ಮಡಿಕೇರಿ, ಆ. ೧೯: ಸೃಜನ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಕೆಲಸ ಮಾಡಿ ದರೆ ಉತ್ತಮ ಛಾಯಾಗ್ರಾಹಕನಾಗಿ ಹೊರಹೊಮ್ಮಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ವಿಜೇತ, ಸಿನಿಮಾ ಛಾಯಾಗ್ರಾಹಕ, ಮುಂಗಾರುಮಳೆ ಖ್ಯಾತಿಯ ಎಸ್. ಕೃಷ್ಣ ಅಭಿಮತ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋ ತ್ಸವ ಆಚರಣಾ ಸಮಿತಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ದೃಶ್ಯಂ-೨೦೨೩’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಛಾಯಾ ಗ್ರಾಹಕನಿಗೆ ನಿರಂತರತೆ ಇರಬೇಕು. ಅಭ್ಯಾಸಿಸುವ ಗುಣವಿರಬೇಕು. ಫೋಟೋದೊಂದಿಗೆ ಕಥೆಯನ್ನು ಹೇಳುವ, ಬಣ್ಣಗಳನ್ನು ಹೊಂದಾ ಣಿಸುವ ನೈಪುಣ್ಯತೆ ಇರಬೇಕು. ರೀಲ್ ಕಾಲದಿಂದ ಡಿಜಿಟಲ್ ತಂತ್ರಜ್ಞಾನದ ತನಕ ಅನೇಕ ಕ್ಯಾಮರಗಳು ಬಂದಿವೆ. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾವಣೆ ಆಗುತ್ತದೆ. ಇದನ್ನು ಅಳವಡಿಸಿಕೊಳ್ಳ ಬೇಕಾದರೆ ಮಾನಸಿಕತೆ ಸದೃಢವಾಗಿ ರಬೇಕು. ಕಲಿಕೆಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಸವಾಲು ನಡುವೆ ನಾವು ಮುನ್ನುಗ್ಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸಕಾರಾತ್ಮಕ ಚಿಂತನೆಯನ್ನೂ ಮೈಗೂಡಿಸಿಕೊ ಳ್ಳಬೇಕು. ಕೊಡಗಿನ ಜನರ ಕಣ್ಣಿನಲ್ಲಿ ಪ್ರಕೃತಿಯ ದೃಶ್ಯ ಗಾಢವಾಗಿ ತುಂಬಿದೆ. ಇಲ್ಲಿನ ಜನರಿಂದ ಫೋಟೋಗ್ರ‍್ರಫಿ ಯಲ್ಲಿ ಮತ್ತಷ್ಟು ಹೊಸ ಪ್ರಯೋಗ ಮಾಡಬಹುದು ಎಂದು ವಿಶ್ಲೇಷಿಸಿದರು.

‘ನವಮಾಧ್ಯಮದಲ್ಲಿ ಛಾಯಾ ಗ್ರ‍್ರಾಹಕರ ಸವಾಲು ಮತ್ತು ಭವಿಷ್ಯ’ ವಿಚಾರದಲ್ಲಿ ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಮಾತನಾಡಿ, ಯಾವುದೇ ಕಲೆಗೆ ಅಂತ್ಯವಿಲ್ಲ. ಅದು ಮೇಲ್ದರ್ಜೆ ಗೇರುತ್ತದೆ. ಅದನ್ನು ಕಲಿತುಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಬಹುದು. ಬೇರೆಯವರಿಗೆ ಕಾಣದ ವಿಚಾರ ಕಾಣು ವುದು ಛಾಯಾಗ್ರಾಹಕನ ವಿಶೇಷತೆ ಯಾಗಿರಬೇಕು. ಸೂಕ್ಷö್ಮಸಂವೇದನ ಶೀಲರಾಗಿರಬೇಕು. ಡಿಜಿಟಲ್ ಮಾಧ್ಯ ಮದಿಂದ ಅನೇಕ ಉಪಯೋಗ ಗಳಿವೆ. ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡರೆ ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಹೊಸ ಅವಕಾಶಗಳನ್ನು ಎಲ್ಲರೂ ಬಳಸಿ ಕೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಮೂಲಕ ಜ್ಞಾನ ಪಡೆಯ ಬಹುದಾಗಿದೆ. ಕಲಿತ ವಿಚಾರದಲ್ಲಿ ಪ್ರಯೋಗಗಳು ಆಗಬೇಕು. ಯಾರೂ ಹೋಗದ ದಾರಿಯಲ್ಲಿ ಹೋಗುವುದೇ ಕಲಿಕೆಯಾಗಿದೆ ಎಂದು ಹೇಳಿದರು.

‘ಅಧುನಿಕ ಜಗತ್ತಿನಲ್ಲಿ ರೀಲ್ಸ್ ಟ್ರೆಂಡ್’ ವಿಷಯವಾಗಿ ಮಾತನಾಡಿದ ಡಿಜಿಟಲ್ ಕ್ರಿಯೇಟರ್ ಬಲ್ಲಚಂಡ ಭಜನ್ ಬೋಪಣ್ಣ, ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಆದರೆ, ಕ್ರಿಯೇಟರ್ಸ್ಗಳು ಕಡಿಮೆ ಇದ್ದಾರೆ. ಈ ಸಂಖ್ಯೆ ಹೆಚ್ಚಾ ಗಬೇಕು. ಸಿನಿಮಾದಲ್ಲಿ ಮಾಡಲಾಗದ ಸಾಧನೆಯನ್ನು ರೀಲ್ಸ್ ಮೂಲಕ ಮಾಡುವ ಅವಕಾಶಗಳಿವೆ. ರೀಲ್ಸ್ ಗಳು ಖುಷಿಯೊಂದಿಗೆ ಜ್ಞಾನವನ್ನು ಹಂಚುತ್ತಿರುವುದು ಶ್ಲಾಘನೀಯ ಎಂದ ಅವರು, ಸರಿಯಾಗಿ ಬಳಸಿ ಕೊಂಡರೆ ಸೋಶಿಯಲ್ ಮೀಡಿ ಯಾದಿಂದ ಆದಾಯ ಗಳಿಸಬಹುದು ಎಂದು ವಿವರಿಸಿದರು.

ಹಿರಿಯ ಛಾಯಾಗ್ರಾಹಕ ಗುರುಚರಣ್ ಸಿಂಗ್ ಮಾತನಾಡಿ, ಪ್ರತಿಕೂಲ ಪರಿಸ್ಥಿತಿ, ಸೀಮಿತ ಅವಕಾಶದಲ್ಲಿ ಉತ್ತಮ ಕೆಲಸ ಮಾಡಿದ ಪರಿಣಾಮ ವೃತ್ತಿಯಲ್ಲಿ ಉತ್ತಮ ಅವಕಾಶ ದೊರೆಯಿತು. ಛಾಯಾಗ್ರಾಹಣ ಕ್ಷೇತ್ರದಲ್ಲಿ ತಾಳ್ಮೆ, ಧೈರ್ಯ ಇರಬೇಕು. ವೃತ್ತಿಯಲ್ಲಿ ದೇವರನ್ನು ಕಾಣಬೇಕು ಎಂದು ಕರೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಮಾತನಾಡಿ, ಛಾಯಾಗ್ರಾಹಣದ ಆಸಕ್ತಿ ಇರುವವರು ಅದನ್ನು ವೃತ್ತಿಯಾಗಿ ಮಾಡಿಕೊಳ್ಳುವ ವಿಪುಲ ಅವಕಾಶಗಳು ಇದೀಗ ಸೃಷ್ಟಿಯಾಗಿದೆ. ಛಾಯಾಗ್ರಾಹಣ ಕ್ಷೇತ್ರ ಇಂದು ಪರಿಣಾಮಕಾರಿಯಾಗಿ ಬದಲಾಗಿದೆ. ಚಿತ್ರಗಳು ಸಾವಿರ ಪದಗಳಿಗೆ ಸಮವಾಗಿದ್ದು, ಫೋಟೋಗ್ರಾಫಿಯಲ್ಲಿ ವಿಶೇಷತೆ ಇರಬೇಕು. ನೈಪುಣ್ಯತೆ ಸಾಧಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಸಂಚಾಲಕ ಮಂದನೆರವAಡ ಯುಗದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಹಾಜರಿದ್ದರು. ಕುಡೆಕ್ಕಲ್ ಗಣೇಶ್ ಪ್ರಾರ್ಥಿಸಿ, ಚಂದನ್ ನಂದರಬೆಟ್ಟು ಸ್ವಾಗತಿಸಿ, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ಗೋಪಾಲ್ ಸೋಮಯ್ಯ ವಂದಿಸಿದರು.