ಸಿದ್ದಾಪುರ, ಆ. ೧೮: ಅರೆಕಾಡು ಗ್ರಾಮದಲ್ಲಿ ಸೆರೆ ಹಿಡಿಯಲು ಗುರುತಿಸಲಾದ ಸಲಗವು ಇನ್ನೂ ಪತ್ತೆ ಆಗಿರುವುದಿಲ.್ಲ ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಂಟಿ ಸಲಗವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹಗಲಿರಳು ಕಾರ್ಯಾಚರಣೆ ನಡೆಸಿದರು ಕೂಡ ಸ್ಥಳೀಯರು ಗುರುತಿಸಿರುವ ಹಾಗೂ ದೇವಪ್ಪ ಎಂಬವರನ್ನು ದಾಳಿ ನಡೆಸಿ ಹತ್ಯೆ ಮಾಡಿದ ಒಂಟಿ ಸಲಗವು ಕಾರ್ಯಾಚರಣೆ ತಂಡಕ್ಕೆ ಸಿಕ್ಕಿಲ್ಲ.
ಇತ್ತೀಚೆಗೆ ದೇವಪ್ಪ ಎಂಬವರನ್ನು ಹತ್ಯೆ ಮಾಡಿದ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ
(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳೆದ ನಾಲ್ಕು ದಿನಗಳಿಂದ ಅರಕಾಡು ಹೊಸ್ಕೇರಿ ಗ್ರಾಮದ ಕಾಫಿ ತೋಟಗಳಲ್ಲಿ ಮೂರು ತಂಡಗಳನ್ನು ರಚಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
ಆದರೆ, ಸಲಗದ ಸುಳಿವು ಪತ್ತೆಯಾಗಿರುವುದಿಲ್ಲ ಹಾಗೂ ಕಾಣಲು ಸಿಗಲಿಲ್ಲ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸಲಾಗಿದೆ. ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಹಾಕಿದ ಬಸವ ಎಂಬ ಕಾಡಾನೆಯು ಅರಕಾಡು ಭಾಗದ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದ್ದು, ಇದನ್ನು ಕೂಡ ಪರಿಶೀಲಿಸಿ ನೋಡಿದಾಗ ಒಂಟಿ ಸಲಗವು ಈ ಆನೆಯೊಂದಿಗೆ ಜೊತೆಯಾಗಿ ಕಂಡುಬAದಿರುವುದಿಲ್ಲ.
ಛಲ ಬಿಡದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂಟಿ ಸಲಗದ ಚಲನವಲನ ಕಂಡುಹಿಡಿಯಲು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದ್ದಾರೆ. ಕಾರ್ಯಾಚರಣೆಯ ತಂಡಕ್ಕೆ ಬೇರೆ ಬೇರೆ ತೋಟಗಳಲ್ಲಿ ಕಾಡಾನೆಗಳು ಕಂಡುಬAದಿದ್ದರೂ ಕೂಡ ಸ್ಥಳೀಯ ಗ್ರಾಮಸ್ಥರು ತಿಳಿಸಿರುವ ಹಾಗೂ ಮಾಹಿತಿ ನೀಡಿದ ಸಲಗ ಸಿಕ್ಕದ ಕಾರಣ ಸಿದ್ದಾಪುರ ಭಾಗದ ಅಮ್ಮತ್ತಿ ಸಮೀಪದ ಬೈರಂಬಾಡ ಭಾಗದಲ್ಲೂ ಕೂಡ ಹುಡುಕಾಟ ನಡೆಸುವ ಸಾಧ್ಯತೆ ಇದೆ.