ಮಡಿಕೇರಿ, ಆ. ೧೯: ೨೦೨೪-೨೫ ನೇ ಸಾಲಿನ ಜವಾಹರ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯ ಗಣಕೀಕೃತ ಅರ್ಜಿಯ ದಿನಾಂಕವನ್ನು ತಾ. ೨೫ ರವರೆಗೆ ಮುಂದೂಡಲಾಗಿದೆ. ಅರ್ಹ ಅಭ್ಯರ್ಥಿಗಳು ತಿತಿತಿ.ಟಿಚಿvoಜಚಿಥಿಚಿ.gov.iಟಿ oಡಿ hಣಣಠಿs://ಛಿbseiಣms.ಡಿಛಿiಟ.gov.iಟಿ ಜಾಲತಾಣದಿಂದ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ತಾ. ೨೬ ಮತ್ತು ೨೭ ರಂದು ಆನ್‌ಲೈನ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ಅಭ್ಯರ್ಥಿಗಳ ದತ್ತಾಂಶದಲ್ಲಿನ ತಿದ್ದುಪಡಿಯನ್ನು ಲಿಂಗ, ವರ್ಗ, ಪ್ರದೇಶ, ಅಂಗವೈಕಲ್ಯತೆ ಮತ್ತು ಪರೀಕ್ಷಾ ಮಾಧ್ಯಮದಲ್ಲಿ ಮಾತ್ರ ಅನುಮತಿಸಲಾಗಿದೆ. ಪ್ರವೇಶ ಬಯಸುವ ಅಭ್ಯರ್ಥಿಗಳು ತಿತಿತಿ.ಟಿಚಿvoಜಚಿಥಿಚಿ.gov.iಟಿ oಡಿ hಣಣಠಿs://ಛಿbseiಣms.ಡಿಛಿiಟ.gov.iಟಿ/ ಜಾಲತಾಣಗಳ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.