ಮಡಿಕೇರಿ, ಆ. ೧೯: ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣ ಮರೆಯಾಗಿ ಬಿಸಿಲು ಕಾಣಿಸಿಕೊಂಡಿತ್ತು.
ಮುಂಗಾರುಮಳೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಬಿಸಿಲಿನ ಸನ್ನಿವೇಶ ಕೃಷಿಕರು ಸೇರಿದಂತೆ ಜನತೆಯಲ್ಲಿ ಮುಂದಿನ ದಿನಗಳ ಕಲ್ಪನೆಯೊಂದಿಗೆ ಆತಂಕಕ್ಕೆ ಕಾರಣವಾಗಿತ್ತು. ಆದರೆ ನಿನ್ನೆ ಸಂಜೆಯಿAದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡುಬAದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹಿಡಿದು ಜಿಲ್ಲೆಯ ಹಲವಾರು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಮತ್ತೆ ಮಳೆಗಾಲದ ಲಕ್ಷಣ ಕಂಡುಬAದಿದ್ದು ಮಳೆಯಾಗುತ್ತಿದೆ. ಮಡಿಕೇರಿಯಲ್ಲಿ ಕಳೆದ ರಾತ್ರಿಯಿಡೀ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಶನಿವಾರದಂದೂ ಇದೇ ಚಿತ್ರಣ ಮುಂದುವರಿದಿತ್ತು. ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೃಷಿ ಕೆಲಸ ಕಾರ್ಯಗಳಿಗೆ ತೊಂದರೆ ಅನುಭವಿಸುತ್ತಿದ್ದ ರೈತರಲ್ಲಿ ಈ ಬದಲಾವಣೆ ಒಂದಷ್ಟು ಆಶಾಭಾವನೆ ಮೂಡಿಸಿದೆ. ಪೊನ್ನಂಪೇಟೆಯಲ್ಲಿ ರಭಸದ ಮಳೆಯಾಗಿರುವ ಕುರಿತು ವರದಿಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೦.೮೨ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೦೭ ಇಂಚು, ವೀರಾಜಪೇಟೆ ೦.೫೬ ಹಾಗೂ ಸೋಮವಾರಪೇಟೆಯಲ್ಲಿ ೦.೮೧ ಇಂಚು ಸರಾಸರಿ ಮಳೆಯಾಗಿದೆ. ಭಾಗಮಂಡಲ, ಸಂಪಾಜೆ ಹೋಬಳಿಯಲ್ಲಿಯೂ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಹೋಬಳಿಗಳಲ್ಲೂ ಸುಮಾರು ಅರ್ಧ ಇಂಚಿನಿAದ ಒಂದು ಇಂಚಿನಷ್ಟು ಮಳೆಯಾಗಿದೆ. ಈತನಕ ಬಿಸಿಲಿನ ವಾತಾವರಣವಿದ್ದ ಹಿನ್ನೆಲೆಯಲ್ಲಿ ತಾ. ೧೭ರಂದು ಮಳೆದೇವರೆಂದು ಪ್ರಸಿದ್ಧಿಯಾಗಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಖಿಲ ಕೊಡವ ಸಮಾಜದ ಮೂಲಕ ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕ ಪೂಜೆ ನೆರವೇರಿಸಲಾಗಿತ್ತು. ಇದೀಗ ಮಳೆಯಾಗುತ್ತಿರುವ ಬಗ್ಗೆ ಅ.ಕೊ.ಸ. ಅಧ್ಯಕ್ಷ ಪರದಂಡ ಸುಬ್ರಮಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ವಿಭಾಗದಲ್ಲಿ ಸಾಧಾರಣ ಮಳೆ
ಸೋಮವಾರಪೇಟೆ : ಕಳೆದ ೧೫ ದಿನಗಳಿಂದ ದೂರವಾಗಿದ್ದ ಮಳೆ ನಿನ್ನೆ ರಾತ್ರಿಯಿಂದ ಮತ್ತೆ ಆರಂಭಗೊAಡಿದ್ದು, ಕೃಷಿಕ ವರ್ಗದಲ್ಲಿ ಸಮಾಧಾನ ತಂದಿದೆ.
ನಿನ್ನೆ ರಾತ್ರಿ ಮತ್ತು ಇಂದು ಸೋಮವಾರಪೇಟೆ ಕಸಬಾ ಹೋಬಳಿ ಸೇರಿದಂತೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಆಶಾದಾಯಕ ಮಳೆಯಾಗಿದ್ದು, ಮತ್ತೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಇದರೊಂದಿಗೆ ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲೂ ಸಾಧಾರಣ ಮಳೆ ಸುರಿದಿದೆ.
ಕಳೆದ ೧೫ ದಿನಗಳಿಂದ ಬೇಸಿಗೆಯ ವಾತಾವರಣವಿದ್ದು, ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಗದ್ದೆಗಳಲ್ಲಿ ನಾಟಿ ಮಾಡಿದ್ದ ಪೈರು ನೀರಿನ ಕೊರತೆಯಿಂದ ನಲುಗುವ ಹಂತಕ್ಕೆ ತಲುಪಿತ್ತು.
(ಮೊದಲ ಪುಟದಿಂದ) ಇತ್ತ ಕಾಫಿ ತೋಟಗಳಲ್ಲಿಯೂ ಬಿಳಿಕಾಂಡಕೊರಕ ಕೀಟದ ಹಾವಳಿ ಹೆಚ್ಚಲು ಕಾರಣವಾಗಿತ್ತು. ತೋಟಗಳಿಗೆ ಗೊಬ್ಬರ ಹಾಕಿದ್ದ ಬೆಳೆಗಾರರು ಮಳೆಗಾಗಿ ಕಾದಿದ್ದರು.
ಕಳೆದ ತಾ. ೧೭ ರಿಂದ ಆರಂಭಗೊAಡಿದ್ದ ಮಖಾ ಮಳೆಯು ಎರಡು ದಿನಗಳ ಕಾಲ ಸುರಿಯದೇ ಇದ್ದುದರಿಂದ ಈ ಮಳೆಯೂ ಕೃಷಿಕರಿಗೆ ಕೈಕೊಡುತ್ತದೆಯೇ ಎಂಬ ಆತಂಕ ಸೃಷ್ಟಿಸಿತ್ತು. ಆದರೆ ನಿನ್ನೆಯಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಕೃಷಿಕ ವರ್ಗದಲ್ಲಿ ನೆಮ್ಮದಿ ತಂದಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊಡ್ಲಿಪೇಟೆ ವಿಭಾಗಕ್ಕೆ ೧೧.೮ ಮಿ.ಮೀ., ಶನಿವಾರಸಂತೆಗೆ ೫ ಹಾಗೂ ಶಾಂತಳ್ಳಿಗೆ ೪೮, ಸೋಮವಾರಪೇಟೆಗೆ ೨೮.೬ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಗ್ರಾಮಗಳಲ್ಲಿ ಈ ಸಾಲಿನಲ್ಲಿ ಮಳೆ ಆಧಾರಿತವಾಗಿ ರೈತರು ಹೆಚ್ಚಾಗಿ ಮೆಕ್ಕೆಜೋಳದ ಬೆಳೆಯನ್ನು ಬೆಳೆದಿರುತ್ತಾರೆ. ಕಳೆದ ೧೫ ದಿನಗಳಿಂದ ಮಳೆಯು ಬಾರದೆ ಜೋಳದ ಬೆಳೆಯು ಒಣಗುತ್ತಿತ್ತು, ಅದರೆ ಕಳೆದ ಒಂದು ದಿನದಿಂದ ಆಗುತ್ತಿರುವ ಮಳೆಯಿಂದಾಗಿ ಈ ವ್ಯಾಪ್ತಿಯ ರೈತರಿಗೆ ಸಮಾಧಾನ ತಂದಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಸೀಗೆಹೊಸೂರು, ಅಳುವಾರ ಸಿದ್ದಲಿಂಗಪುರ, ೬ನೇ ಹೊಸಕೋಟೆ, ಬೈರಪ್ಪನ ಗುಡಿ, ಹೆಬ್ಬಾಲೆ ಚಿಕ್ಕತ್ತೂರು, ದೊಡ್ಡತ್ತೂರು ಸೇರಿದಂತೆ ಅನೇಕ ಗ್ರಾಮಗಳು ಆರೆ ಮಲೆನಾಡು ಪ್ರದೇಶಗಳಾಗಿದ್ದು, ಮಳೆಯನ್ನೇ ಅವಲಂಭಿಸಿ ರೈತರು ಬೆಳೆಯನ್ನು ಬೆಳೆಯುತ್ತಾರೆ. ಈ ಭಾಗದ ರೈತರು ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಈಗಾಗಲೇ ಮೆಕ್ಕೆಜೋಳದ ಬಿತ್ತನೆಯ ಕಾರ್ಯವನ್ನು ಮಾಡಿದ್ದು, ಈ ಜೋಳವು ಬೆಳೆದು ಹೂ ಅರಳಿ ತೆನೆ ಕಟ್ಟುವ ಹಂತಕ್ಕೆ ಬಂದು ತಲುಪಿದೆ.
ಮಳೆಯಿಲ್ಲದೆ ಜೋಳ ಒಣಗುತ್ತಿದ್ದ ಸಂದರ್ಭದಲ್ಲಿ ಜೋಳಕ್ಕೆ ರಸ ಗೊಬ್ಬರ ಹಾಕಲು ಬಹು ಮುಖ್ಯವಾಗಿ ಮಳೆಯ ಅವಶ್ಯಕತೆ ಇತ್ತು. ಇಂದು ಬಿದ್ದ ಮಳೆಯಿಂದಾಗಿ ಈ ವ್ಯಾಪ್ತಿಯ ರೈತರು ಸಮಾಧಾನಪಟ್ಟುಕೊಂಡು ಜೋಳದ ಕೆಲಸದಲ್ಲಿ ತೊಡಗಿದ್ದಾರೆ.