ಮೇಲೆ ದೆಹಲಿ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆದೇಶಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತನ್ನ ಸ್ನೇಹಿತನ ಮಗಳ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಗಾದ ದೌರ್ಜನ್ಯವನ್ನು ವೈದ್ಯರೊಂದಿಗೆ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.