ಸಿದ್ದಾಪುರ, ಆ. ೨೧: ಕಾಡಾನೆ ದಾಳಿ ನಡೆಸಿ ವೃದ್ಧೆಯನ್ನು ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನಲ್ಲಿ ನಡೆದಿದೆ.

ಬಾಡಗ ಬಾಣಂಗಾಲ ಗ್ರಾಮದ ಮಟ್ಟಂ ನಿವಾಸಿ ಆಯಿಷಾ (೬೫) ಮೃತ ದುರ್ದೈವಿ. ಕಳೆದ ಒಂದು ವಾರದೊಳಗೆ ಕಾಡಾನೆ ದಾಳಿಗೆ ಸಿಲುಕಿ ಎರಡು ಮಂದಿ ಸಾವನ್ನಪ್ಪಿದ್ದಾರೆ. ಒಂದು ವಾರಗಳ ಹಿಂದೆ ಅರೆಕಾಡು ಬಳಿ ದೇವಪ್ಪ ಎಂಬವರನ್ನು ಒಂಟಿ ಸಲಗ ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದೀಗ ಮತ್ತೊಂದು ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಬಾಡಗ ಬಾಣಂಗಾಲ ಮಟ್ಟಂನ ನಿವಾಸಿಯಾಗಿರುವ ಆಯಿಷಾ ಎಂದಿನAತೆ ತಮ್ಮ ಮನೆಯ ಬಳಿಯ ರಸ್ತೆಯಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಬೆಳಿಗ್ಗೆ ೮ ಗಂಟೆಯ ಸಮಯಕ್ಕೆ ಮನೆಯ ಸಮೀಪದ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನ ಕಾಫಿ ಬೆಳೆಗಾರರಾದ ಕೆ.ಬಿ. ಹೇಮಚಂದ್ರ ಎಂಬವರ ಕಾಫಿ ತೋಟದಿಂದ ಹಠಾತ್ತನೇ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ಬಂದು ಆಯಿಷಾರವರ ಮೇಲೆ ದಾಳಿ ನಡೆಸಿದೆ. ನಂತರ ತುಳಿದ ಪರಿಣಾಮ ತಲೆಯ ಭಾಗ ಚಿದ್ರಗೊಂಡಿದೆ. ತಲೆಯ ಒಳಗಿನ ಮೆದುಳುಗಳು ಹೊರಗೆ ಬಂದಿದೆ. ಆನೆ ದಾಳಿಗೆ ಸಿಲುಕಿದ ಆಯಿಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯು ಬೆಳಿಗ್ಗೆ ಅಂದಾಜು ೮.೧೫ಕ್ಕೆ ಸಂಭವಿಸಿದೆAದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಬೆಳಿಗ್ಗೆ ಇದೇ ರಸ್ತೆಯ ಮೂಲಕ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮೃತದೇಹವನ್ನು ಕಂಡು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಧಾವಿಸಿ ಬಂದು ನೋಡುವುದರಲ್ಲಿ ಆಯಿಷಾರವರು ಸ್ಥಳದಲ್ಲೇ ದುರ್ಮರಣ ಗೊಂಡಿರುವುದು ಕಂಡು ಬಂದಿದೆ. ನಂತರ ಅರಣ್ಯ ಇಲಾಖಾಧಿಕಾರಿಗಳಿ ಹಾಗೂ

ಸಿದ್ದಾಪುರ, ಆ. ೨೧: ಬಾಡಗ ಬಾಣಂಗಾಲ ಮಟ್ಟಂನಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಒತ್ತಾಯಿಸಿದ್ದರು.

ಇದರಿಂದಾಗಿ ಜಿಲ್ಲಾ ಆನೆ ಕಾರ್ಯಪಡೆಯ ಮುಖ್ಯಸ್ಥರಾದ ಪೂವಯ್ಯ ಮಾರ್ಗದರ್ಶನದಲ್ಲಿ ತಿತಿಮತಿ ಎಸಿಎಫ್ ಸೀಮಾ ನೇತೃತ್ವದಲ್ಲಿ ಇಂದು ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಆನೆ ಕಾರ್ಯಪಡೆಯ ತಂಡ ಹಾಗೂ ಆರ್ ಆರ್ ಟಿ ಸಿಬ್ಬಂದಿಗಳು ಸೇರಿ ಮಾಲ್ದಾರೆ ಅರಣ್ಯಕ್ಕೆ ಓಡಿಸಿದರು.

ಇಂದು ಸಂಜೆ ಕಾಡಾನೆಗಳನ್ನು ಓಡಿಸುವ ಸಂದರ್ಭದಲ್ಲಿ ಸಲಗ ಕಂಡುಬAದಿದೆ. ರಸ್ತೆಯ ಮೂಲಕ ಸಲಗಗಳು ಕಾಡಿನತ್ತ ತೆರಳಿದೆ. ಕೆಲವು ಕಾಡಾನೆಗಳು ಮಹಿಳೆ ಸಾವನ್ನಪ್ಪಿರುವ ಸ್ಥಳದ ಸಮೀಪ ಓಡಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಆನೆಗಳ ಬಳಿ ತೆರಳದಂತೆ ಹಾಗೂ ಚಿತ್ರೀಕರಣ ಮಾಡದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.(ಮೊದಲ ಪುಟದಿಂದ) ಸಿಬ್ಬಂದಿಗಳು ತಡವಾಗಿ ಆಗಮಿಸಿದ್ದಾರೆಂದು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಮಹಿಳೆಯು ಸಾವನ್ನಪ್ಪಿರುವ ಘಟನೆಯ ವಿಚಾರ ತಿಳಿದು ಮಾಲ್ದಾರೆ ಹಾಗೂ ಸಿದ್ದಾಪುರ ಸುತ್ತಮುತ್ತದ ಗ್ರಾಮಗಳ ಗ್ರಾಮಸ್ಥರು ವಿವಿಧ ಸಂಘಟನೆಗಳ ಪದಾಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕೂಡಲೇ ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ದರು. ಅಲ್ಲದೇ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ಅಲ್ಲದೇ ಈ ಭಾಗದಲ್ಲಿ ಒಂಟಿ ಸಲಗವೊಂದು ದಿನನಿತ್ಯ ಓಡಾಡು ತ್ತಿದ್ದರೂ ಅರಣ್ಯ ಇಲಾಖೆಯವರು ಈ ಸಲಗವನ್ನು ಸೆರೆಹಿಡಿಯದೇ ನಿರ್ಲಕ್ಷö್ಯವಹಿಸಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆAದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಈ ಭಾಗದಲ್ಲಿ ಕಾಡಾನೆಗಳ ಕಾರ್ಯಾಚರಣೆ ನಡೆಸಬೇಕು ಹಾಗೂ ಹಗಲಿರುಳು ಕಾವಲುಗಾರರನ್ನು ನೇಮಿಸಬೇಕೆಂದರು.

ಶವಾಗಾರದ ಬಳಿ ಪ್ರತಿಭಟನೆ :

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಆಯಿಷಾರವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ತರಲಾಗಿತ್ತು. ಶವಗಾರದ ಬಳಿ ಸೇರಿದ್ದ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷö್ಯದಿಂದ ಈ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಶವಾಗಾರದ ಬಳಿ ಜನರು ಪಟ್ಟು ಹಿಡಿದರು.

ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲಿಸಿತು. ಮೇಲಧಿಕಾರಿಗಳು ಬರುವವರೆಗೂ ಶವವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವು ದಿಲ್ಲವೆಂದು ಪಟ್ಟು ಹಿಡಿದು ಧರಣಿ ಕುಳಿತು ಪ್ರತಿಭಟಿಸಿದರು. ಅಲ್ಲದೇ ಸ್ಥಳಕ್ಕೆ ಆಗಮಿಸಿದ್ದ ವೀರಾಜಪೇಟೆ ತಾಲೂಕು ಡಿಸಿಎಫ್ ಶರಣ ಬಸಪ್ಪರವರನ್ನು ತರಾಟೆಗೆ ತೆಗೆದುಕೊಂಡರು. ಮಾನವ ಜೀವಕ್ಕೆ ಕೇವಲ ರೂ. ೧೫ ಲಕ್ಷ ಪರಿಹಾರ ನೀಡಿದರೆ ಅವರ ಪ್ರಾಣ ಸಿಗುತ್ತದೆಯೋ ಎಂದು ಪ್ರಶ್ನಿಸಿದರು. ನಮಗೆ ಪರಿಹಾರ ಮುಖ್ಯವಲ್ಲ. ನಾವೇ ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿ ರೂ. ೧೫ ಲಕ್ಷವನ್ನು ಅರಣ್ಯ ಒಲಾಖೆಗೆ ನೀಡುತ್ತೇವೆಂದು ಆಕ್ರೋಶದಿಂದ ಅಧಿಕಾರಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ದಾಳಿ ನಡೆಸಿ ಮಾನವನನ್ನು ಹತ್ಯೆ ಮಾಡಿದ ಬಳಿಕ ಚೆಕ್ ಹಿಡಿದುಕೊಂಡು ಬರುವ ಅಗತ್ಯವಿಲ್ಲ. ಅದರ ಬದಲು ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸದಂತೆ ಹಾಗೂ ಆನೆ-ಮಾನವ ಸಂಘರ್ಷ ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೆಲಕಾಲ ಶವಾಗಾರದ ಬಳಿ ಗ್ರಾಮಸ್ಥರು ಧರಣಿ ಕುಳಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೆಚ್.ಬಿ. ರಮೇಶ್, ರೆಜಿತ್ ಕುಮಾರ್, ಮುಸ್ತಫ ಎ.ಎಸ್, ಹನೀಫ್, ಅಬ್ದುಲ್ ಶುಕೂರ್ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು. ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ವಿಚಾರ ತಿಳಿದು ಕೆಪಿಸಿಸಿ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣರವರ ಸೂಚನೆ ಮೇರೆಗೆ ಬಾಡಗ ಬಾಣಂಗಾಲ ಮಟ್ಟಂಗೆ ಭೇಟಿ ನೀಡಿದ ಸಂಕೇತ್ ಬೆಳಿಗ್ಗಿನಿಂದ ಮೃತ ಮಹಿಳೆಯ ಅಂತ್ಯ ಸಂಸ್ಕಾರದವರೆಗೆ ಸ್ಥಳದಲ್ಲೇ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ೨೦ ವರ್ಷಗಳಿಂದ ಆನೆ-ಮಾನವ ಸಂಘರ್ಷ ನಡೆಯುತ್ತಲಿದೆ. ಕಾಡಾನೆ ದಾಳಿಗೆ ಸಿಲುಕಿ ಹಲವಾರು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಶಾಶ್ವತ ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಶಾಸಕ ಪೊನ್ನಣ್ಣ ಈಗಾಗಲೇ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಬಳಿ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಆನೆ-ಮಾನವ ಸಂಘರ್ಷವನ್ನು ತಡೆಯಲು ಹಾಗೂ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಲು ಯೋಜನೆ ರೂಪಿಸಲಾಗು ವುದೆಂದರು. ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಆಯಿಷಾರವರ ಕುಟುಂಬಕ್ಕೆ ತುರ್ತು ಪರಿಹಾರವಾಗಿ ರೂ. ೧೦ಲಕ್ಷ ನೀಡಲಾಗಿದೆ ಎಂದರು. ಉಪಟಳ ನೀಡುವ ಕಾಡಾನೆಗಳ ಸೆರೆಗೆ ಸೂಚಿಸಲಾಗಿದ್ದು, ಆದೇಶ ಬಂದ ಬಳಿಕ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗುತ್ತಾರೆAದರು. ವೈಜ್ಞಾನಿಕವಾಗಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆಂದು ತಿಳಿಸಿದರು.

ಮೃತ ಆಯಿಷಾ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಬ್ದುಲ್ ಲತೀಫ್ ನೀಡಿರುವ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು.

ಪರಿಹಾರ ವಿತರಣೆ

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಆಯಿಷಾರವರ ಕುಟುಂಬಕ್ಕೆ ರೂ.೧೦ ಲಕ್ಷ ಪರಿಹಾರದ ಚೆಕ್‌ಅನ್ನು ಅರಣ್ಯ ಇಲಾಖೆ ವತಿಯಿಂದ ಮೃತರ ಸ್ವಗೃಹದಲ್ಲಿ ಪುತ್ರನಾದ ಅಬ್ದುಲ್ ಲತೀಫ್‌ರವರಿಗೆ ವೀರಾಜಪೇಟೆ ತಾಲೂಕು ಡಿಸಿಎಫ್ ಶರಣಬಸಪ್ಪ ನೀಡಿದರು.

ಈ ಸಂದರ್ಭ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್ ಇನ್ನಿತರರು ಹಾಜರಿದ್ದರು ಹಾಗೂ ತಿತಿಮತಿ ವಲಯ ಎಸಿಎಫ್ ಸೀಮಾ, ವಲಯ ಅರಣ್ಯ ಅಧಿಕಾರಿಗಳಾದ ಅಶೋಕ್ ಹುನಗುಂದ, ಕೆ.ಪಿ. ದೇವಯ್ಯ, ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ್, ಸಂಜೀತ್ ಸೋಮಯ್ಯ ಹಾಗೂ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಗಳು, ಗ್ರಾ.ಪಂ. ಸದಸ್ಯರುಗಳು ವಿವಿಧ ಸಂಘಟನೆಗಳು, ಪದಾಧಿಕಾರಿ ಗಳು ಹಾಜರಿದ್ದರು.

ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಸಿದ್ದಾಪುರ ಠಾಣಾಧಿಕಾರಿ ರಾಘ ವೇಂದ್ರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆನೆ ಕಾರ್ಯ ಪಡೆಯ ಮುಖ್ಯಸ್ಥರಾದ ಎ.ಟಿ. ಪೂವಯ್ಯ ಮಾತನಾಡಿ, ಈ ಭಾಗದಲ್ಲೇ ಕಾಡಾನೆ ಸುತ್ತಾಡುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟಲು ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಅರಣ್ಯ ಸಿಬ್ಬಂದಿಗಳು ಈ ಭಾಗದಲ್ಲೇ ಗಸ್ತು ತಿರುಗಲು ಸೂಚಿಸಲಾಗಿದೆಂದು ಮಾಹಿತಿ ನೀಡಿದರು.

ಚಿತ್ರವರದಿ : ಎ.ಎನ್. ವಾಸು