ಗುಡ್ಡೆಹೊಸೂರು, ಆ. ೧೭: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ವತಿಯಿಂದ ನಬಾರ್ಡ್ ಪ್ರಾಯೋಜಿತದಲ್ಲಿ ನಿರ್ಮಿಸಲಾದ ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆ, ಕಚೇರಿ ಮತ್ತು ಸಹಕಾರ ಭವನದ ಉದ್ಘಾಟನೆ ಸಮಾರಂಭ ತಾ.೨೦ ರಂದು ಪೂರ್ವಾಹ್ನ ೧೧ ಗಂಟೆಗೆ ನಡೆಯಲಿದೆ.

ಸಂಘದ ಅಧ್ಯಕ್ಷ ಬಿ.ಸಿ.ಮಾದಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೋದಾಮನ್ನು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮಳಿಗೆ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬೋಸರಾಜು ನೆರವೇರಿಸಲಿದ್ದಾರೆ.

ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಬ್ಯಾಂಕಿAಗ್ ಕೌಂಟರ್, ನಾಮಫಲಕವನ್ನು ಮಡಿಕೇರಿ ವಿಧಾನಸಭಾ ಸದಸ್ಯ ಡಾ. ಮಂಥರ್ ಗೌಡ, ಈ ಲಿಪ್ಟ್ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಭದ್ರತಾಕೊಠಡಿಯನ್ನು ವೀರಾಜಪೇಟೆ ಕ್ಷೇತ್ರದ ಸದಸ್ಯ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ.

ಸಹಕಾರ ಭವನವನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ವೆಂಕಟ್‌ರಾಜ್, ಕೊಡಗು ಸಹಕಾರ ಯೂನಿಯನ್‌ನ ಅಧ್ಯಕ್ಷ ಮನುಮುತ್ತಪ್ಪ, ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು.ವಿ, ಕೊಡಗು ನಿರ್ಮಿತಿ ಕೇಂದ್ರದ ಆರ್.ಟಿ. ಸಚ್ಚಿನ್ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್.ಕೃಷ್ಣಪ್ರಸಾದ್, ಸಹಾಯಕ ನಿಬಂಧಕ ಎಂ.ಈ ಮೋಹನ್ ಮತ್ತು ಸಂಘದ ಎಲ್ಲಾ ನಿರ್ದೇಶಕರು ಭಾಗವಹಿಸಲಿದ್ದಾರೆ.