ಮಡಿಕೇರಿ, ಆ. ೧೭ : ಆರ್ಥಿಕವಾಗಿ ಹಿಂದುಳಿದ ಕೊಡಗು ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಕಳೆದೆರಡು ವರ್ಷಗಳಿಂದ ಎ.ಕೆ ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ದತ್ತಿನಿಧಿಯಡಿಯಲ್ಲಿ, ದತ್ತಿನಿಧಿಯ ವ್ಯವಸ್ಥಾಪಕ ಟ್ರಸ್ಟಿಗಳಾಗಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ನೀಡುತ್ತಾ ಬರುತ್ತಿದ್ದಾರೆ.

ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಅಂಕಗಳಿಸಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳಿಗೆ ೩ ವರ್ಷಗಳ ಪದವಿ ಶಿಕ್ಷಣಕ್ಕೆ ಪ್ರತಿ ವರ್ಷ ರೂ.೧೦,೦೦೦ ದಂತೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ೨೦೨೧ ರಂದು ಒಟ್ಟು ೪೫ ಮಂದಿಗೆ ಮೊದಲನೆಯ ವರ್ಷದ ವೇತನ, ೨೦೨೨ ರಂದು ೪೫ ಮಂದಿಗೆ ೨ನೇ ವರ್ಷದ ವೇತನ ಸೇರಿದಂತೆ ಹೆಚ್ಚುವರಿ ೨೨ ಮಂದಿಗೆ ೧ನೇ ವರ್ಷದ ವೇತನ ನೀಡಿದ್ದು, ಒಟ್ಟು ೬೭ ವಿದ್ಯಾರ್ಥಿನಿಯರು ವೇತನದ ಫಲಾನುಭವಿಗಳಾದರು. ಈ ಬಾರಿ ಇನ್ನೂ ಹೆಚ್ಚುವರಿ ೨೫ ಮಂದಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಒಟ್ಟು ೯೨ ವಿದ್ಯಾರ್ಥಿನಿಯರು ವೇತನ ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಹಲವು ಸಂಘ ಸಂಸ್ಥೆಗಳ ಪ್ರಮುಖರೂ ಕೈ ಜೋಡಿಸಲಿದ್ದಾರೆ. ಪೊನ್ನಣ್ಣ ಅವರೊಂದಿಗೆ ವಿನೀತ್ ಕಾರ್ಯಪ್ಪ ಮಾಲೀಕತ್ವದ eviಜhಥಿಚಿ.ಛಿom, ಭಟ್ಸ್ ಡೆಂಟಲ್ ಮಾಲೀಕ ಪವನ್ ಬೋಪಣ್ಣ, ಲೀಶರ್ ಎಂಟರ್ಟೈನ್ಮೆAಟ್ ಮಾಲೀಕ ನರೇನ್ ಬೆಳ್ಯಪ್ಪ, ಆಧಾರ್ ಫರ್ನಿಚರ್ ಮಾಲೀಕ ತೇಜ್ ನಂಜಪ್ಪ, ಕೊಡವ ಕ್ಲಾನ್ ನ ಕಿಶೂ ಉತ್ತಪ್ಪ ಅವರುಗಳು ಕೂಡ ವಿದ್ಯಾರ್ಥಿವೇತನಕ್ಕೆ ಸಾಥ್ ನೀಡಲಿದ್ದಾರೆ.

ಪ್ರಥಮ ವರ್ಷ ಪದವಿ ಶಿಕ್ಷಣದ ವೇತನಕ್ಕೆ ಅರ್ಜಿಗಳ ಆಹ್ವಾನ

ಈ ಬಾರಿ ಪದವಿ ಪೂರ್ವ ಶಿಕ್ಷಣ ಮುಗಿಸಿ, ಕೊಡಗಿನಲ್ಲಿಯೇ ಪದವಿ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸುವ ಅಥವಾ ಮುಂದುವರಿಸುತ್ತಿರುವ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿನಿಯರು ತಮ್ಮ ಪೋಷಕರ ಆದಾಯ ದೃಢೀಕರಣ ಪತ್ರ, ದ್ವಿತೀಯ ಪಿ.ಯು.ಸಿ ಅಂಕ ಪಟ್ಟಿಯೊಂದಿಗೆ ಲಿಖಿತ ಅರ್ಜಿಯಲ್ಲಿ ಭಾವಚಿತ್ರ, ತಮ್ಮ ಹೆಸರು, ಪೋಷಕರ ಹೆಸರು, ಫೋನ್ ಸಂಖ್ಯೆ, ವಿಳಾಸ ಹಾಗೂ ವೇತನಕ್ಕೆ ಮನವಿ ಮೂಲಕ ಅರ್ಜಿಗಳನ್ನು ಕಳುಹಿಸಬೇಕು. (ವಿಶೇಷ ಸೂಚನೆ : ಮೇಲೆ ಉಲ್ಲೇಖಿಸಲಾದ ಎಲ್ಲ ದಾಖಲಾತಿಗಳು ಇರತಕ್ಕದ್ದು. ಯಾವುದಾದರೊಂದು ದಾಖಲಾತಿ ಇಲ್ಲದಿದ್ದಲ್ಲಿ ಅಥವಾ ಅರ್ಜಿಯೇ ಇಲ್ಲದೆ ದಾಖಲಾತಿಗಳನ್ನು ಮಾತ್ರ ಕಳುಹಿಸಿದ್ದಲ್ಲಿ, ತಿರಸ್ಕರಿಸಲಾಗುವುದು )

ಎ.ಎಸ್. ಪೊನ್ನಣ್ಣ ಅವರು ೨ ವರ್ಷಗಳ ಹಿಂದೆ ಈ ಸೇವಾ ಕಾರ್ಯವನ್ನು ಆರಂಭಿಸಿದಾಗ ‘ಶಕ್ತಿ’ಯ ಸಹಕಾರ ಬಯಸಿದ್ದರು. ಅರ್ಜಿಗಳ ಆಯ್ಕೆ ಪಾರದರ್ಶಿಕವಾಗಿರಲು ಬಯಸಿದ ಅವರು, ಎಲ್ಲ ಅರ್ಜಿಗಳೂ ‘ಶಕ್ತಿ’ ಕಾರ್ಯಾಲಯಕ್ಕೆ ಕಳುಹಿಸುವಂತೆಯೂ, ಅವುಗಳ ಆಯ್ಕೆಯನ್ನು ಕೂಡ ‘ಶಕ್ತಿ’ ಬಳಗವೇ ಮಾಡುವಂತೆಯೂ ವಿನಂತಿಸಿದ್ದರಿAದ, ಶಕ್ತಿ ಪತ್ರಿಕೆ ಪೂರ್ಣ ಪ್ರಮಾಣದಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿ ರಾಜಕೀಯ, ಧರ್ಮ, ಜಾತಿ ರಹಿತವಾಗಿ ಅರ್ಹ ವಿದ್ಯಾರ್ಥಿನಿಯರನ್ನ ಆಯ್ಕೆ ಮಾಡಿತ್ತು. ಈ ಬಾರಿಯೂ ಪೊನ್ನಣ್ಣ ಅವರು ಅದೇ ಪ್ರಕ್ರಿಯೆ ಬಯಸಿದ್ದಾರೆ.

ಹಾಗಾಗಿ ಅರ್ಜಿಗಳನ್ನು shಚಿಞಣhiಜಚಿiಟಥಿ@ gmಚಿiಟ.ಛಿom ಗೆ ಈ -ಮೇಲ್ ಮೂಲಕ ಅಥವಾ (ಆಡಳಿತಾಧಿಕಾರಿ, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-೫೭೧೨೦೧) ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಿದೆ. ಅರ್ಜಿ ಸಲ್ಲಿಸಲು ತಾ.೨೩ ಕೊನೆಯ ದಿನವಾಗಿದೆ. ಆಯ್ದ ವಿದ್ಯಾರ್ಥಿನಿಯರಿಗೆ ತಾ.೨೬ ರಂದು ಆಯ್ಕೆ ಆಗಿರುವ ಬಗ್ಗೆ ತಿಳಿಸಲಾಗುವುದು. ತಾ.೨೮ ರಂದು ಆಯ್ದ ೨೫ ವಿದ್ಯಾರ್ಥಿನಿಗಳಿಗೆ ಮೊದಲ ವರ್ಷದ ವಿದ್ಯಾರ್ಥಿ ವೇತನ ರೂ.೧೦,೦೦೦ ವನ್ನು ವಿತರಿಸಲಾಗುವುದು.