ವೀರಾಜಪೇಟೆ, ಆ. ೧೯: ರಸ್ತೆ ಅಪಘಾತದಲ್ಲಿ ಯುವತಿಯೋರ್ವಳು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಅಮ್ಮತ್ತಿ ಕೆನರಾ ಬ್ಯಾಂಕ್ ಉದ್ಯೋಗಿ, ಮೂಲತಃ ಕೇರಳದ ತ್ರಿಶೂರ್ ನಿವಾಸಿ ಅಮೃತ (೨೪) ಮೃತ ದುರ್ದೈವಿ. ಬೈಕ್‌ನಲ್ಲಿದ್ದ ಸವಾರ ವಿಠಲ

(ಮೊದಲ ಪುಟದಿಂದ) ಎಂಬವರಿಗೂ ಗಂಭೀರ ಗಾಯಗಳಾಗಿವೆ.

ನಗರದ ಹೊರವಲಯದ ಸುಂಕದಕಟ್ಟೆಯಲ್ಲಿ ಘಟನೆ ಸಂಭವಿಸಿದ್ದು, ವಿಠಲ ಅವರ ಬೈಕ್ ಮತ್ತು ಅಮೃತರ ಸ್ಕೂಟರ್ ನಡುವೆ ಶುಕ್ರವಾರ ಸಂಜೆ ೭.೩೦ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅಮ್ಮತ್ತಿ ಕೆನರಾ ಬ್ಯಾಂಕ್‌ನಿAದ ಕೆಲಸ ಮುಗಿಸಿ ಸಂಜೆ ವೀರಾಜಪೇಟೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ವೀರಾಜಪೇಟೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ನಜ್ಜುಗುಜ್ಜಾಗಿದ್ದು ಯುವತಿ ರಸ್ತೆ ಬದಿಗೆ ಬಿದ್ದು ತಲೆಗೆ ಮಾರಣಾಂತಿಕ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಬಿಳುಗುಂದ ನಿವಾಸಿ, ಬೈಕ್ ಸವಾರ ವಿಠಲ್‌ಗೂ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.