ಸಿದ್ದಾಪುರ, ಆ. ೧೯ : ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ ಅಧ್ಯಕ್ಷರಾಗಿ ಕೆ.ಎ. ಅಬ್ದುಲ್ ರಶೀದ್ ಆಯ್ಕೆಯಾಗಿದ್ದಾರೆ. ಯೂತ್ ಕ್ಲಬ್‌ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಮಹಮ್ಮದ್ ಶಮಿಲ್, ಕಾರ್ಯದರ್ಶಿಗಳಾಗಿ ರಾಮದಾಸ್, ಖಜಾಂಜಿ ತಂಬಿ ಮ್ಯಾಥ್ಯೂ, ನಿರ್ದೇಶಕರುಗಳಾಗಿ ಹ್ಯಾರಿಸ್, ಅಬ್ದುಲ್ ನಾಸರ್, ಜಕರಿಯ, ಶಮೀಮ್, ಜಾಫರ್, ನಜಿರುದ್ದಿನ್, ಪೈಝಲ್ ಆಯ್ಕೆಯಾಗಿದ್ದಾರೆ.