ಕುಶಾಲನಗರ, ಆ. ೧೯ : ಕುಶಾಲನಗರ ಪಟ್ಟಣದ ದೇವಾಲಯ ಒಂದಕ್ಕೆ ನುಗ್ಗಿ ದೇವರ ಆಭರಣ ಮತ್ತು ನಗದು ಕಳ್ಳತನ ಮಾಡಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಕುಶಾಲನಗರ ಮಡಿಕೇರಿ ರಸ್ತೆಯ ಶ್ರೀ ಆದಿಶಕ್ತಿ ಅಂತರ್ಘಟ್ಟೆ ಅಮ್ಮನ ದೇವಾಲಯದ ಬಾಗಿಲು ಮುರಿದು ಕಳ್ಳರು ದೇವರ ಮೇಲೆ ಇರಿಸಿದ್ದ ತಾಳಿ ಸರಗಳು ಮತ್ತು ಸುಮಾರು ೬ ಸಾವಿರ ರೂ ನಗದು ದೋಚಿದ್ದಾರೆ.

ದೇವಾಲಯದಲ್ಲಿ ಇರಿಸಲಾಗಿದ್ದ ಸಿಸಿ ಕ್ಯಾಮರಾದ ಡಿಬಿಆರ್ ಅನ್ನು ಕಳ್ಳರು ತುಂಡರಿಸಿ ತೆಗೆದುಕೊಂಡು ಹೋಗಿದ್ದು ಸಮೀಪದಲ್ಲಿ ಪೊಲೀಸರಿಗೆ ಪತ್ತೆಯಾಗಿದೆ.