ಮಡಿಕೇರಿ, ಆ. ೧೮: ನಗರದ ತ್ಯಾಗರಾಜ ನಗರ ಬಡಾವಣೆಯ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಲಾಯಿತು.
ನಗರದಲ್ಲಿ ಬೂತ್ ಸಮಿತಿ ಪ್ರಮುಖರು ಹಾಗೂ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಮನವಿ ಪತ್ರ ನೀಡಿದ ಬೂತ್ ಸಮಿತಿ ಅಧ್ಯಕ್ಷ ಎಂ.ಎA.ಯಾಕುಬ್ ಮಳೆಗಾಲದಲ್ಲಿ ಬೂತ್ ವ್ಯಾಪ್ತಿಯಲ್ಲಿ ಕಾಲುದಾರಿಗೆ ಹಾನಿಯಾಗಿದ್ದು, ತಡೆಗೋಡೆ ನಿರ್ಮಿಸಬೇಕು ಮತ್ತು ವಾರ್ಡ್ನ ಸಮಸ್ಯೆಗಳಿಗೆ ಸ್ಪಂದಿಸಬೇಕೆAದು ಕೋರಿದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಹೇಲ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಇಂಜೀಮ್, ಅಬ್ದುಲ್ ರೆÀಹಮಾನ್, ಕಾರ್ಯಕರ್ತರುಗಳಾದ ಅಲ್ತಾಫ್, ಯೂಹ್ಯ, ಶೌಕತ್ ಆಲಿ, ಶಾಹಿನ್, ಶಮೀನಾ, ಹಾಜಿರ ಮತ್ತಿತರರು ಹಾಜರಿದ್ದರು.