ಕೂಡಿಗೆ, ಆ. ೧೮: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ಈ ಸಾಲಿನಲ್ಲಿ ವಿವಿಧ ಹಂತಗಳಲ್ಲಿ ಸಂಘದ ಸದಸ್ಯರುಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸಂಘದ ರೈತರ ಪ್ರಗತಿಗೆ ಪೂರಕವಾದ ಯೋಜನೆಯನ್ನು ಹಮ್ಮಿಕೊಂಡು ಪ್ರಗತಿಯತ್ತ ಸಾಗುತ್ತಿದೆ. ಈ ಸಾಲಿನಲ್ಲಿ ೭೦ ಲಕ್ಷ ೩೩ ಸಾವಿರದಷ್ಟು ಲಾಭಾಂಶ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಂಘವು ಈ ಸಾಲಿನಲ್ಲಿ ೨೮೧.೨೨ ಲಕ್ಷ ಸದಸ್ಯರ ಪಾಲು ಬಂಡವಾಳವನ್ನು ಹೊಂದಿದ್ದು, ಇದರಲ್ಲಿ ಕೆ.ಸಿ.ಸಿ. ಸಾಲವಾಗಿ ೬ ಕೋಟಿ, ೧೦ ಲಕ್ಷ ದ ೪೯ ಸಾವಿರದಷ್ಟು ರೈತರಿಗೆ ಸಾಲವನ್ನು ನೀಡಲಾಗಿದೆ. ಅದರಲ್ಲಿ ಕೃಷಿ ಮಧ್ಯಾಮವಾಧಿ ಸಾಲವಾಗಿ ೧೩.೫೮ ಲಕ್ಷ, ಜಾಮೀನು ಸಾಲ ೯೧ ಲಕ್ಷದ ೫೧, ಸಾವಿರ, ನಿರಖು ಠೇವಣಿ ೧೪.೪೩ ಲಕ್ಷ, ಪಿಗ್ಮಿ ಠೇವಣಿ ೩೫ ಸಾವಿರ, ಸ್ವಸಹಾಯ ಗುಂಪುಗಳಿಗೆ ೨೧.೬ ಲಕ್ಷ, ಭವಿಷ್ಯ ನಿಧಿಗೆ ೮.೩೩ ಲಕ್ಷ, ಆಭರಣ ಸಾಲವಾಗಿ ೧ ಕೋಟಿ ೨೫ ಲಕ್ಷ ೭೩ ಸಾವಿರ, ವ್ಯಾಪಾರ ಅಭಿವೃದ್ಧಿಗೆ ೨, ಕೋಟಿ ೫೬ ಲಕ್ಷದ ೪೫ ಸಾವಿರ, ಪಿಗ್ಮಿ ಸಾಮಾನ್ಯ ೧೩ ಕೋಟಿ ೫೬ ಲಕ್ಷ, ಸೇರಿದಂತೆ ಗೊಬ್ಬರ, ವ್ಯಾಪಾರ ಲಾಭ ಸೇರಿದಂತೆ ವಿವಿಧ ಬಗೆಯ ಅದಾಯದಿಂದಾಗಿ ಈ ಸಾಲಿನಲ್ಲಿ ಸಂಘಕ್ಕೆ ೭೦ ಲಕ್ಷ ೩೩ ಸಾವಿರದಷ್ಟು ಲಾಭಾಂಶವನ್ನು ಸಂಘವು ಗಳಿಸಿದೆ ಇದರ ಜೊತೆಯಲ್ಲಿ ಸಂಘವು ‘ಎ’ ದರ್ಜೆಯ ಸ್ಥಾನ ಪಡೆದಿದೆ ಎಂದು ಕೆ.ಕೆ. ಹೇಮಂತ್ ಕುಮಾರ್ ಮಾಹಿತಿಯನ್ನು ನೀಡಿದರು. ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ೨೬ ರಂದು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್‌ನವರ ಅಧ್ಯಕ್ಷತೆಯಲ್ಲಿ ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನ ತಿಳಿಸಿದ್ದಾರೆ.