ಮಡಿಕೇರಿ, ಆ. ೧೭: ಭತ್ತದಿಂದ ಭಾಗಶಃ ನಾಟಿ ಮಾಡಿದ ಜಮೀನುಗಳು, ‘ಉಯ್ಯ ಪಾಟ್’ ಹಾಡುವ ಗ್ರಾಮಸ್ಥರು, ತಮ್ಮ ದೈಹಿಕ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿರುವ ಯುವಕರು- ಇದು ಕೊಡಗು ಜಿಲ್ಲೆಯ ಕೆದಮುಳ್ಳೂರು ಗ್ರಾಮದಲ್ಲಿ ಕಂಡು ಬಂದ ದೃಶ್ಯ. ಕೊಡಗಿನಾದ್ಯಂತ, ಭತ್ತದ ನಾಟಿ ಕಾರ್ಯ ಕೇವಲ ಕೃಷಿ ಚಟುವಟಿಕೆಯಲ್ಲ, ಇದು ಒಂದು ದೈವಿಕ ಪ್ರಕ್ರಿಯೆ ಎಂದೇ ಎನ್ನಬಹುದು. ಗದ್ದೆಗಳಲ್ಲಿ ನಾಟಿ ಕಾರ್ಯ ಸಂಪ್ರದಾಯ ಸಹಿತ ಆಗಸ್ಟ್ ತಿಂಗಳಲ್ಲಿ ಮಾಡಲಾಗುತ್ತಿದ್ದು, ಇದು ಕೊಡಗಿನಲ್ಲಿ ಒಂದು ಹಬ್ಬವೇ ಸರಿ. ಧರ್ಮ, ಜಾತಿ, ಪಂಥ, ಜನಾಂಗ ಎಂಬ ಭೇದಭಾವವಿಲ್ಲದೆ, ನಾಟಿ ಕಾರ್ಯವನ್ನು ಎಲ್ಲಾ ಜನಾಂಗದವರು ಸುಸಂಸ್ಕೃತರಾಗಿ ಮಾಡುವದು ಕೊಡಗಿನ ಭೂಮಿಯ ಪದ್ಧತಿ ಎಂದೇ ಎನ್ನಬಹುದು. ಈ ನಾಡಿನ ಪದ್ಧತಿ ವಿಭಿನ್ನವಾಗಿದ್ದು, ಎಲ್ಲಾ ಜನಾಂಗದವರ ಸಾಮರಸ್ಯಕ್ಕೆ ಇಲ್ಲಿಯ ಸಂಸ್ಕೃತಿ ಮೂಲ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಕೆದಮುಳ್ಳೂರಿನಲ್ಲಿ ಮುಲ್ಲೆöÊರೀರ ಕುಟುಂಬದವರ ಗದ್ದೆಯಲ್ಲಿ ತಾ.೧೩ ರಂದು ಇಡೀ ಗ್ರಾಮವೇ ಭತ್ತದ ನಾಟಿ ಕಾರ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ಸಹಿತ ಪಾಲ್ಗೊಂಡರು. ಔತಣಕೂಟದ ನಂತರ, ಮುಲ್ಲೆöÊರೀರ ಕುಟುಂಬ ಬಾಂಧವರು ಸುಮಾರು ಒಂದು ಎಕರೆ ಕೃಷಿ ಭೂಮಿಯಲ್ಲಿ ನಾಟಿ ಕಾರ್ಯದಲ್ಲಿ ಶಾಸ್ತೊçÃಕ್ತವಾಗಿ ಪಾಲ್ಗೊಂಡರು. ಭಾಗಶಃ ನಾಟಿಮಾಡಿದ ಭೂಮಿಯಲ್ಲಿ ಮೊದಲಿಗೆ ನಾಟಿ ಓಟ ಪ್ರಾರಂಭವಾಯಿತು.

ನಾಟಿ ಮಾಡಿದ ಕೃಷಿ ಭೂಮಿಯಲ್ಲಿ ಓಟ ಮಾಡುವದು ಪದ್ಧತಿಯೂ ಹೌದು ಹಾಗೂ ಈ ನಾಟಿ ಓಟದಿಂದ ಉತ್ತಮ ಇಳುವರಿ ದೊರೆಯುತ್ತದೆ ಎಂಬುವದು ಗ್ರಾಮಸ್ಥರು ನಂಬಿಕೆಯೂ ಹೌದು. ಹಳ್ಳಿಯ ಪುರುಷರು ಮೊದಲು ಕೆಸರುಗದ್ದೆ ಓಟದಲ್ಲಿ ಪಾಲ್ಗೊಂಡರೆ ನಂತರ ಮಕ್ಕಳು ಮತ್ತು ಮಹಿಳೆಯರು ಕೂಡ ನಾಟಿ ಓಟದಲ್ಲಿ ಪಾಲ್ಗೊಂಡರು.

ತದನAತರ, ಕೃಷಿಭೂಮಿಯ ಒಂದು ಮೂಲೆಯಲ್ಲಿ ದೇವತೆಗಳಿಗೆ ಅರ್ಪಣೆಗಳನ್ನು ಇಟ್ಟು ಸಾಂಪ್ರದಾಯಿಕ ಉಯ್ಯಾ ಪಾಟ್ ಹಾಡುತ್ತಾ ಪುರುಷರು ಭತ್ತದ ಸಸಿಗಳನ್ನು ಉಳಿದ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕವಾಗಿ ನೆಟ್ಟರು. “ನೈವೇದ್ಯಗಳನ್ನು ಮೊದಲು ಗಣೇಶನಿಗೆ ನೀಡಲಾಗುತ್ತದೆ - ಭತ್ತದ ಜಮೀನನ್ನು ಇಲಿಗಳಿಂದ ರಕ್ಷಿಸಲು ಪ್ರಾರ್ಥಿಸಲಾಗುತ್ತದೆ. ಕಾವೇರಮ್ಮೆ, ಇಗ್ಗುತಪ್ಪ...ಹೀಗೇ ಎಲ್ಲಾ ದೇವಾನು ದೇವತೆಗಳ ಮೊರೆಹೋಗಿ ಗದ್ದೆಯಲ್ಲಿ ಒಳ್ಳೆ ಇಳುವರಿಗಾಗಿ ಉಯ್ಯ ಹಾಡಿನ ರೂಪದಲ್ಲಿ ಕೋರಲಾಗುತ್ತದೆ ಅಲ್ಲದೆ, ಗ್ರಾಮದ ಹಾಗೂ ಗ್ರಾಮಸ್ಥರ ಒಳಿತಿಗಾಗಿ ಪ್ರಾರ್ಥನೆಗಳನ್ನು ನಾಟಿ ಮಾಡುವ ಸಮಯದಲ್ಲಿ ನೆರವೇರಿಸಲಾಗುತ್ತದೆ”, ಎಂದು ಗ್ರಾಮದ ಹಿರಿಯರಾದ ಮುಲ್ಲೆöÊರೀರ ಚೋಂದಮ್ಮ ವಿವರಿಸಿದರು.

ಈ ಎಲ್ಲಾ ನಾಟಿ ಸಂಪ್ರದಾಯದ ನಂತರ ನಾಟಿ ಓಟದ ವಿಜೇತರಿಗೆ ಬಹುಮಾನ ವಿತರಿಸಿ ನೆರೆದ ಎಲ್ಲಾ ಗ್ರಾಮಸ್ಥರಿಗೂ ಪ್ರಸಾದ ಹಂಚಲಾಯಿತು.

ಕೃಷಿ ಆಚರಣೆಗಳು ಜಿಲ್ಲೆಯ ಸಂಸ್ಕೃತಿಯನ್ನು ವ್ಯಕ್ತಪಡಿಸುತ್ತವೆ ಮತ್ತು ಅವುಗಳನ್ನು ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಪೂರ್ವಜರ ಕಾಲದಿಂದ ಅನುಸರಿಸಲಾಗುತ್ತಿದೆ. ಕೆದಮುಳ್ಳೂರು ಗ್ರಾಮದ ಮುಲ್ಲೆöÊರೀರ ಜನಾಂಗವಲ್ಲದೆ, ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಜನರನ್ನೂ ಒಳಗೊಂಡಿದೆ. ೧೯ ನೇ ಶತಮಾನದಿಂದ ಕೊಡಗಿನ ಭೂಮಿಯಲ್ಲಿ ನೆಲೆಸಿರುವ ಈ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಜನರೂ ಕೂಡ ನಾಟಿ ಪದ್ಧತಿ ಅನುಸರಿಸುವದು ಇಲ್ಲಿನ ವಿಶೇಷತೆ ಎಂದೆ ಎನ್ನಬಹುದು. ಈ ಸಮುದಾಯದವರೂ ಕೂಡ ತಮ್ಮ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಸಂಸ್ಕೃತಿ ಸಮೇತ ಆಚರಿಸಿ ಈ ನಾಡಿನ ಪದ್ಧತಿಯನ್ನು ಬೇದಭಾವವಿಲ್ಲದೆ ರಕ್ಷಿಸಿಕೊಂಡು ಬಂದಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ನಾಗರಿಕರು ತಿಳಿಸುವಂತೆ, ಅವರ ಪೂರ್ವಜರ ಕಾಲದಿಂದಲೂ ನಾಟಿ ಸಂಸ್ಕೃತಿಯನ್ನು ಅನುಸರಿಸಲಾಗುತ್ತಿದ್ದು, ಇದು ಈ ಕೊಡಗಿನ ಭೂಮಿಯ ವಿಶೇಷತೆ ಎಂದು ವಿವರಿಸುತ್ತಾರೆ.

-ಪ್ರಜ್ಞಾ ಜಿ.ಆರ್.