ಚೆಯ್ಯಂಡಾಣೆ, ಆ. ೧೭: ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಾಫಿ, ಅಡಿಕೆ ಬಾಳೆ ಹಾಗೂ ನಾಟಿ ಮಾಡಿದ ಗದ್ದೆಯನ್ನೇ ತುಳಿದು ನಾಶಪಡಿಸಿದೆ.

ಪಾಲೇಕಂಡ ಕುಮಾರ, ಎಂ. ಉಮೇಶ್, ಮಾಚಯ್ಯ, ರವಿ ಮತಿತ್ತರರ ತೋಟಕ್ಕೆ ಲಗ್ಗೆ ಇಟ್ಟ ೩ ಕಾಡಾನೆಗಳ ಹಿಂಡು ಫಸಲು ಭರಿತ ಕಾಫಿ, ಅಡಿಕೆ, ಬಾಳೆ ಹಾಗೂ ನಾಟಿ ಮಾಡಿದ ಗದ್ದೆಯನ್ನು ತುಳಿದು ನಾಶಪಡಿಸಿವೆ.

ಕೂಡಲೇ ಅರಣ್ಯ ಇಲಾಖೆ ಕಾಡಾನೆ ಕಾರ್ಯಾಚರಣೆ ನಡೆಸಿ ಕಾಡಾನೆ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.