ನನ್ನ ದೇಶ ಭಾರತ
‘ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು’
ಇಲ್ಲಿ ಹುಟ್ಟಿದ ನಾವೇ ಪುಣ್ಯವಂತರು. ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿ ಅನೇಕ ಭಾಷೆ, ಅನೇಕ ಧರ್ಮಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿದೆ. ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಅನೇಕ ಮಹಾತ್ಮರ ತ್ಯಾಗವನ್ನು ನೆನೆಸುತ್ತಾ ದೇಶ ಕಾಯುವ ಯೋಧರಿಗೂ ನಮಿಸುತ್ತಾ ಇಲ್ಲಿನ ನೆಲದ ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಉಳಿಸಿ ಬೆಳೆಸೋಣ ಹಾಗೂ ಈ ದೇಶದ ಕೀರ್ತಿಯನ್ನು ಇನ್ನಷ್ಟು ಬೆಳೆಸೋಣ.
- ಬಿ.ಎಸ್. ಅನಗ, ೫ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ರಾಷ್ಟç ನನ್ನ ಪ್ರಾಣ
ನಾನೊಬ್ಬ ಭಾರತ ದೇಶದ ಪ್ರಜೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ನನ್ನ ರಾಷ್ಟç ನನ್ನ ಪ್ರಾಣ. ನಾವು ಇಂದು ಸ್ವಾತಂತ್ರರಾಗಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದೇ ವೆಂದಾದರೆ ಅದಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಸ್ವಾತಂತ್ರ‍್ಯ ಹೋರಾಟಗಾರ ಬಲಿದಾನ ಮತ್ತು ಬ್ರಿಟಿಷರನ್ನು ಭಾರತಾಂಬೆಯಿAದ ಓಡಿಸಲು ಅವರು ಪಟ್ಟ ನಿರಂತರ ಶ್ರಮವೇ ಕಾರಣವಾಗಿದೆ. ಭಗತ್ ಸಿಂಗ್, ಉದಮ್‌ಸಿಂಗ್, ಚಂದ್ರಶೇಖರ್ ಆಜಾದ್, ಲಾಲ್-ಬಾಲ್-ಪಾಲ್, ಖುದಿರಾಮ್ ಬೋಸ್, ನೇತಾಜಿ ಇಂತಹ ಮಹಾನ್ ನಾಯಕರುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇಂದಿಗೂ ಅವರ ಹೆಸರು ಇತಿಹಾಸದ ಪುಟದಲ್ಲಿ ಚಿರಾ ಶಾಶ್ವತ. ನನ್ನ ರಾಷ್ಟçಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ, ಅವರ ಆದರ್ಶಗಳೇ ನನಗೆ ಸ್ಫೂರ್ತಿ.
ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಸಹಬಾಳ್ವೆಯಿಂದ ಸಹೋದರತೆ, ಭ್ರಾತೃತ್ವದಿಂದ ಜೀವನ ಸಾಗಿಸಬೇಕು. ರಾಷ್ಟçಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ಜೈ ಭಾರತಾಂಬೆ
- ಅಮ್ಮಂಡ ಟಿ. ತರುಣ್ ಕರುಂಬಯ್ಯ, ೮ನೇ ತರಗತಿ, ಸಂತ ಅಂಥೋಣಿ ಪ್ರೌಢಶಾಲೆ, ಪೊನ್ನಂಪೇಟೆ.ಮಹಾ ತ್ಯಾಗವನ್ನು ಸ್ಮರಿಸೋಣ
ಸ್ವಾತಂತ್ರö್ಯ ದಿನಾಚರಣೆಯು ಆಗಸ್ಟ್ ೧೫ ರಂದು ನಡೆಯುತ್ತದೆ. ಭಾರತದಲ್ಲಿ ಮೊಘಲರ ಆಳ್ವಿಕೆಯಾದ ಮೇಲೆ ಬ್ರಿಟಿಷರು ಭಾರತಕ್ಕೆ ಕಾಲಿಟ್ಟರು. ಅವರದೇಯಾದ ಆಳ್ವಿಕೆ ನಡೆಸಿದರು. ನಮ್ಮ ದೇಶದ ಚಿನ್ನ, ಬೆಳ್ಳಿ, ವಜ್ರ ಅವರ ದೇಶಕ್ಕೆ ದೋಚಿಕೊಂಡು ಕಳಿಸಿದರು. ಅನೇಕ ಮಹನೀಯರು ಭಾರತದ ಸ್ವಾತಂತ್ರö್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗಿಸಿದ್ದಾರೆ. ಇಂತಹ ಮಹನೀಯರು ಬಿಪಿನ್ ಚಂದ್ರ ಬೋಸ್, ಭಗತ್ ಸಿಂಗ್, ಅರುಣ ಆಸಿಫ್ ಆಲಿ, ಮಹಾತ್ಮ ಗಾಂಧೀಜಿ, ಜಾನ್ಸಿರಾಣಿ ಲಕ್ಷಿö್ಮಭಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸರೋಜಿನಿ ನಾಯ್ಟು. ಈ ದಿನ ನಾವು ಇವರ ಮಹಾತ್ಯಾಗವನ್ನು ಸ್ಮರಿಸೋಣ. ಕ್ರಿ.ಶ. ೧೯೪೭ ರ ಅನ್ವಯ ಆಗಸ್ಟ್ ೧೫ ರಂದು ನಮ್ಮ ದೇಶವು ಸ್ವತಂತ್ರವಾಯಿತು. ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸಲಾಗುತ್ತದೆ.
- ಎಂ. ಸಾನ್ವಿ ಯೋಗೇಶ್ವರಿ, ೪ನೇ ತರಗತಿ, ಕಾಪ್ಸ್ ಶಾಲೆ, ಗೋಣಿಕೊಪ್ಪಲು.ಮನುಜರಾಗಿ ಬಾಳೋಣ
ನಮ್ಮ ರಾಷ್ಟç ನಮ್ಮ ಹೆಮ್ಮೆ. ನಮ್ಮ ರಾಷ್ಟçವನ್ನು, ರಾಷ್ಟçಧ್ವಜವನ್ನು ಗೌರವಿಸೋಣ. ಕೇಸರಿ, ಬಿಳಿ, ಹಸಿರು ಬಣ್ಣಗಳು ಸತ್ಯ, ಶಾಂತಿ, ತ್ಯಾಗದ ಸಂಕೇತ. ಧ್ವಜದ ನಡುವೆ ಅಶೋಕ ಚಕ್ರ ನಿರಂತರ ಅಭಿವೃದ್ಧಿಯ ಸಂಕಲ್ಪ. ನಾವೆಲ್ಲರೂ ಏಕತೆಯಿಂದ ಮನುಜರಾಗಿ ಬಾಳೋಣ.
- ಅನ್ನಂಬಿರ ಚಿನ್ಮಯ್ ಚೋಂದಮ್ಮ, ೭ನೇ ತರಗತಿ, ವಿಜಯ ಆಂಗ್ಲ ಮಾಧ್ಯಮ ಶಾಲೆ, ಕಡಂಗ.ತ್ಯಾಗದ ನೆನಪಿನ ದಿನ
ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಬ್ರಿಟಿಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟಿçÃಯ ರಜಾ ದಿನವಾಗಿದೆ. ಇದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ. ಆಗಸ್ಟ್ ೧೫, ೧೯೪೭ಕ್ಕೆ ಮೊದಲು ಬ್ರಿಟಿಷ್ ಸರಕಾರ ೨೦೦ ವರ್ಷಗಳ ಕಾಲ ಭಾರತವನ್ನು ಆಳಿತು. ಸ್ವಾತಂತ್ರö್ಯದ ನಂತರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಭಾರತದ ಧ್ವಜವನ್ನು ಹಾರಿಸಿದರು.
- ಬಿ.ಬಿ ಥನಿಷ್, ಸಂತ ಜೋಸೆಫರ ಶಾಲೆ, ಮಡಿಕೇರಿ.ವೀರರನ್ನು ನೆನಪಿಸಿಕೊಳ್ಳುವ ದಿನ
೧೯೪೭ ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರö್ಯ ಸಿಕ್ಕಿದ ದಿನ. ನಾವು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರö್ಯ ಪಡೆದ ದಿನ. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರು. ನಾವೆಲ್ಲರು ಸ್ವಾತಂತ್ರö್ಯಕ್ಕೆ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುವ ದಿನ. ನಮ್ಮ ರಾಷ್ಟçಧ್ವಜ ಮೂರು ಬಣ್ಣಗಳನ್ನು ಹೊಂದಿದೆ. ಕೇಸರಿ, ಬಿಳಿ, ಹಸಿರು. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ನಮ್ಮ ಭಾರತದ ಧ್ವಜವು ಈ ಪಾರಿವಾಳದಂತೆ ಹಾರುತ್ತಿರಬೇಕು.
- ಹೆಚ್.ಹೆಚ್. ಮೋಕ್ಷಾ, ೧೦ನೇ ತರಗತಿ, ಸರಕಾರಿ ಪ್ರೌಢಶಾಲೆ, ಮಕ್ಕಂದೂರು.ನಾವು ಪ್ರತಿವರ್ಷ ಆಗಸ್ಟ್ ೧೫ ರಂದು ಸ್ವಾತಂತ್ರö್ಯ ದಿನವನ್ನು ಆಚರಿಸುತ್ತೇವೆ. ಬ್ರಿಟಿಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟಿçÃಯ ರಜಾ ದಿನವಾಗಿದೆ. ಇದು ಸ್ವಾತಂತ್ರö್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ. ಸ್ವಾತಂತ್ರö್ಯದ ನಂತರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರು ಭಾರತದ ಧ್ವಜವನ್ನು ಹಾರಿಸಿದರು. ಭಾರತೀಯ ರಕ್ಷಣಾ ಸೇವೆಗಳು ಈ ದಿನದಂದು ಮೆರವಣಿಗೆ ನಡೆಸುತ್ತಾರೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಭೆಯಲ್ಲಿ ಸೇರಿದ ಅನೇಕ ಮುಖ್ಯಸ್ಥರು ಸೇರಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಾರೆ. ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತದೆ.
ಜೈ ಹಿಂದ್ - ಜೈ ಕರ್ನಾಟಕ ಮಾತೆ
- ಕೆ.ಆರ್. ಆರಾಧ್ಯ ಪೂವಯ್ಯ, ೬ನೇ ತರಗತಿ, ಜ್ಞಾನಗಂಗಾ ವಸತಿ ಶಾಲೆ, ಅತ್ತೂರು.ರಾಷ್ಟç ಧ್ವಜವನ್ನು ಗೌರವಿಸೋಣ
ಸ್ವಾತಂತ್ರö್ಯ ದಿನ ಭಾರತದಲ್ಲಿ ವಾರ್ಷಿಕವಾಗಿ ಆಗಸ್ಟ್ ೧೫ ರಂದು ರಾಷ್ಟಿçÃಯ ರಜಾ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರö್ಯ ದಿನವು ೧೯೪೭ರಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯವನ್ನು ಸೂಚಿಸುತ್ತದೆ. ಆ ವರ್ಷ ಜುಲೈ ೧೮ ರ ಭಾರತೀಯ ಸ್ವಾತಂತ್ರö್ಯ ಕಾಯಿದೆ ಮತ್ತು ಮುಕ್ತ ಮತ್ತು ಸ್ವತಂತ್ರ ಭಾರತೀಯ ರಾಷ್ಟçದ ಸ್ಥಾಪನೆಯನ್ನು ತರಲಾಯಿತು. ಈ ದಿನ ಸಾಮಾಜಿಕ ಸಭೆಗಳು, ಸ್ವಾತಂತ್ರö್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ತ್ರಿವರ್ಣ ಧ್ವಜ ಅಥವಾ ತಿರಂಗವನ್ನು ಹಾರಿಸುವುದು, ಮೆರವಣಿಗೆಗಳನ್ನು ವೀಕ್ಷಿಸುವುದು, ನಾಗರಿಕರು ದೇಶಭಕ್ತಿ ಗೀತೆಗಳನ್ನು ಹಾಡುವುದು ಮತ್ತು ಹೆಚ್ಚಿನವುಗಳಿಗೆ ಸಾಕ್ಷಿಯಾಗುತ್ತವೆ ಸ್ವಾತಂತ್ರö್ಯ ದಿನ. ಈ ದಿನ ನಮ್ಮ ಸ್ವಾತಂತ್ರö್ಯ ಹೋರಾಟಗಾರರನ್ನು ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳನ್ನು ಗೌರವಿಸುತ್ತದೆ. ನಮ್ಮ ದೇಶವು ವಿವಿಧ ಭಾಷೆ, ಜನಾಂಗ, ಧರ್ಮ, ಬುಡಕಟ್ಟು, ಪ್ರಾದೇಶಿಕ ವೈವಿಧ್ಯತೆಗಳನ್ನು ಹೊಂದಿದ್ದು, ಇಡೀ ದೇಶವನ್ನು ಬೆಸೆಯುವುದು ನಮ್ಮ ರಾಷ್ಟç ಪ್ರೇಮವೇ ಆಗಿರುತ್ತದೆ. ನಮ್ಮ ರಾಷ್ಟçಪ್ರೇಮದ ಸಂಕೇತಗಳಾದ ರಾಷ್ಟçಗೀತೆ, ರಾಷ್ಟçಧ್ವಜ ಎಲ್ಲವನ್ನೂ ನಾವು ಸಹ ಗೌರವಿಸೋಣ.
ಜೈ ಹಿಂದ್.ನಮ್ಮ ರಾಷ್ಟçಧ್ವಜವು ನಮ್ಮ ದೇಶದ ಹೆಮ್ಮೆ. ನಮ್ಮ ರಾಷ್ಟçಧ್ವಜವನ್ನು ಸೂರ್ಯ ಉದಯದ ನಂತರ ಹಾರಿಸಬೇಕು. ರಾಷ್ಟçಧ್ವಜವನ್ನು ಸೂರ್ಯ ಮುಳುಗುವ ಮುಂಚೆ ಇಳಿಸಬೇಕು. ರಾಷ್ಟçಧ್ವಜವನ್ನು ನವದೆಹಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ ೧೫ ರಂದು ಹಾರಿಸುತ್ತಾರೆ. ನಮ್ಮ ರಾಷ್ಟçಧ್ವಜದಲ್ಲಿ ೩ ಬಣ್ಣಗಳು ಮತ್ತು ಮಧ್ಯದಲ್ಲಿ ನೀಲಿ ಚಕ್ರದ ಅಶೋಕ ಚಕ್ರ ಇದೆ.
ನಮ್ಮ ರಾಷ್ಟç ಲಾಂಛನವನ್ನು ಅಶೋಕ ಸ್ತಂಭದಿAದ ತೆಗೆದುಕೊಂಡಿದ್ದಾರೆ. ಇದರ ಕೆಳಗೆ ಹಿಂದಿಯಲ್ಲಿ ಸತ್ಯಮೇವ ಜಯತೇ ಎಂದು ಬರೆದಿದೆ. ರಾಷ್ಟç ಲಾಂಛನದ ಕೆಳಗೆ ಕುದುರೆ ಹಾಗೂ ನಾಲ್ಕು ಮುಖದ ಸಿಂಹದ ಚಿತ್ರವಿದೆ. ನಮ್ಮ ರಾಷ್ಟçಧ್ವಜವನ್ನು ಗೌರವಿಸಬೇಕು. ನಮ್ಮ ರಾಷ್ಟçಧ್ವಜದಲ್ಲಿರುವ ಅಶೋಕ ಚಕ್ರದಲ್ಲಿ ೨೪ ಗೆರೆಗಳಿವೆ.
- ಕೆ. ಯಜ್ಞತೀರ್ಥ, ೭ನೇ ತರಗತಿ ಗೌರವ ಕೊಡಬೇಕು
ನಮ್ಮ ದೇಶ ಭಾರತ. ನಾವು ಭಾರತೀಯರು. ನಾನು ಈ ಪುಣ್ಯ ಭೂಮಿಯಲ್ಲಿ ಹುಟ್ಟಲು ತುಂಬಾ ಅದೃಷ್ಟ ಮಾಡಿರುವೆ. ನನ್ನ ದೇಶ ಸುಂದರವಾದ, ಶಾಂತಿ ಪ್ರಿಯವಾದ ಮತ್ತು ಕೃಷಿ ಪ್ರಧಾನವಾದ ದೇಶ. ಶಾಂತಿ, ಸಹಭಾಳ್ವೆ ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ವಿಶ್ವಗುರು. ನನ್ನ ದೇಶ ಹತ್ತು ಹಲವು ಧರ್ಮವನ್ನು ಒಂದೇ ಎಂದು ಹೇಳುತ್ತ ಒಗ್ಗಟ್ಟಿನಿಂದ ಬದುಕುವ ಪುಣ್ಯ ಭೂಮಿ. ನಮ್ಮ ಹಿಂದೂಸ್ಥಾನ ಭಾರತ ದೇಶದ ಸ್ವಾತಂತ್ರö್ಯಕ್ಕಾಗಿ ಸಾವಿರಾರು ಜನ ತನ್ನ ಪ್ರಾಣವನ್ನೆ ಕೊಟ್ಟ ಮಹಾತ್ಮರ ದೇಶ. ನನ್ನ ಭಾರತಮಾತೆ ನನ್ನ ರಾಷ್ಟçಕ್ಕೆ, ನನ್ನ ರಾಷ್ಟçಧ್ವಜಕ್ಕೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ನನ್ನ ದೇಶ ನನ್ನ ಹೆಮ್ಮೆ.
ಭಾರತ್ ಮಾತಾಕೀ ಜೈ
- ಮೋಹಕ್, ೫ನೇ ತರಗತಿ, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್, ನಾಪೋಕ್ಲು.ರಾಷ್ಟçಪ್ರೇಮ ಜಾಗೃತವಾಗಿರಬೇಕು
ಈ ವರ್ಷ ಭಾರತ ದೇಶವು ೭೬ನೇ ಸ್ವಾತಂತ್ರೊö್ಯÃತ್ಸವವನ್ನು ಸಂಭ್ರಮದಿAದ ಆಚರಿಸುತ್ತಿದೆ. ಸ್ವಾತಂತ್ರö್ಯಕ್ಕಾಗಿ ನಮ್ಮ ಪೂರ್ವಜರು ತ್ಯಾಗ ಮತ್ತು ಬಲಿದಾನದಿಂದಲೇ ಇಂಗ್ಲೀಷರ ಅಡಿಯಾಳಾಗಿ ಇದ್ದ ನಮಗೆ ೧೯೪೭ ಆಗಸ್ಟ್ ೧೫ ರಂದು ಮಧ್ಯರಾತ್ರಿ ಸ್ವಾತಂತ್ರö್ಯ ಸಿಕ್ಕಿ ಪರಕೀಯರಿಂದ ಮುಕ್ತಿ ಸಿಕ್ಕಿತು. ಧರ್ಮ, ಭಾಷೆ, ಸಂಸ್ಕೃತಿ ಆಚರಣೆಗಳು ಬೇರೆಯಾದರೂ ನಾವೆಲ್ಲರೂ ಒಂದೇ ಎಂಬ ದೇಶಾಭಿಮಾನ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು. ಗಾಂಧೀಜಿಯವರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಜವಾಹರ್ ಲಾಲ್ ನೆಹರು, ಚಂದ್ರಶೇಖರ ಆಜಾದ್‌ರಂತಹ ಅನೇಕ ದೇಶಪ್ರೇಮಿ ನಾಯಕರ ಹಗಲು-ರಾತ್ರಿ ಹೋರಾಟದಿಂದ ಭಾರತವು ಇಂಗ್ಲೀಷರ ದಾಸ್ಯದಿಂದ ಮುಕ್ತಿ ಹೊಂದಿತು.
ಇವರೆಲ್ಲರ ದಂಗೆಗಳು ಯುದ್ಧಗಳು ಚಳವಳಿಗಳು. ಅಹಿಂಸಾತ್ಮಕ ಪ್ರತಿರೋಧಗಳಿಂದ ನಮ್ಮ ಸ್ವಾತಂತ್ರö್ಯಕ್ಕೆ ಪ್ರೇರಣೆಯಾಯಿತು. ಭಗತ್‌ಸಿಂಗ್ ನಂತಹ ಮಹಾನ್ ರಾಷ್ಟçಪ್ರೇಮಿ ಯುದ್ಧಭೂಮಿಯಲ್ಲಿ ದೇಶಕ್ಕಾಗಿ ಪ್ರಾಣವನ್ನು ಪಣವಾಗಿಟ್ಟು ಹೋರಾಡಿ ವೀರ ಮರಣವನ್ನಪ್ಪಿದ್ದನ್ನು ನಾವೆಲ್ಲರೂ ಎಂದಿಗೂ ಮರೆಯಬಾರದು.
ಏಳಿ ಎದ್ದೇಳಿ ಗುರಿಮುಟ್ಟುವವರೆಗೂ ನಿಲ್ಲದಿರಿ ಎಂಬ ವಿವೇಕ ವಾಣಿಯಂತೆ ನಮ್ಮೆಲ್ಲರ ರಾಷ್ಟçಪ್ರೇಮ ಸದಾ ಜಾಗೃತವಾಗಿರಬೇಕು.
ಜೈ ಹಿಂದ್! ಜೈ ಭಾರತ ಮಾತೆ
- ಎಂ.ಹೆಚ್. ಆದರ್ಶ್, ೯ನೇ ತರಗತಿ, ಸೈಂಟ್ ಆ್ಯನ್ಸ್ ಶಾಲೆ, ವೀರಾಜಪೇಟೆ.ಹೆಮ್ಮೆಯ ಸಂಕೇತ
ಭಾರತ ರಾಷ್ಟçಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ ಮತ್ತು ಹಸಿರು. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ಧ್ವಜವು ಮಧ್ಯದಲ್ಲಿ ೨೪ ಅಡ್ಡಗೆರೆಗಳನ್ನು ಹೊಂದಿದ್ದು, ನೀಲಿ ಬಣ್ಣದ ಅಶೋಕ ಚಕ್ರವಿದೆ. ಅಶೋಕ ಚಕ್ರವು ಧರ್ಮ ಚಕ್ರದ ಚಿತ್ರಣವಾಗಿದೆ. ಇದನ್ನು ಪಿಂಗಳಿ ವೆಂಕಯ್ಯ ಅವರು ಸ್ವರಾಜ್ಯ ಧ್ವಜ ಎಂದು ವಿನ್ಯಾಸಗೊಳಿಸಿದ್ದರು. ಭಾರತದ ರಾಷ್ಟçಧ್ವಜವನ್ನು ೨೨ ಜುಲೈ ೧೯೪೭ ರಂದು ಅಂಗೀಕರಿಸಲಾಯಿತು. ಇದು ನಮ್ಮ ಸ್ವಾತಂತ್ರö್ಯ, ರಾಷ್ಟçಕ್ಕೆ ಹೆಮ್ಮೆಯ ಸಂಕೇತವಾಗಿದೆ.ಸರ್ವೇಜನ ಸುಖಿನೋ ಭವಂತು
ಒAದು ರಾಷ್ಟçದ ಜನತೆ ಜಾತಿ, ಮತ, ಧರ್ಮ, ಪ್ರಾದೇಶಿಕತೆ, ಬೇಧಭಾವ ಬಿಟ್ಟು ತಾವೆಲ್ಲರೂ ಒಂದೇ ಎಂಬ ಭಾವನೆಯನ್ನು ತಳೆಯುವುದೇ ರಾಷ್ಟಿçÃಯ ಭಾವೈಕ್ಯತೆ. ಭಾರತ ಒಂದು ಜಾತ್ಯತೀತ ರಾಷ್ಟç. ನಮ್ಮ ದೇಶವು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪಿತವಾಗಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮಗಳು, ಭಾಷೆಗಳು, ವೇಷಭೂಷಣಗಳು, ಆಹಾರ ಪದ್ಧತಿಗಳು, ಆಚರಣೆಗಳು, ಸಂಸ್ಕೃತಿಗಳು ಕಂಡುಬರುತ್ತವೆ. ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ದೇಶದ ಪರಂಪರೆಯಾಗಿದೆ. ನಮ್ಮ ದೇಶದಲ್ಲಿ ಏಕತೆಯನ್ನು ಮೂಡಿಸುವುದು ಸವಾಲಿನ ಕಾರ್ಯವಾಗಿದೆ. ಆದರೆ ನಮ್ಮ ಸಂಸ್ಕೃತಿಯ ಸಹಿಷ್ಣತೆಯನ್ನು ವೇದಕಾಲದಿಂದಲೂ ಬೋಧಿಸಿಕೊಂಡು ಬಂದಿರುವುದರಿAದ ಸಹಭಾಳ್ವೆ ಮಾಡುವುದು ಇಂದು ಎಲ್ಲರಿಗೂ ಸಾಧ್ಯವಾಗಿದೆ. ವಸುಧೈವ ಕುಟುಂಬಕA, ಸರ್ವೇಜನ ಸುಖಿನೋ ಭವಂತು ಎಂಬುದು ನಮ್ಮ ನಾಡಿನ ಧ್ಯೇಯವಾಗಿದೆ.
- ಎಂ.ಕೆ. ಕೃತಿಕ, ೬ನೇ ತರಗತಿ, ಸ.ಹಿ.ಪ್ರಾ. ಶಾಲೆ, ಚೇರಂಬಾಣೆ.ದೇಶಭಕ್ತಿಯ ಸಂಕೇತ
ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟçಧ್ವಜ.
ಧ್ವಜವು ದೇಶದ ಪ್ರಮುಖ ಸಂಕೇತವಾಗಿದೆ. ಅಂತೆಯೇ ಭಾರತದ ರಾಷ್ಟçಧ್ವಜವು ಭಾರತಕ್ಕೆ ಅತ್ಯುನ್ನತ ಪ್ರಾಮುಖ್ಯತೆಯ ಸಂಕೇತವಾಗಿದೆ. ಭಾರತದ ರಾಷ್ಟçಧ್ವಜವು ದೇಶದ ಗೌರವ, ದೇಶಭಕ್ತಿ ಮತ್ತು ಸ್ವಾತಂತ್ರö್ಯದ ಸಂಕೇತವಾಗಿದೆ.
- ಪಿ.ಡಿ. ಲಾವಣ್ಯ, ೯ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾನ್‌ಬೈಲ್.ಸುಂದರ ದೇಶ
ನನ್ನ ದೇಶದ ಹೆಸರು ಭಾರತ. ಭಾರತ ಏಷ್ಯಾ ಖಂಡದಲ್ಲಿದೆ. ಭಾರತ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರö್ಯ ಪಡೆಯಿತು. ಭಾರತ ತುಂಬಾ ವಿಶಾಲವಾದ ಮತ್ತು ಸುಂದರ ದೇಶವಾಗಿದೆ. ಭಾರತವನ್ನು ಭಾರತ ಮತ್ತು ಹಿಂದೂಸ್ಥಾನ ಎಂದು ಕರೆಯುತ್ತಾರೆ. ಭಾರತ ವಿಶ್ವದ ೭ನೇ ದೊಡ್ಡ ದೇಶ ವಾಗಿದೆ. ಭಾರತವು ಉತ್ತರದಲ್ಲಿರುವ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ. ಭಾರತದ ರಾಷ್ಟçಧ್ವಜವು ೩ ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ, ಹಸಿರು.
- ಐ.ಎ. ಮೊಹಮ್ಮದ್ ಫಝಲ್, ೬ನೇ ತರಗತಿ, ಎಕ್ಸ್ಲ್ ವಿದ್ಯಾಸಂಸ್ಥೆ, ನಾಪೋಕ್ಲು.