ಕುಶಾಲನಗರ, ಆ. ೨೦: ಕುಶಾಲನಗರ ಮಡಿಕೇರಿ ರಸ್ತೆಯ ಸರಕಾರಿ ಇಂಜಿನಿಯರಿAಗ್ ಕಾಲೇಜು ಎದುರುಗಡೆ ಬೀದಿಬದಿಯ ಅಂಗಡಿಯಿAದ ಆರು ಸಾವಿರ ನಗದು ಸೇರಿದಂತೆ ಸಿಹಿ ತಿಂಡಿ ಮತ್ತಿತರ ವಸ್ತುಗಳನ್ನು ಕಳ್ಳರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಪೊನ್ನಮ್ಮ ಮತ್ತು ಆಕೆಯ ಪುತ್ರ ರಾಕೇಶ್ ಎಂಬವರು ಶೆಡ್ ಕಟ್ಟಿಕೊಂಡು ನಡೆಸುತ್ತಿದ್ದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಶನಿವಾರ ರಾತ್ರಿ ಊಟಕ್ಕೆ ತೆರಳಿದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ಅಂಗಡಿ ಮಾಲೀಕ ರಾಕೇಶ್ ತಿಳಿಸಿದ್ದಾರೆ. ತಾವು ಅಂಗಡಿಯಲ್ಲಿ ಮಲಗುತ್ತಿದ್ದು ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಊಟಕ್ಕೆ ತೆರಳಿದ ಸಂದರ್ಭ ಕಳ್ಳರು ಅಂಗಡಿಯಲ್ಲಿದ್ದ ವಸ್ತುಗಳನ್ನು ದೋಚಿದ್ದು ನಗದು ಸೇರಿದಂತೆ ಒಟ್ಟು ಹತ್ತು ಸಾವಿರ ರೂಗಳಷ್ಟು ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕರಾದ ಮಹಿಳೆ ಪೊನ್ನಮ್ಮ ತಿಳಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.