ಮಡಿಕೇರಿ, ಆ. ೧೭: ಮಾಜಿ ಸೈನಿಕರ ಕಲ್ಯಾಣ ಯೋಜನೆಗಳಿಗೆ ಪೂರಕವಾಗಿ ಕೊಡಗು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸೈನಿಕ ಮಂಡಳಿಯನ್ನು ಪುನರ್ ರಚಿಸಲಾಗುತ್ತಿದ್ದು, ಕೊಡಗು ಜಿಲ್ಲಾ ವ್ಯಾಪ್ತಿಯ ಮಾಜಿ ಸೈನಿಕರು ಜಿಲ್ಲಾ ಸೈನಿಕ ಮಂಡಳಿಯಲ್ಲಿ ವೇತನ-ಭತ್ಯೆ ರಹಿತವಾಗಿ, ಸ್ವ-ಇಚ್ಚೆಯಿಂದ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳವರು ಸೆಪ್ಟೆಂಬರ್ ೧ ರೊಳಗೆ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ, ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಚೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ, ದೂ.ಸಂ. ೦೮೨೭೨-೨೨೯೮೬೬ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.