ಗುಡ್ಡೆಮನೆ: ನಗರದಲ್ಲಿರುವ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ೭೭ನೇ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು. ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್, ಕೊಡಗು ಗೌಡ ವಿದ್ಯಾ ಸಂಘದ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವ್ಯವಸ್ಥಾಪಕ ಮತ್ತಾರಿ ರಮೇಶ, ಪ್ರಮುಖರಾದ ಕುಂಬುಗೌಡನ ವಿನೋದ್ ಕುಮಾರ್, ಪುದಿಯನೆರವನ ರೇವತಿ ರಮೇಶ್, ಪುದಿಯನೆರವನ ರಿಶಿತ್ ಮಾದಯ್ಯ ಮತ್ತಿತರರು ಹಾಜರಿದ್ದು ರಾಷ್ಟçಧ್ವಜಕ್ಕೆ ಗೌರವ ಅರ್ಪಿಸಿ, ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.ಕಡಂಗ: ಬದ್ರಿಯಾ ಜುಮಾ ಮಸೀದಿ ಎಸ್‌ಎಸ್‌ಎಫ್, ಎಸ್‌ವೈಎಸ್ ಸಂಯುಕ್ತದಲ್ಲಿ ಬದ್ರಿಯಾ ಮದರಸರದಲ್ಲಿ ೭೭ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಮಾನ್ ಅರಫಾರ್ ಅವರು ನೆರವೇರಿಸಿದರು.

ಪ್ರಾರ್ಥನೆಯನ್ನು ಇಸ್ಮಾಯಿಲ್ ಲತೀಫಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರೋತ್ಸವದ ಮಹತ್ವವನ್ನು ಸಂಕ್ಷಿಪ್ತವಾಗಿ ಗಣ್ಯ ವ್ಯಕ್ತಿಗಳು ವಿವರಿಸಿದರು. ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಮಂಡಳಿ ಸದಸ್ಯರು, ಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಸದಸ್ಯರು ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.ಮಡಿಕೇರಿ : ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನ ವತಿಯಿಂದ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎಂ. ರಾಜೇಶ್ ಹಾಗೂ ನಿರ್ದೇಶಕರುಗಳಾದ ರಾಜೇಶ್ ಯಲ್ಲಪ್ಪ, ಬಿ.ಕೆ. ಜಗದೀಶ್, ಎಸ್.ಸಿ. ಸತೀಶ್, ಕಾವೇರಮ್ಮ ಸೋಮಣ್ಣ, ಕನ್ನಂಡ ಸಂಪತ್, ಬಿ.ಪಿ.ಮಾಚಮ್ಮ, ಬಿ.ವಿ.ರೋಷನ್, ಕೆ.ಆರ್. ನಾಗೇಶ್, ವ್ಯವಸ್ಥಾಪಕರಾದ ಕೆ. ಪದ್ಮನಾಭ ಕಿಣಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸಿ.ಕೆ. ಬಾಲಕೃಷ್ಣ, ಬಿ.ಕೆ.ಜಗದೀಶ್ ಹಾಗೂ ಜಿ.ಎಮ್. ಸತೀಶ್ ಪೈ ಅವರು ದಿನದ ಮಹತ್ವದ ಕುರಿತು ಮಾತನಾಡಿದರು.ವೀರಾಜಪೇಟೆ: ವೀರಾಜಪೇಟೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ ಆಟೋ ಚಾಲಕರು ಮತ್ತು ಮಾಲಿಕರ ವತಿಯಿಂದ ೭೭ ನೇ ಸ್ವಾತಂತ್ರ÷್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವ್ಯವಸ್ಥಾಪಕ ಟಿ.ಎಸ್. ದಯಾನಂದ ಧ್ವಜಾರೋಹಣ ನೆರವೇರಿಸಿದರು.ಚೆಯ್ಯಂಡಾಣೆ : ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಸ್ಥಳೀಯ ಆಡಳಿತ ವೈದ್ಯಾಧಿಕಾರಿ ಡಾ: ಉತ್ತಪ್ಪ ಭರತ್ ನೆರವೇರಿಸಿದರು. ಈ ಸಂದರ್ಭ ಆರೋಗ್ಯ ಕೇಂದ್ರದ ಕನಕಾವತಿ, ರೋಹಿಣಿ, ಲೀಲಾವತಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ ನೇ ಸ್ವಾತಂತ್ರö್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. “ಹರ್ ಘರ್ ತಿರಂಗ್- ಮೇರಿ ಮಾಟಿ ಮೇರಾ ದೇಶ್ ಆಜಾದಿ ಕಾ ಅಮೃತ್ ಮಹೋತ್ಸವ್’’ ಎಂಬ ಶೀರ್ಷಿಕೆಯ ಫೋಟೋ ಬೂತ್ ಅನ್ನು ಶಾಲಾ ಆವರಣದಲ್ಲಿ ನಿರ್ಮಿಸಲಾಗಿತ್ತು. ವಿವಿಧ ರಾಷ್ಟç ನಾಯಕರ ವೇಷ ಧರಿಸಿದ ವಿದ್ಯಾರ್ಥಿಗಳು ಫೋಟೋ ಬೂತ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷೆ ಬಿಂದು ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ಅಹಿಂಸಾ ಅಸ್ತçÀ್ರದ ಮೂಲಕ ಸ್ವಾತಂತ್ರö್ಯಪಡೆದ ಭಾರತ ಇಂದಿಗೂ ಅದೇ ಹಾದಿಯಲ್ಲಿ ಸಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿದೆ ಎಂದರು. ವಿದ್ಯಾರ್ಥಿಗಳು ಸ್ವಾತಂತ್ರ‍್ಯ ಹೋರಾಟದ ವಿಚಾರಗಳನ್ನು ಹಂಚಿಕೊAಡರು. ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ನರ್ತಿಸಿ ರಂಜಿಸಿದರು.ಮಡಿಕೇರಿ: ೭೭ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಮಡಿಕೇರಿ ಕೊಡವ ಸಮಾಜದಲ್ಲಿ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಅವರು ಧ್ವಜಾರೋಹಣ ಮಾಡುವ ಮೂಲಕ ನಾಡಿನ ಜನತೆಗೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರುಗಳಾದ ಕೇಕಡ ವಿಜು ದೇವಯ್ಯ, ಮಂಡಿರ ಸದಾ ಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಸದಸ್ಯರುಗಳಾದ ಚೋವಂಡ ಕಾಳಪ್ಪ, ಚೊಟ್ಟೆಯಂಡ ಸಂಜು, ಮಣವಟ್ಟಿರ ಚಿಣ್ಣಪ್ಪ, ಕುಡುವಂಡ ಉತ್ತಪ್ಪ, ಚೊಟ್ಟೆಯಂಡ ಅಪ್ಪಾಜಿ, ಪುಟ್ಟಿಚಂಡ ಡಾನ್ ದೇವಯ್ಯ ಹಾಗು ಸಮಾಜದ ಸಿಬ್ಬಂದಿವರ್ಗ ಸೇರಿದಂತೆ ಹಲವರು ಹಾಜರಿದ್ದರು.ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಬಸಪ್ಪ ಶಿಶುವಿಹಾರದಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ. ಭಟ್ ಧ್ವಜಾರೋಹಣವನ್ನು ಮಾಡಿದರು. ನಂತರ ಕಾರ್ಯಕ್ರಮಗಳು ನಡೆದವು. ಕಲಿಯಂಡ ಸರಸ್ವತಿ ಚೆಂಗಪ್ಪ ಮತ್ತು ಕುಂತಿ ಬೋಪಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುನೀತಾ ಸಂಪತ್ ಪ್ರಾರ್ಥಿಸಿದರೆ ಅಧ್ಯಕ್ಷೆ ಸವಿತಾ. ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಸದಸ್ಯೆಯರಿಗಾಗಿ ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಗಳನ್ನು ಗೀತಾ ಮಧುಕರ್ ನಿರೂಪಿಸಿದರೆ, ಆಯಿಷಾ ಹಮೀದ್ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಉಮಾ ಈಶ್ವರ್, ಶುಭಾ ವಿಶ್ವನಾಥ್, ಸಂಧ್ಯಾ ಅಶೋಕ್, ಆಯಿಷಾ ಹಮೀದ್, ಸುಶೀಲಾ ವಾಸುದೇವ್ ಹಾಜರಿದ್ದರು.ಮಡಿಕೇರಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ೭೭ನೇ ಸ್ವಾತಂತ್ರೊö್ಯÃತ್ಸವವನ್ನು ಮಡಿಕೇರಿಯಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ನಗರದ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ತಿಳಿಸಿದರು.

ಮಡಿಕೇರಿ ಮಕ್ಕಾ ಮಸೀದಿ ಇಮಾಮರಾದ ಮೌಲಾನ ಅಬ್ದುಲ್ ಹಕ್ಕೀಂ, ಎಸ್‌ಡಿಪಿಐ ನಗರಾಧ್ಯಕ್ಷ ರಿಜ್ವಾನ್, ನಗರಸಭಾ ಸದಸ್ಯರಾದ ಅಮಿನ್ ಮೊಹಿಸಿನ್, ಮನ್ಸೂರ್, ಬಶೀರ್, ಮೇರಿ, ನೀಮ ಅರ್ಷದ್, ಜಿಲ್ಲಾ ಸಮಿತಿ ಮತ್ತು ನಗರ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು.ಮಡಿಕೇರಿ: ದಾರುಲ್ ಹುದಾ ಅರಬ್ಬಿ ಮದ್ರಸದಲ್ಲಿ ೭೭ನೇ ಸ್ವಾತಂತ್ರö್ಯ ದಿನಾಚಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಅಧ್ಯಾಪಕÀ ಮಹಮೂದ್ ಸಅದಿ ವಿಶೇಷ ಪ್ರಾರ್ಥನೆ ಮಾಡಿ, ಧ್ವಜಾರೋಹಣ ನೆರವೇರಿಸಿದರು. ಪ್ರಾಸ್ತಾವಿಕ ಮಾತನಾಡಿದ ದಾರುಲ್ ಹುದಾ ಅರಬ್ಬಿ ಮದ್ರಸ ಸಮಿತಿಯ ಅಧ್ಯಕ್ಷ ಎಂ.ಎA. ಯಾಕುಬ್ ಭಾರತ ಸ್ವಾತಂತ್ರö್ಯ ಚಳವಳಿಯ ಬಗ್ಗೆ ವಿವರಿಸಿದರು.

ಭಾರತೀಯ ಸ್ವಾತಂತ್ರ÷್ಯ ಚಳುವಳಿಯು ಐತಿಹಾಸಿಕ ಘಟನೆಗಳ ಸರಣಿಯಾಗಿದ್ದು, ೧೮೫೭ ರಿಂದ ೧೯೪೭ ರವರೆಗೆ ಸ್ವಾತಂತ್ರö್ಯ ಹೋರಾಟ ನಡೆಯಿತು. ೧೯೧೮ ರಿಂದ ೧೯೨೨ ಗಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯನ್ನು ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪ್ರಾರಂಭಿಸಿ ದೊಡನೆ ಸ್ವತಂತ್ರö್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು.

ಗಾಂಧೀಜಿ ಅವರ ನೇತೃತ್ವದಲ್ಲಿ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಚಳವಳಿಯ ಮೂಲಕ ಭಾರತದ ಪ್ರಜೆಗಳು ಒಗ್ಗೂಡಿ ಹೋರಾಟ ನಡೆಸಿದ ದಿನಗಳನ್ನು ನೆನಪಿಸಿ ಎಲ್ಲಾ ಹೋರಾಟಗಾರರಿಗೂ ಗೌರವ ಸಲ್ಲಿಸಿದರು.

ಈ ಸಂದರ್ಭ ಗೌರವಾಧ್ಯಕ್ಷ ಎಂ.ಡಿ. ಸಲೀಂ, ಕಾರ್ಯದರ್ಶಿ ಮೊಹಮ್ಮದ್ ಗೌಸ್, ಯುವ ಸಮಿತಿ ಅಧ್ಯಕ್ಷ ಸುಹೈಲ್, ಸದಸ್ಯರಾದ ಜಲೀಲ್, ಶಬೀರ್ ಹಾಗೂ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಆಟೋ ಚಾಲಕರ ಮಾಲೀಕರು ಮತ್ತು ಸಂಘದ ವತಿಯಿಂದ ೭೭ನೇ ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ಆಟೋ ನಿಲ್ದಾಣದಲ್ಲಿ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ ಧ್ವಜಾರೋಹಣವನ್ನು ನೇರವೇರಿಸಿದರು.

ಆಟೋ ಚಾಲಕರ ಸಂಘದ ಕಛೇರಿಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಸ್ತಂಭದಲ್ಲಿ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ ಧ್ವಜಾರೋಹಣ ನೆರವೇರಿಸಿದರು. ಮಾಲೀಕರು ಮತ್ತು ಆಟೋ ಚಾಲಕರು ಆಟೋರಿಕ್ಷಾಗಳಿಗೆ ಧ್ವಜಗಳನ್ನು ಅಳವಡಿಸಿ ಘೋಷಣೆಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು.

ಈ ಸಂದರ್ಭ ಸಂಘದ ವಿ.ಎ. ಶರೀಫ್, ಉಪಾಧ್ಯಕ್ಷ ಮನು, ಜಿ.ಎಸ್.ಚಂದ್ರ, ಸಿ.ಎ. ಸಚಿನ್, ಯು. ಹರೀಶ್, ಸಹ ಕಾರ್ಯದರ್ಶಿ ಮಹಮ್ಮದ್ ಆಲಿ, ಸಹ ಕೋಶಾಧಿಕಾರಿ ಕಲಂದರ್, ವಿನ್ಸಿ ಡಿಸೋಜ, ಬಿ.ಕೆ. ರಂಜಿತ್, ಹೆಚ್.ಎಂ. ಆಶ್ರಫ್, ಸೆಲ್ವಿಸ್ಟರ್ ಡಿಸೋಜ, ಶರತ್, ಪ್ರಕಾಶ್ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಹಾಗೂ ಚಾಲಕರುಗಳು ಇದ್ದರು.