ಸಿದ್ದಾಪುರ, ಆ. ೧೮ : ಜಿಲ್ಲೆಯ ಹಾಗೂ ವೀರಾಜಪೇಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟೀರ ಪೊನ್ನಣ್ಣ ಭರವಸೆ ನೀಡಿದರು.
ಅಮ್ಮತ್ತಿಯ ಕಾವೇರಿ ರಾಯಲ್ಸ್ ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾರೇ ಬಂದು ಸಮಸ್ಯೆಗಳನ್ನು ತಿಳಿಸಿದರೆ ರಾಜಕೀಯ ರಹಿತವಾಗಿ ಕೆಲಸ ಮಾಡಿಕೊಡುವುದಾಗಿ ಸಿದ್ದಾಪುರ, ಆ. ೧೮ : ಜಿಲ್ಲೆಯ ಹಾಗೂ ವೀರಾಜಪೇಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟೀರ ಪೊನ್ನಣ್ಣ ಭರವಸೆ ನೀಡಿದರು.
ಅಮ್ಮತ್ತಿಯ ಕಾವೇರಿ ರಾಯಲ್ಸ್ ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾರೇ ಬಂದು ಸಮಸ್ಯೆಗಳನ್ನು ತಿಳಿಸಿದರೆ ರಾಜಕೀಯ ರಹಿತವಾಗಿ ಕೆಲಸ ಮಾಡಿಕೊಡುವುದಾಗಿ ಮಾಡಲಾಗಿದೆ ಎಂದರು. ೨೦೧೬ರಿಂದ ಪ್ರಾರಂಭವಾದ ಕುಲಶಾಸ್ತçದ ಅಧ್ಯಯನ ಈವರೆಗೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಪ್ರಯತ್ನ ನಡೆಯಬೇಕಿದೆ ಎಂದರು.
ಸುಜಾಗೂ ಸನ್ಮಾನ: ಇದೇ ಸಂದರ್ಭದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪನವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಡವ ಜನಾಂಗ ವಿಶಿಷ್ಟ ಜನಾಂಗವಾಗಿದ್ದು, ವಿಶಿಷ್ಟ ಆಚಾರ-ವಿಚಾರವನ್ನು ಹೊಂದಿರುವ ಜನಾಂಗವಾಗಿದೆAದು ಬಣ್ಣಿಸಿದರು. ಕೊಡಗಿನ ಮಣ್ಣು ಪರಿಸರ ಪ್ರಕೃತಿಗಳು ವಿಶ್ವದ ಎಲ್ಲಿಯೂ ಇಲ್ಲ ಎಂದ ಅವರು, ಇತ್ತೀಚಿನ ಕೆಲವು ವರ್ಷ ಗಳಿಂದ ಜಿಲ್ಲೆಯಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್ಗಳಿಂದಾಗಿ ಇದೀಗ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನಾಂಗದವರು ಹಣದಾಸೆಗೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು ಎಂದರು. ಮಹಿಳೆಯರು ಮನೆಯಲ್ಲೇ ಇರದೇ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬಂದು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.
ಕಾವೇರಿ ರಾಯಲ್ಸ್ ರಿಕ್ರಿಯೇಷನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮೊಳ್ಳೇರ ಸದಾ ಅಪ್ಪಚ್ಚು ಮಾತನಾಡಿ, ಶಾಸಕರುಗಳಾದ ಪೊನ್ನಣ್ಣ ಹಾಗೂ ಸುಜಾ ಕುಶಾಲಪ್ಪರವರು ಜಿಲ್ಲೆಗೆ ಸಹಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದರು. ಅಸೋಸಿ ಯೇಷನ್‌ನ ಉಪಾಧ್ಯಕ್ಷ ನೆಲ್ಲಮಕ್ಕಡ ಸಂತೋಷ್ ದೇವಯ್ಯ, ಕಾರ್ಯದರ್ಶಿ ಅಲ್ಲಾಪಿರ ಕಾರ್ಯಪ್ಪ ಹಾಗೂ ನಿರ್ದೇಶಕರುಗಳಾದ ಮಂಡೇಪAಡ ಸುಗುಣ ಸಚಿನ್, ಮಾಚಿಮಂಡ ಸುದಿನ್ ಗಣಪತಿ, ಮಾಚಿಮಾಡ ವಸಂತ್, ಅಮ್ಮಂಡ ಧನು ಉತ್ತಯ್ಯ, ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ, ಮೊಣ್ಣಿಕಂಡ ರೋಹಿತ್, ಬೋಜಿ ಅಯ್ಯಪ್ಪ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ನಡೆದ ಮನೋರಂಜನಾ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಅವಿನಿ ಪ್ರಾರ್ಥಿಸಿದರು, ಸುವಿನ್ ಗಣಪತಿ ಸ್ವಾಗತಿಸಿ, ಸಂಪತ್‌ದೇವಯ್ಯ ವಂದಿಸಿದರು.