ಮಡಿಕೇರಿ, ಆ. ೧೭ : ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದ, ಕೊಟ್ಟುಕ ತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ ಕೊಡವ ಚಲನಚಿತ್ರ ‘ಬೇರ್’ (ಖಿhe ಖooಣ) ಕೊಡವ ಸಿನಿಮಾದ ಪೋಸ್ಟರ್ ಹಾಗೂ ಪ್ರೋಮೋ ತಾ. ೧೯ ರಂದು ಬಿಡುಗಡೆಯಾಗಲಿದೆ.
ಅಂದು ಮಧ್ಯಾಹ್ನ ೨ ಗಂಟೆಗೆ ನಗರದ ಪತ್ರಿಕಾ ಭವನದ ಸಭಾಂ ಗಣದಲ್ಲಿ ನಡೆಯಲಿರುವ ಕಾರ್ಯ ಕ್ರಮನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಟ, ನಿರ್ಮಾಪಕ, ನಿರ್ದೇಶಕ, ಸಾಹಿತಿ ಹಾಗೂ ಕೂರ್ಗ್ ಕಾಫಿವುಡ್ ಮೂವಿಸ್‌ನ ಮಾಲೀಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ವಹಿಸಲಿದ್ದಾರೆ.
ಸಿನಿಮಾದ ಪೋಸ್ಟರನ್ನು ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅನಾವರಣಗೊಳಿಸಲಿದ್ದು, ಆಕಾಶ ವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಪ್ರೋಮೋ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಹಿರಿಯ ಕಲಾವಿದೆ ಮಂಡಿರ ಪದ್ಮ ಬೋಪಯ್ಯ ಹಾಗೂ ಚಿತ್ರದ ಕಲಾವಿದರು ಪಾಲ್ಗೊಳ್ಳಲಿದ್ದಾರೆ.